ಸ್ಟಾರ್ ಹೀರೋಗಳನ್ನು ಒಟ್ಟಿಗೆ ತೆರೆಮೇಲೆ ತರೋದು ಎಂದರೆ ನಿಜಕ್ಕೂ ಅದು ದೊಡ್ಡ ಚಾಲೆಂಜ್. ಈಗ ತೆಲುಗಿನ ನಿರ್ದೇಶಕ ಹರೀಶ್ ಶಂಕರ್ ಅವರು ಇಂಥ ಸಹಾಸಕ್ಕೆ ಮುಂದಾಗಿದ್ದಾರೆ. ರಾಮ್ ಚರಣ್, ಪವನ್ ಕಲ್ಯಾಣ್, ಚಿರಂಜೀವಿ ಅವರನ್ನು ಒಟ್ಟಾಗಿ ತೆರೆಮೇಲೆ ತರುವ ಪ್ರಯತ್ನದಲ್ಲಿ ಅವರಿದ್ದಾರೆ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ.
ಹರೀಶ್ ಶಂಕರ್ ಅವರು ‘ಮಿಸ್ಟರ್ ಬಚ್ಚನ್’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ರವಿತೇಜ ಅವರು ಈ ಚಿತ್ರಕ್ಕೆ ಹೀರೋ. ಇದು ಹಿಂದಿಯ ‘ರೈಡ್’ ಚಿತ್ರದಿಂದ ಸ್ಫೂರ್ತಿ ಪಡೆದು ಮಾಡಿದ ಸಿನಿಮಾ. ಈ ಚಿತ್ರ ಆಗಸ್ಟ್ 15ರಂದು ಬಿಡುಗಡೆ ಆಗಲಿದೆ. ಅವರು ಸುದ್ದಿಗೋಷ್ಠಿಯಲ್ಲಿ ಮುಂದಿನ ಸಿನಿಮಾ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
‘ಸಿನಿಮಾಗಳನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಒತ್ತಾಯ ಪೂರ್ವಕವಾಗಿ ಮಾಡಬಾರದು. ಅದಾಗಿ ಅದೇ ಆಗಬೇಕು. ನಾನು ಇಂಡಿಯಾ-ಪಾಕಿಸ್ತಾನ ಬಾರ್ಡರ್ನಲ್ಲಿ ನಡೆವ ಕಥೆ ಬರೆದಿದ್ದೇನೆ. ಅದು ಪಕ್ಕಾ ಲವ್ ಸ್ಟೋರಿ. ಅದನ್ನು ಸಿನಿಮಾ ಮಾಡಿದರೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡಬಹುದು’ ಎಂದಿದ್ದಾರೆ ಅವರು.
‘ನಾನು ಸದ್ಯ ಪವನ್ ಕಲ್ಯಾಣ್, ರಾಮ್ ಚರಣ್ ಹಾಗೂ ಚಿರಂಜೀವಿ ಅವರ ಸಿನಿಮಾದ ಕೆಲಸದಲ್ಲಿ ಬ್ಯುಸಿ ಇದ್ದೇನೆ’ ಎಂದು ಹೇಳಿಕೊಂಡಿದ್ದಾರೆ. ಈ ಸಿನಿಮಾ ಸೆಟ್ಟೇರಲಿದೆ ಎನ್ನುವ ಕಾನ್ಫಿಡೆನ್ಸ್ ಅವರಿಗೆ ಇದೆ. ಪವನ್ ಕಲ್ಯಾಣ್ ಅವರು ಸದ್ಯ ರಾಜಕೀಯದಲ್ಲಿ ಬ್ಯುಸಿ ಇದ್ದಾರೆ. ಅವರು ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಆಗಿದ್ದಾರೆ. ಈ ಮೊದಲು ಒಪ್ಪಿಕೊಂಡ ಸಿನಿಮಾಗಳಿಗೆ ಡೇಟ್ಸ್ ಕೊಡೋಕೆ ಅವರಿಗೆ ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಅವರು ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಾರಾ ಎನ್ನುವ ಪ್ರಶ್ನೆ ಅನೇಕರನ್ನು ಕಾಡಿದೆ.
ಇದನ್ನೂ ಓದಿ: ಒಲಂಪಿಕ್ಸ್ಗಾಗಿ ಪ್ಯಾರಿಸ್ನಲ್ಲಿ ಮೆಗಾ ಫ್ಯಾಮಿಲಿ; ಚಿರಂಜೀವಿ ಕುಟುಂಬದ ಜೊತೆ ಪೋಸ್ ಕೊಟ್ಟ ಪಿವಿ ಸಿಂಧು
ಇನ್ನು, ಚಿರಂಜೀವಿ ಹಾಗೂ ರಾಮ್ ಚರಣ್ ಅವರು ಈ ಮೊದಲು ‘ಆಚಾರ್ಯ’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಫ್ಲಾಪ್ ಎನಿಸಿತ್ತು. ಈಗ ಇಬ್ಬರೂ ಮತ್ತೊಮ್ಮೆ ಒಂದಾಗುತ್ತಿರುವ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.