Trisha: ಚಿರಂಜೀವಿ ನಟನೆಯ ‘ವಿಶ್ವಂಭರ’ ಚಿತ್ರಕ್ಕೆ ನಾಯಕಿ ಆದ ತ್ರಿಷಾ

‘ವಿಶ್ವಂಭರ’ ಸಿನಿಮಾ ಕೆಲಸಗಳಲ್ಲಿ ಚಿರಂಜೀವಿ ಬ್ಯುಸಿ ಆಗಿದ್ದಾರೆ. 68ನೇ ವಯಸ್ಸಿನಲ್ಲೂ ಜಿಮ್ ಮಾಡುತ್ತಾ ಈ ಸಿನಿಮಾಗೆ ರೆಡಿ ಆಗುತ್ತಿದ್ದಾರೆ. ಈ ಸಿನಿಮಾದಲ್ಲಿ ಚಿರಂಜೀವಿ ಮಾಸ್ ಅವತಾರ ತಾಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗ ಚಿರುಗೆ ಜೊತೆಯಾಗಿ ತ್ರಿಷಾ ನಟಿಸುತ್ತಿದ್ದಾರೆ ಎನ್ನುವ ಅಪ್ಡೇಟ್ ಸಿಕ್ಕಿದೆ.

Trisha: ಚಿರಂಜೀವಿ ನಟನೆಯ ‘ವಿಶ್ವಂಭರ’ ಚಿತ್ರಕ್ಕೆ ನಾಯಕಿ ಆದ ತ್ರಿಷಾ
ತ್ರಿಷಾ

Updated on: Feb 06, 2024 | 8:40 AM

ನಟಿ ತ್ರಿಷಾ (Trisha) ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಹಲವು ಸ್ಟಾರ್ ಹೀರೋಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ. ಈಗ ಅವರು ಚಿರಂಜೀವಿ ನಟನೆಯ ‘ವಿಶ್ವಂಭರ’ ಚಿತ್ರಕ್ಕೆ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ಈ ವಿಚಾರವನ್ನು ತಂಡದವರೇ ಅಧಿಕೃತ ಘೋಷಣೆ ಮಾಡಿದ್ದಾರೆ. ತೆರೆಮೇಲೆ ಮತ್ತೊಮ್ಮೆ ಇವರ ಕಾಂಬಿನೇಷನ್​ನ ನೋಡಲು ಫ್ಯಾನ್ಸ್ ಕಾದಿದ್ದಾರೆ. ತ್ರಿಷಾನ ವೆಲ್​ಕಮ್ ಮಾಡಿರೋ ಫೋಟೋ ವೈರಲ್ ಆಗಿದೆ.

ಚಿರಂಜೀವಿ ಅವರು ‘ವಿಶ್ವಂಭರ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. 68ನೇ ವಯಸ್ಸಿನಲ್ಲೂ ಜಿಮ್ ಮಾಡುತ್ತಾ ಈ ಚಿತ್ರಕ್ಕೆ ರೆಡಿ ಆಗುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ಮಾಸ್ ಅವತಾರ ತಾಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗ ಚಿರುಗೆ ಜೊತೆಯಾಗಿ ತ್ರಿಷಾ ನಟಿಸುತ್ತಿದ್ದಾರೆ ಎನ್ನುವ ಅಪ್​ಡೇಟ್ ಸಿಕ್ಕಿದೆ. ‘ಸ್ಟಾಲಿನ್’ (2006) ಸಿನಿಮಾದಲ್ಲಿ ತ್ರಿಷಾ ಹಾಗೂ ಚಿರಂಜೀವಿ ಒಟ್ಟಾಗಿ ತೆರೆ ಹಂಚಿಕೊಂಡಿದ್ದರು. ಈಗ ಎರಡನೇ ಬಾರಿಗೆ ಇಬ್ಬರೂ ಮತ್ತೆ ಒಂದಾಗುತ್ತಿದ್ದಾರೆ.

ತ್ರಿಷಾ ಬಗ್ಗೆ ಮಾಡಲಾದ ಟ್ವೀಟ್​..

‘ವಿಶ್ವಂಭರ’ ಚಿತ್ರದ ಟೀಸರ್ ಸಂಕ್ರಾಂತಿ ಸಂದರ್ಭದಲ್ಲಿ ರಿಲೀಸ್ ಆಗಿತ್ತು. ಈ ಟೀಸರ್​ ಗಮನ ಸೆಳೆದಿತ್ತು. ಟೀಸರ್​ನಲ್ಲಿ ತೋರಿಸಿದ ವಿಶ್ಯುವಲ್ಸ್​ಗೆ ಮೆಚ್ಚುಗೆ ಸಿಕ್ಕಿತ್ತು. ಯುವಿ ಕ್ರಿಯೇಷನ್ಸ್ ಈ ಚಿತ್ರವನ್ನು ದೊಡ್ಡ ಬಜೆಟ್​ನಲ್ಲಿ ಸಿದ್ಧಪಡಿಸುತ್ತಿದೆ. ಚಿರಂಜೀವಿ ವೃತ್ತಿ ಬದುಕಲ್ಲೇ ಅತಿ ದೊಡ್ಡ ಬಜೆಟ್​ನ ಸಿನಿಮಾ ಇದಾಗಲಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರ ಮುಂದಿನ ವರ್ಷ ಜನವರಿ 10ರಂದು ರಿಲೀಸ್ ಆಗಲಿದೆ. ಇದು ಸಂಕ್ರಾಂತಿ ಸಂದರ್ಭದಲ್ಲಿ ರಿಲೀಸ್ ಆಗುತ್ತಿರುವುದರಿಂದ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ: ವಿಚ್ಛೇದನದ ಬಳಿಕ ಮತ್ತೆ ನಟನೆಗೆ ಮರಳಿದ ಚಿರಂಜೀವಿ ಮನೆ ಮಗಳು ನಿಹಾರಿಕಾ ಕೊನಿಡೆಲಾ

ಚಿರಂಜೀವಿ ನಟನೆಯ ‘ಭೋಲಾ ಶಂಕರ್’ ಸಿನಿಮಾ ಕಳೆದ ವರ್ಷ ರಿಲೀಸ್ ಆಯಿತು. ಈ ಸಿನಿಮಾ ಹೆಚ್ಚು ಸದ್ದು ಮಾಡಲೇ ಇಲ್ಲ. ಈಗ ಅವರು ‘ವಿಶ್ವಂಭರ’ ಚಿತ್ರದ ಮೂಲಕ ಗೆಲುವು ಕಾಣುವ ನಿರೀಕ್ಷೆಯಲ್ಲಿ ಇದ್ದಾರೆ. ತ್ರಿಷಾ ಅವರು ದಕ್ಷಿಣ ಭಾರತದ ಬ್ಯುಸಿ ಹೀರೋಯಿನ್​ಗಳಲ್ಲಿ ಒಬ್ಬರಾಗಿದ್ದಾರೆ. ಅವರು ಈಗಾಗಲೇ ‘ರಾಮ್’, ‘ಐಡೆಂಟಿಟಿ’ ಹೆಸರಿನ ಮಲಯಾಳಂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ತಮಿಳಿನ ‘ಥಗ್​ ಲೈಫ್’ ಚಿತ್ರಕ್ಕೆ ಅವರು ನಾಯಕಿ. ಹೀಗಿರುವಾಗಲೇ ಅವರಿಗೆ ಹೊಸ ಆಫರ್ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:39 am, Tue, 6 February 24

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us