AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯ್ ಬಗ್ಗೆ ಸ್ಟಾಲಿನ್ ಮಾತು, ವೈರಲ್ ಆಗುತ್ತಿದೆ ಹಳೆ ವಿಡಿಯೋ

Thalapathy Vijay: ಚುನಾವಣೆಗೆ ಮುಂಚೆ, ಆಡಳಿತದಲ್ಲಿದ್ದ ಡಿಎಂಕೆ ಪಕ್ಕಾ ಚುನಾವಣೆ ಗೆಲ್ಲುತ್ತದೆ ಎನ್ನಲಾಗುತ್ತಿತ್ತು. ಎಐಎಡಿಎಂಕೆಗೂ ಅವಕಾಶಗಳಿವೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಸ್ವತಃ ಸಿಎಂ ಸ್ಟಾಲಿನ್ ಸಹ ಈ ಬಾರಿ ವಿಜಯ ಖಾತ್ರಿ ಎಂಬ ಭರವಸೆಯಲ್ಲಿದ್ದರು, ಆದರೆ ವಿಜಯ್ ಭರ್ಜರಿ ಹೊಡೆತ ನೀಡಿದರು. ಅದರ ಬೆನ್ನಲ್ಲೆ ಇದೀಗ ಸ್ಟಾಲಿನ್ ಮತ್ತು ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರ ಹಳೆಯ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ.

ವಿಜಯ್ ಬಗ್ಗೆ ಸ್ಟಾಲಿನ್ ಮಾತು, ವೈರಲ್ ಆಗುತ್ತಿದೆ ಹಳೆ ವಿಡಿಯೋ
Thalapathy Vijay
ಮಂಜುನಾಥ ಸಿ.
|

Updated on: May 10, 2026 | 7:23 PM

Share

ದಳಪತಿ ವಿಜಯ್ (Thalapathy Vijay) ತಮಿಳುನಾಡಿನ ಸಿಎಂ ಆಗಿದ್ದಾರೆ. ಡಿಎಂಕೆ, ಎಐಎಡಿಎಂಕೆಗಳ ಕಪಿಮುಷ್ಠಿಯಿಂದ ಸಿಎಂ ಸ್ಥಾನವನ್ನು ಕಸಿದುಕೊಂಡಿದ್ದಾರೆ. ಆರು ದಶಕಗಳ ಬಳಿಕ ಮೊದಲ ಬಾರಿಗೆ ಈ ಎರಡೂ ಪಕ್ಷಗಳ ಹೊರತಾಗಿ ಮೂರನೇ ಪಕ್ಷವೊಂದು ಸರ್ಕಾರ ರಚಿಸಿದೆ, ಅದುವೇ ವಿಜಯ್ ಅವರ ಟಿವಿಕೆ ಪಕ್ಷ. ಚುನಾವಣೆಗೆ ಮುಂಚೆ, ಆಡಳಿತದಲ್ಲಿದ್ದ ಡಿಎಂಕೆ ಪಕ್ಕಾ ಚುನಾವಣೆ ಗೆಲ್ಲುತ್ತದೆ ಎನ್ನಲಾಗುತ್ತಿತ್ತು. ಎಐಎಡಿಎಂಕೆಗೂ ಅವಕಾಶಗಳಿವೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಸ್ವತಃ ಸಿಎಂ ಸ್ಟಾಲಿನ್ ಸಹ ಈ ಬಾರಿ ವಿಜಯ ಖಾತ್ರಿ ಎಂಬ ಭರವಸೆಯಲ್ಲಿದ್ದರು, ಆದರೆ ವಿಜಯ್ ಭರ್ಜರಿ ಹೊಡೆತ ನೀಡಿದರು. ಅದರ ಬೆನ್ನಲ್ಲೆ ಇದೀಗ ಸ್ಟಾಲಿನ್ ಮತ್ತು ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರ ಹಳೆಯ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ.

ಸ್ಟಾಲಿನ್ ಅವರು ಸಿಎಂ ಆಗಿದ್ದಾಗೊಮ್ಮೆ ಖಾಸಗಿ ಚಾನೆಲ್ ಒಂದರಲ್ಲಿ ವಿದ್ಯಾರ್ಥಿಗಳೊಡನೆ ಸಂವಾದ ನಡೆಸಿದ್ದರು. ಆಗ ವಿದ್ಯಾರ್ಥಿನಿ ಒಬ್ಬಾಕೆ, ನೀವು ಸಿನಿಮಾಗಳನ್ನು ನೋಡುತ್ತೀರ, ನೋಡುತ್ತೀರಾದರೆ ನಿಮಗೆ ಯಾವ ನಟ ಇಷ್ಟ ಎಂದು ಕೇಳುತ್ತಾರೆ. ಅದಕ್ಕೆ ಸಿಎಂ ಸ್ಟಾಲಿನ್, ‘ನಾನು ಸಿನಿಮಾಗಳನ್ನು ನೋಡುತ್ತೇನೆ. ಒಳ್ಳೆಯ ಸಿನಿಮಾ ಎಂದಾದರೆ ಸಮಯ ಮಾಡಿಕೊಂಡು ನೋಡುತ್ತೇನೆ. ನನಗೆ ಇಷ್ಟವಾದ ಸ್ಟೈಲ್ ಆದ ನಟ ರಜನೀಕಾಂತ್, ಯುವಕರನ್ನು ಆಕರ್ಷಿಸುವಂಥಹಾ ನಟ ವಿಜಯ್ ಸಹ ಇಷ್ಟ. ನವರಸಗಳ ನಟ ಅಜಿತ್ ಅವರೂ ಸಹ ನನಗೆ ಇಷ್ಟವಾದ ನಟ’ ಎಂದಿದ್ದರು.

ಸ್ಟಾಲಿನ್ ಅವರಿಗೆ ವಿಜಯ್ ಇಷ್ಟವಾದ ನಟ ಆಗಿದ್ದರು, ಆದರೆ ತಮ್ಮ ಇಷ್ಟದ ನಟನೇ ಈಗ ತಮ್ಮ ಪಕ್ಷಕ್ಕೆ ಹೀನಾಯ ಸೋಲು ಕಾಣಿಸಿದ್ದಾರೆ. ಸ್ಟಾಲಿನ್ ಅವರು ಕಾರ್ಯಕ್ರಮವೊಂದರಲ್ಲಿ ವಿಜಯ್ ಅವರನ್ನು ಭೇಟಿ ಆಗಿ, ಹಸ್ತಲಾಘವ ಮಾಡುತ್ತಿರುವ ಹಳೆಯ ವಿಡಿಯೋ ಒಂದು ಸಹ ಇದೇ ಸಮಯದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ:ದಳಪತಿ ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​.ಡಿ. ಕುಮಾರಸ್ವಾಮಿ: ಕಾರಣ ಇಲ್ಲಿದೆ

ಸ್ಟಾಲಿನ್ ಅವರ ಪುತ್ರ, ನಟ, ಮಾಜಿ ಸಚಿವ ಉದಯ ನಿಧಿ ಸ್ಟಾಲಿನ್ ಅವರು ವಿಜಯ್ ಬಗ್ಗೆ ಮಾತನಾಡಿದ್ದ ವಿಡಿಯೋ ಒಂದು ಸಹ ಇದೀಗ ವೈರಲ್ ಆಗುತ್ತಿದೆ. ಅದರಲ್ಲಿ ಉದಯನಿಧಿ ಅವರು ವಿಜಯ್ ಅವರೊಟ್ಟಿಗಿನ ತಮ್ಮ ಗೆಳೆತನದ ಬಗ್ಗೆ ಮಾತನಾಡಿದ್ದಾರೆ. ‘ನಾನು ಅವರನ್ನು ಭೇಟಿಯಾಗಿ ಸಾಕಷ್ಟು ಸಮಯ ಆಯ್ತು, ಹೊಸ ವರ್ಷಕ್ಕೆ ಭೇಟಿ ಆಗಿದ್ದೆ. ವಿಜಯ್ ಅವರು ಸುಲಭವಾಗಿ ಯಾರನ್ನೂ ತಮ್ಮ ಹತ್ತಿರದ ಸರ್ಕಲ್​​ಗೆ ಸೇರಿಸಿಕೊಳ್ಳುವುದಿಲ್ಲ. ಸೇರಿಸಿಕೊಂಡರೆಂದರೆ ಅವರು ಅತ್ಯಾಪ್ತ ಸ್ನೇಹಿತರಾದಂತೆ. ನಾನು ಮುಂಚೆ ಅವರ ಬಹಳ ಆತ್ಮೀಯ ಸ್ನೇಹಿತನಾಗಿದ್ದೆ ಆದರೆ ಆ ಬಳಿಕ ನನಗೂ ಅವರಿಗೂ ತುಸು ಮುನಿಸುಗಳು ಏರ್ಪಟ್ಟಿತು’ ಎಂದಿದ್ದಾರೆ.

‘ಕೆಲವರು ನನ್ನ ಬಗ್ಗೆ ಅವರ ಬಳಿ, ಅವರ ಬಗ್ಗೆ ನನ್ನ ಬಳಿ ಚಾಡಿಗಳನ್ನು ಹೇಳಿದ್ದರು. ಇದರಿಂದ ನಮ್ಮ ಗೆಳೆತನದಲ್ಲಿ ಬಿರುಕು ಬಿಟ್ಟತು. ಬಳಿಕ ಒಂದು ದಿನ ನಾನೇ ಹೋಗಿ ಅವರಿಗೆ ಪರಿಸ್ಥಿತಿ ವಿವರಿಸಿದೆ. ಬಳಿಕ ಎಲ್ಲವೂ ತಿಳಿ ಆಯ್ತು. ಆಗೊಮ್ಮೆ, ಈಗೊಮ್ಮೆ ನಾವು ಭೇಟಿ ಆಗುತ್ತೇವೆ. ನನ್ನನ್ನು ಆಗಾಗ್ಗೆ ಮನೆಗೆ ಅವರು ಆಹ್ವಾನಿಸುತ್ತಾರೆ, ಆದರೆ ಭೇಟಿ ಆಗಿ ಸಾಕಷ್ಟು ದಿನಗಳಾದವು’ ಎಂದಿದ್ದರು. ಈ ವಿಡಿಯೋ ಸಹ ವೈರಲ್ ಆಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​
ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​