AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಾಕ್​​ಟೇಲ್ 2’: ಕೃತಿಯೇ ಎಲ್ಲ, ರಶ್ಮಿಕಾ-ಶಾಹಿದ್ ಲೆಕ್ಕಕ್ಕಿಲ್ಲ

Cocktail 2 movie: ರಶ್ಮಿಕಾ ಮಂದಣ್ಣ, ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ನಟಿಸಿರುವ ‘ಕಾಕ್​​ಟೇಲ್ 2’ ಹಿಂದಿ ಸಿನಿಮಾ ಇಂದು (ಜೂನ್ 19) ಬಿಡುಗಡೆ ಆಗಿದೆ. ಭಾರಿ ಬಜೆಟ್​​ನಲ್ಲಿ ನಿರ್ಮಿಸಿ, ಭಾರಿ ಪ್ರಚಾರದೊಂದಿಗೆ ಸಿನಿಮಾ ಬಿಡುಗಡೆ ಆಗಿದೆ. ಆದರೆ ಮೊದಲ ದಿನವೇ ಸಿನಿಮಾಕ್ಕೆ ಭರಪೂರ ಋಣಾತ್ಮಕ ವಿಮರ್ಶೆಗಳು ಎದುರಾಗಿವೆ. ಸಿನಿಮಾನಲ್ಲಿ ಗ್ಲಾಮರ್ ಹೊರತಾಗಿ ಇನ್ನೇನೂ ಇಲ್ಲ ಎಂದು ನೆಟ್ಟಿಗರು ಟೀಕೆ ಮಾಡಿದ್ದಾರೆ. ಕೆಲವರಂತೂ ಇದೊಂದು ‘ಅನವಶ್ಯಕ’ ಸೀಕ್ವೆಲ್ ಎಂದು ಸಹ ಕರೆದಿದ್ದಾರೆ.

‘ಕಾಕ್​​ಟೇಲ್ 2’: ಕೃತಿಯೇ ಎಲ್ಲ, ರಶ್ಮಿಕಾ-ಶಾಹಿದ್ ಲೆಕ್ಕಕ್ಕಿಲ್ಲ
Cocktail2
ಮಂಜುನಾಥ ಸಿ.
|

Updated on: Jun 19, 2026 | 4:55 PM

Share

ರಶ್ಮಿಕಾ ಮಂದಣ್ಣ (Rashmika Mandanna), ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ನಟಿಸಿರುವ ‘ಕಾಕ್​​ಟೇಲ್ 2’ ಹಿಂದಿ ಸಿನಿಮಾ ಇಂದು (ಜೂನ್ 19) ಬಿಡುಗಡೆ ಆಗಿದೆ. ಭಾರಿ ಬಜೆಟ್​​ನಲ್ಲಿ ನಿರ್ಮಿಸಿ, ಭಾರಿ ಪ್ರಚಾರದೊಂದಿಗೆ ಸಿನಿಮಾ ಬಿಡುಗಡೆ ಆಗಿದೆ. ಆದರೆ ಮೊದಲ ದಿನವೇ ಸಿನಿಮಾಕ್ಕೆ ಭರಪೂರ ಋಣಾತ್ಮಕ ವಿಮರ್ಶೆಗಳು ಎದುರಾಗಿವೆ. ಸಿನಿಮಾನಲ್ಲಿ ಗ್ಲಾಮರ್ ಹೊರತಾಗಿ ಇನ್ನೇನೂ ಇಲ್ಲ ಎಂದು ನೆಟ್ಟಿಗರು ಟೀಕೆ ಮಾಡಿದ್ದಾರೆ. ಕೆಲವರಂತೂ ಇದೊಂದು ‘ಅನವಶ್ಯಕ’ ಸೀಕ್ವೆಲ್ ಎಂದು ಸಹ ಕರೆದಿದ್ದಾರೆ.

ಸಿನಿಮಾ ನೋಡಿದ ಹಲವಾರು ಮಂದಿ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದು, ಬಹುತೇಕರು ಸಿನಿಮಾ ಚೆನ್ನಾಗಿಲ್ಲವೆಂದೇ ಹೇಳಿದ್ದಾರೆ. ಅದರಲ್ಲೂ ರಶ್ಮಿಕಾ ನಟನೆ ನಿರೀಕ್ಷಿತ ಮಟ್ಟದಲ್ಲಿಲ್ಲವೆಂದು, ರಶ್ಮಿಕಾರನ್ನು ತಪ್ಪು ಪಾತ್ರಕ್ಕೆ ಹಾಕಿಕೊಳ್ಳಲಾಗಿದೆ ಎಂದಿದ್ದಾರೆ. ವಿಶ್ವಜಿತ್ ಪಟೇಲ್ ಎಂಬುವರು ಟ್ವೀಟ್ ಮಾಡಿ, ‘ಈ ಸಿನಿಮಾ ಒಂದು ಕೆಟ್ಟ ಕನಸಿನಂತಿದೆ. ಆತ್ಮವೇ ಇಲ್ಲದ ಸೀಕ್ವೆಲ್ (ಎರಡನೇ ಭಾಗ)ಕ್ಕೆ ಇದೊಂದು ಒಳ್ಳೆಯ ಉದಾಹರಣೆ. ಇದೊಂದು ಬೋರು ಹೊಡೆಸುವ, ಟೊಳ್ಳಾದ ಅನುಭವ ನೀಡುವ ಸಿನಿಮಾ ಎಂದಿದ್ದಾರೆ. ರಶ್ಮಿಕಾ ನಟನೆಯನ್ನು ಟೀಕಿಸಿರುವ ವಿಶ್ವಜಿತ್, ರಶ್ಮಿಕಾರ ಹಿಂದಿ ಸಹ ಬಲು ಕೆಟ್ಟದಾಗಿದೆ’ ಎಂದಿದ್ದಾರೆ.

ಮಿಸ್ಟರ್ ಎಸ್​​ಪಿ ಎಂಬುವರು ಟ್ವೀಟ್ ಮಾಡಿ ಸಿನಿಮಾ ಚೆನ್ನಾಗಿದೆ ಎಂದಿದ್ದಾರಾದರೂ ರಶ್ಮಿಕಾರ ನಟನೆ ಕೆಟ್ಟದಾಗಿದೆ ಎಂದಿದ್ದಾರೆ. ಸಿನಿಮಾ ಸ್ಟೈಲಿಷ್ ಆಗಿದೆ, ದೃಶ್ಯಗಳು ರಿಚ್ ಆಗಿವೆ. ಹಾಡುಗಳು, ಸಂಗೀತ ಚೆನ್ನಾಗಿದೆ. ಕೆಲವು ಕಡೆ ಮೆಲೋಡ್ರಾಮಾ ಚೆನ್ನಾಗಿದೆ ಎಂದಿದ್ದಾರೆ. ಆದರೆ ರಶ್ಮಿಕಾ ನಟನೆ ಚೆನ್ನಾಗಿಲ್ಲ, ಅವರ ಪಾತ್ರ ಪೋಷಣೆ ಚೆನ್ನಾಗಿಲ್ಲ. ಅವರ ಸಂಭಾಷಣೆ ಬಲು ನಾಟಕೀಯವಾಗಿದೆ ಎಂದಿದ್ದಾರೆ.

ನಿತೀಷ್ ಶಾ ಎಂಬುವರು ಟ್ವೀಟ್ ಮಾಡಿ, ‘ತು ಜೂಟಿ ಮೇ ಮಕ್ಕಾರ್’ ಸಿನಿಮಾದ ಒಂದು ದೃಶ್ಯವನ್ನು ಇರಿಸಿಕೊಂಡು ಪೂರ್ತಿ ಸಿನಿಮಾವನ್ನು ಮಾಡಿದಂತೆ ‘ಕಾಕ್​​ಟೇಲ್ 2’ ಭಾಸವಾಗುತ್ತದೆ. ಸಿನಿಮಾದ ತುಂಬ ಬಹಳ ಅನವಶ್ಯಕ ದೃಶ್ಯಗಳು ಇವೆ. ಸಿನಿಮಾದ ಎರಡನೇ ಅರ್ಧವಂತೂ ಪ್ರೇಕ್ಷಕನ ತಾಳ್ಮೆಯನ್ನು ಪರೀಕ್ಷೆ ಮಾಡುತ್ತದೆ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮೈತ್ರಿ ಕುಸ್ತಿ? ರೇವಣ್ಣಗೆ ಮಾತಾಡೋ ಅಧಿಕಾರವಿಲ್ಲ: ಅಶೋಕ್ ತಿರುಗೇಟು
ಮೈತ್ರಿ ಕುಸ್ತಿ? ರೇವಣ್ಣಗೆ ಮಾತಾಡೋ ಅಧಿಕಾರವಿಲ್ಲ: ಅಶೋಕ್ ತಿರುಗೇಟು
ಪತ್ನಿ ಸಮೇತ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಸಿಎಂ ಡಿ.ಕೆ. ಶಿವಕುಮಾರ್
ಪತ್ನಿ ಸಮೇತ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಸಿಎಂ ಡಿ.ಕೆ. ಶಿವಕುಮಾರ್
ದಲಿತರ ಮೇಲೆ ದಬ್ಬಾಳಿಕೆ ಆರೋಪ: ಗ್ರಾಮದ ರಸ್ತೆ ಬಂದ್​​ ಮಾಡಿ ಪ್ರತಿಭಟನೆ
ದಲಿತರ ಮೇಲೆ ದಬ್ಬಾಳಿಕೆ ಆರೋಪ: ಗ್ರಾಮದ ರಸ್ತೆ ಬಂದ್​​ ಮಾಡಿ ಪ್ರತಿಭಟನೆ
ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದವ‌ ಕ್ಷಣ ಮಾತ್ರದಲ್ಲಿ ಸಾವು!
ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದವ‌ ಕ್ಷಣ ಮಾತ್ರದಲ್ಲಿ ಸಾವು!
ನೀಟ್ ಪರೀಕ್ಷೆಗೆ ಇನ್ನೊಂದೇ ದಿನ ಬಾಕಿ; ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ
ನೀಟ್ ಪರೀಕ್ಷೆಗೆ ಇನ್ನೊಂದೇ ದಿನ ಬಾಕಿ; ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ
JDS ಶಾಸಕರ ಅಡ್ಡಮತದಾನದ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದೇನು ನೋಡಿ
JDS ಶಾಸಕರ ಅಡ್ಡಮತದಾನದ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದೇನು ನೋಡಿ
ಬಿಗ್ ಬಾಸ್ ಕಾಂಪಿಟೇಷನ್​ ವಿಡಿಯೋ ಕಳುಹಿಸಲು ಕೊನೆಯ ದಿನಾಂಕ ತಿಳಿಸಿದ ಕಲರ್ಸ್
ಬಿಗ್ ಬಾಸ್ ಕಾಂಪಿಟೇಷನ್​ ವಿಡಿಯೋ ಕಳುಹಿಸಲು ಕೊನೆಯ ದಿನಾಂಕ ತಿಳಿಸಿದ ಕಲರ್ಸ್
ತಾಯಿ ಆನೆ ಮಡಿಲಲ್ಲಿ ಮಲಗಿದ್ದ ಮರಿಗಳ ಕ್ಯೂಟ್ ದೃಶ್ಯ ವೈರಲ್
ತಾಯಿ ಆನೆ ಮಡಿಲಲ್ಲಿ ಮಲಗಿದ್ದ ಮರಿಗಳ ಕ್ಯೂಟ್ ದೃಶ್ಯ ವೈರಲ್
ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ದುರಂತ: ಬಿಹಾರ, ತಮಿಳುನಾಡಿನ ಇಬ್ಬರು ನಾಪತ್ತೆ
ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ದುರಂತ: ಬಿಹಾರ, ತಮಿಳುನಾಡಿನ ಇಬ್ಬರು ನಾಪತ್ತೆ
ಮೂಗು ಹೇಳುತ್ತೆ ನಿಮ್ಮ ವ್ಯಕ್ತಿತ್ವ! ಸಾಮುದ್ರಿಕ ಶಾಸ್ತ್ರ ಹೇಳೋದೇನು ನೋಡಿ
ಮೂಗು ಹೇಳುತ್ತೆ ನಿಮ್ಮ ವ್ಯಕ್ತಿತ್ವ! ಸಾಮುದ್ರಿಕ ಶಾಸ್ತ್ರ ಹೇಳೋದೇನು ನೋಡಿ