ಸೋಪಿಗೆ ಪೂಜೆ ಮಾಡಿ ಕ್ಷಮೆ ಕೇಳಿದ ಖ್ಯಾತ ಹಾಸ್ಯನಟ ಆಲಿ

Comedian Ali: ಗರ್ ಸೋಪಿನ ಜಾಹೀರಾತುಗಳು ಸಾಮಾಜಿಕ ಜಾಲತಾಣದಲ್ಲಿ ತುಂಬಿ ಹೋಗಿವೆ. ಸ್ಟಾರ್ ನಟರಲ್ಲದ ಆದರೆ ಜನಪ್ರಿಯತೆ ಹೊಂದಿರುವ ನಟ-ನಟಿಯರು ಹಲವಾರು ಮಂದಿ ಈ ಗರ್ ಸೋಪಿನ ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಈ ಸೋಪಿನಿಂದ ಕಪ್ಪಗಿರುವ ದೇಹದ ಬಣ್ಣ ಬಿಳಿ ಆಗುತ್ತದೆ ಎಂಬುದು ಈ ಸೋಪು ಕಂಪೆನಿಯ ವಾದ. ಆದರೆ ಇದೇ ಸೋಪಿನ ಜಾಹೀರಾತಿನಲ್ಲಿ ನಟಿಸಿ ತೆಲುಗಿನ ಬಲು ಜನಪ್ರಿಯ ಹಾಸ್ಯನಟರೊಬ್ಬರು ವಿವಾದಕ್ಕೆ ಸಿಲುಕಿದ್ದಾರೆ. ಬಳಿಕ ಕ್ಷಮೆಯನ್ನೂ ಕೋರಿದ್ದಾರೆ.

ಸೋಪಿಗೆ ಪೂಜೆ ಮಾಡಿ ಕ್ಷಮೆ ಕೇಳಿದ ಖ್ಯಾತ ಹಾಸ್ಯನಟ ಆಲಿ
Comedian Ali

Updated on: May 13, 2026 | 10:29 PM

ಗರ್ ಸೋಪಿನ ಜಾಹೀರಾತುಗಳು ಸಾಮಾಜಿಕ ಜಾಲತಾಣದಲ್ಲಿ (Social Media) ತುಂಬಿ ಹೋಗಿವೆ. ಸ್ಟಾರ್ ನಟರಲ್ಲದ ಆದರೆ ಜನಪ್ರಿಯತೆ ಹೊಂದಿರುವ ನಟ-ನಟಿಯರು ಹಲವಾರು ಮಂದಿ ಈ ಗರ್ ಸೋಪಿನ ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಈ ಸೋಪಿನಿಂದ ಕಪ್ಪಗಿರುವ ದೇಹದ ಬಣ್ಣ ಬಿಳಿ ಆಗುತ್ತದೆ ಎಂಬುದು ಈ ಸೋಪು ಕಂಪೆನಿಯ ವಾದ. ಆದರೆ ಇದೇ ಸೋಪಿನ ಜಾಹೀರಾತಿನಲ್ಲಿ ನಟಿಸಿ ತೆಲುಗಿನ ಬಲು ಜನಪ್ರಿಯ ಹಾಸ್ಯನಟರೊಬ್ಬರು ವಿವಾದಕ್ಕೆ ಸಿಲುಕಿದ್ದಾರೆ. ಬಳಿಕ ಕ್ಷಮೆಯನ್ನೂ ಕೋರಿದ್ದಾರೆ.

ಮೊಹಮ್ಮದ್ ಅಲಿ ಅಲಿಯಾಸ್ ಆಲಿ, ತೆಲುಗು ಚಿತ್ರರಂಗದ ಬಲು ಜನಪ್ರಿಯ ಹಾಸ್ಯನಟ. ಬ್ರಹ್ಮಾನಂದಂ ಬಳಿಕ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಹಾಸ್ಯನಟರೂ ಹೌದು ಆಲಿ. ಇತ್ತೀಚೆಗೆ ಇವರು ನಟಿಸಿರುವ ಗರ್ ಸೋಪಿನ ಜಾಹೀರಾತೊಂದು ಬಿಡುಗಡೆ ಆಗಿತ್ತು. ಜಾಹೀರಾತಿನಲ್ಲಿ ಆಲಿ, ಗರ್ ಸೋಪಿಗೆ ಪೂಜೆ ಮಾಡುತ್ತಿರುವ ದೃಶ್ಯವಿತ್ತು. ಹೀಗೆ ಪೂಜೆ ಮಾಡುವ ವೇಳೆ ಆಲಿ ಲಕ್ಷ್ಮಿ ದೇವಿಯ ಕುರಿತು ಹಾಡನ್ನು ಹಾಡುತ್ತಿದ್ದರು. ಅದೀಗ ವಿವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ:ತ್ರಿಶಾ ನಟನೆಯ ‘ಕರುಪ್ಪು’ ಸಿನಿಮಾಗೆ ವಿಶೇಷ ಅನುಮತಿ ನೀಡಿದ ಸಿಎಂ ವಿಜಯ್

ಆಲಿ ಅವರು ‘ದೇವುಡು ಚೇಸಿನ ಮನುಷುಲು’ ಸಿನಿಮಾನಲ್ಲಿ ಲಕ್ಷ್ಮಿ ದೇವಿನ ಅಪ್ಪಟ ಭಕ್ತನ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾನಲ್ಲಿ ಅವರು ಲಕ್ಷ್ಮಿ ದೇವಿಯ ಪೂಜಿಸುವಾಗ ಹಾಡೊಂದನ್ನು ಹಿನ್ನೆಲೆಯಲ್ಲಿ ಬಳಸಲಾಗಿತ್ತು. ಆ ಹಾಡು, ಆ ದೃಶ್ಯ ಮತ್ತು ಆಲಿ ನಟಿಸಿದ್ದ ಲಕ್ಷ್ಮಿದೇವಿಯ ಭಕ್ತನ ಪಾತ್ರ ಸಖತ್ ಹಿಟ್ ಆಗಿತ್ತು. ಅದೇ ಕಾರಣಕ್ಕೆ ಆಲಿ ಅವರು ಸೋಪಿನ ಜಾಹೀರಾತಿನಲ್ಲಿ ಅದನ್ನೇ ರೀ ಕ್ರಿಯೇಟ್ ಮಾಡಿದ್ದರು. ಆದರೆ ಹಿಂದೂಪರ ಸಂಘಟನೆಗಳ ಕೆಲ ಸದಸ್ಯರು, ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ್ದು, ಸೋಪಿನ ಪೂಜೆಗೆ ಲಕ್ಷ್ಮಿ ದೇವಿಯ ಹಾಡು ಬಳಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಇದೀಗ ವಿಡಿಯೋ ಹಂಚಿಕೊಂಡಿರುವ ನಟ ಆಲಿ, ತಮ್ಮ ಕೃತ್ಯಕ್ಕೆ ಕ್ಷಮೆ ಕೇಳಿದ್ದಾರೆ. ‘ಕಂಪೆನಿಯವರು ಹೇಳಿದ್ದಕ್ಕ ನಾನು ನನ್ನದೇ ಹಳೆಯ ಸಿನಿಮಾದ ಬಿಟ್ ಅನ್ನು ತುಸು ಬದಲಾಯಿಸಿ ಮಾಡಿದೆ. ಆದರೆ ಜಾಹೀರಾತು ನೋಡಿದ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಕೂಡಲೇ ಆ ಜಾಹೀರಾತನ್ನು ಡಿಲೀಟ್ ಮಾಡಿದ್ದೇವೆ. ಕಂಪೆನಿ ಸಹ ಅದನ್ನು ಡಿಲೀಟ್ ಮಾಡಿದೆ. ಯಾರಿಗಾದರೂ ಆ ಜಾಹೀರಾತಿನಿಂದ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇವೆ’ ಎಂದಿದ್ದಾರೆ ಆಲಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:29 pm, Wed, 13 May 26

Follow Us