‘ಇದು ಕೊನೆಯ ದಿನದ ಶೂಟಿಂಗ್’​; ಕಾಮಿಡಿ ಕಿಲಾಡಿಗೆ ರಕ್ಷಿತಾ ಭಾವುಕ ವಿದಾಯ

| Updated By: ರಾಜೇಶ್ ದುಗ್ಗುಮನೆ

Updated on: Jun 28, 2021 | 7:53 PM

ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಇದೆ. ರಾಜ್ಯದ ಸಾಕಷ್ಟು ಪ್ರತಿಭೆಗಳಿಗೆ ಒಂದು ವೇದಿಕೆ ಕಲ್ಪಿಸಿದ ಖ್ಯಾತಿ ಈ ಶೋಗೆ ಇದೆ.

‘ಇದು ಕೊನೆಯ ದಿನದ ಶೂಟಿಂಗ್’​; ಕಾಮಿಡಿ ಕಿಲಾಡಿಗೆ ರಕ್ಷಿತಾ ಭಾವುಕ ವಿದಾಯ
ಕಾಮಿಡಿ ಕಿಲಾಡಿಗಳು ಸೆಟ್​ನಲ್ಲಿ ರಕ್ಷಿತಾ
Follow us on

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ಕಾಮಿಡಿ ಕಿಲಾಡಿ ಚಾಂಪಿಯನ್​ಶಿಪ್​’ ಅಂತಿಮಘಟ್ಟ ತಲುಪಿದೆ. 36 ವಾರಗಳ ಕಾಲ ಪ್ರೇಕ್ಷಕರನ್ನು ರಂಜಿಸಿದ ಈ ಶೋ ಈಗ ಪೂರ್ಣಗೊಳ್ಳುತ್ತಿದೆ. ಇದರಲ್ಲಿ ಜಡ್ಜ್​ ಆಗಿ ಕಾಣಿಸಿಕೊಂಡಿದ್ದ ರಕ್ಷಿತಾ ಪ್ರೇಮ್​ ಈ ಬಗ್ಗೆ ಭಾವುಕ ನುಡಿಗಳನ್ನು ಹಂಚಿಕೊಂಡಿದ್ದಾರೆ.

‘ಸೆಟ್​ನಲ್ಲಿ ಕೊನೆಯ ದಿನ. ಈ ಸೀಸನ್​ 36 ವಾರಗಳ ಕಾಲ ಕಾಮಿಡಿ ಇತ್ತು. ಇದೊಂದು ಸುಂದರ ಪ್ರಯಾಣ. ಈ ಸಾಂಕ್ರಾಮಿಕ ರೋಗದ ಸಂದರ್ಭದಲ್ಲೂ ಕಾಮಿಡಿ ಕಿಲಾಡಿಗಳು ಚಾಂಪಿಯನ್​ಶಿಪ್​ ಶೂಟ್​ ಮಾಡೋದು ನಿಜಕ್ಕೂ ಫನ್​ ಆಗಿತ್ತು. ಪ್ರತಿ ವಾರ 6 ಗಂಟೆಗಳ ಶುದ್ಧ ಸಂತೋಷ. ಇಂದು ಸೆಟ್​ನಲ್ಲಿ ಕೊನೆಯ ದಿನ ಕಳೆಯುತ್ತಿದ್ದೇವೆ. ಈ ಸೆಟ್​, ನನ್ನ ಉಳಿದ ಜಡ್ಜ್​ಗಳು, ಈ ತಂಡವನ್ನು ನಾನು ಮಿಸ್​ ಮಾಡಿಕೊಳ್ಳುತ್ತೇನೆ’ ಎಂದು ರಕ್ಷಿತಾ ಬರೆದುಕೊಂಡಿದ್ದಾರೆ.

ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಇದೆ. ರಾಜ್ಯದ ಸಾಕಷ್ಟು ಪ್ರತಿಭೆಗಳಿಗೆ ಒಂದು ವೇದಿಕೆ ಕಲ್ಪಿಸಿದ ಖ್ಯಾತಿ ಈ ಶೋಗೆ ಇದೆ. ಯೋಗರಾಜ್​ ಭಟ್​ ಹಾಗೂ ಜಗ್ಗೇಶ್​ ಕೂಡ ಈ ಶೋನಲ್ಲಿ ಜಡ್ಜ್​ ಆಗಿ ಕಾಣಿಸಿಕೊಂಡಿದ್ದಾರೆ.

ಇತ್ತೀಚೆಗೆ ನಟ ಜಗ್ಗೇಶ್​ ಟ್ವಿಟರ್​ನಿಂದ ಕೊಂಚ ಬಿಡುವುದು ತೆಗೆದುಕೊಂಡಿದ್ದರು. ಈಗ ಅವರು ಮತ್ತೆ ಟ್ವಿಟರ್​ಗೆ ಮರಳಿದ್ದಾರೆ. ಅವರು ಕೂಡ ಈ ರಿಯಾಲಿಟಿ ಶೋ ಶೂಟಿಂಗ್​ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: BBK8 Shruthi Controversy : ಲ್ಯಾಗ್ ಮಂಜ-ಚಕ್ರವರ್ತಿ ನಡುವಿನ ಬಿಗ್‌ ಫೈಟ್‌ನಲ್ಲಿ ಕೇಳಿ ಬಂತು ನಟಿ ಶೃತಿ ವಿಚಾರ

ಬಡತನ, ಫೇಕ್​ ಲವ್​ ಸ್ಟೋರಿಗಳೇ ರಿಯಾಲಿಟಿ ಶೋಗಳ ಬಂಡವಾಳ; ಇಂಡಿಯನ್​ ಐಡಲ್​ ವಿನ್ನರ್​ ಆರೋಪ

Published On - 7:51 pm, Mon, 28 June 21