ಸಮಂತಾಗೆ ಏಕೆ ಹೀಗೆಲ್ಲ ಆಗುತ್ತೆ? ಅವರ ಬಗ್ಗೆ ಹುಟ್ಟಿದ ವದಂತಿಗಳು ಒಂದೆರಡಲ್ಲ

ನಟಿ ಸಮಂತಾ ವಿಚ್ಛೇದನದ ಬಳಿಕ, ಸಿನಿಮಾ ಆಯ್ತು, ತಮ್ಮ ವೈಯಕ್ತಿಕ ಫಿಟ್​ನೆಸ್ ಆಯ್ತು ಎಂದು ಆರಾಮದಿಂದ ಇದ್ದಾರೆ. ಆದರೆ ಒಂದಲ್ಲ ಒಂದು ವಿವಾದಗಳು ಅವರನ್ನು ಅರಸಿ ಬರುತ್ತಿವೆ. ಸಮಂತಾ ಸುತ್ತ ಸುತ್ತಿಕೊಂಡ ಕೆಲವ ವಿವಾದಗಳ ಇಣುಕು ನೋಟ ಇಲ್ಲಿದೆ.

ಸಮಂತಾಗೆ ಏಕೆ ಹೀಗೆಲ್ಲ ಆಗುತ್ತೆ? ಅವರ ಬಗ್ಗೆ ಹುಟ್ಟಿದ ವದಂತಿಗಳು ಒಂದೆರಡಲ್ಲ
Edited By:

Updated on: Oct 03, 2024 | 7:05 PM

ನಟಿ ಸಮಂತಾ ರುತ್ ಪ್ರಭು ಅವರು ಪ್ರತಿಭಾನ್ವಿತ ನಟಿ ಅನ್ನೋದು ಎಲ್ಲರಿಗೂ ಗೊತ್ತು. ಅವರು ತೆಲುಗು ಇಂಡಸ್ಟ್ರಿಯಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರ ಹೆಸರನ್ನು ಕೆಲವರು ತಪ್ಪಾದ ಕಾರಣಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದು. ‘ಯೇ ಮಾಯಾ ಚೇಸಾವೆ’, ‘ಈಗ’, ‘ರಂಗಸ್ಥಲಂ’ ಸೇರಿದಂತೆ ಅನೇಕ ಯಶಸ್ಚಿ ಚಿತ್ರಗಳನ್ನು ಕೊಟ್ಟಿರುವ ಅವರ ವಿರುದ್ಧ ಈಗ ಗಂಭೀರ ವದಂತಿ ಒಂದು ಹುಟ್ಟಿಕೊಂಡಿದೆ. ಅವರಿಗೆ ಈ ರೀತಿ ಆಗುತ್ತಿರೋದು ಇದೇ ಮೊದಲೇನು ಅಲ್ಲ.

ಹೊಸ ವದಂತಿ

‘ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನ ಪಡೆಯಲು ಕೆ.ಟಿ. ರಾಮ ರಾವ್’ ಕಾರಣ ಎಂದು ಸುರೇಖಾ ಹೇಳಿಕೆ ಕೊಟ್ಟಿದ್ದಾರೆ. ನಾಗಾರ್ಜುನಗೆ ಸೇರಿದ ಕನ್ವೆನ್ಷನ್ನ ಹಾಲ್ನ ಒಡೆಯಬಾರದು ಎಂದರೆ ಸಮಂತಾನ ನನ್ನ ಬಳಿ ಕಳಿಸಿ ಅಂತ ನಾಗಾರ್ಜುನಗೆ ಕೆ.ಟಿ. ರಾಮ ರಾವ್ ಹೇಳಿದ್ದರು. ರಾಮ್ ರಾವ್ ಬಳಿ ಹೋಗುವಂತೆ ನಾಗಾರ್ಜುನ ಸಮಂತಾಗೆ ಒತ್ತಾಯ ಕೂಡ ಮಾಡಿದ್ದರು.ಆದರೆ, ಇದನ್ನು ಒಪ್ಪದ ಸಮಂತಾ, ನಾಗ ಚೈತನ್ಯ ಇಂದ ದೂರ ಆದರು’ ಎಂದು ಸುರೇಖಾ ಹೇಳಿಕೆ ಕೊಟ್ಟಿದ್ದಾರೆ.

ಜೀವನಾಂಶ ವಿಚಾರ

ಸಮಂತಾ ಅವರು ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದ ಬಳಿಕ ದೊಡ್ಡ ಮಟ್ಟದ ಜೀವನಾಂಶ ಪಡೆದಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಅದೂ ಬರೋಬ್ಬರಿ 250 ಕೋಟಿ ರೂಪಾಯಿ ಎನ್ನುವ ವದಂತಿ ಹರಡಿತ್ತು. ಇದಕ್ಕೆ ಅವರು ಸ್ಪಷ್ಟನೆ ನೀಡಿದ್ದರು. ‘ನಾನು ಯಾರಿಂದಲೂ ಹಣ ಪಡೆದಿಲ್ಲ’ ಎಂದು ಸಮಂತಾ ಅವರು ‘ಕಾಫಿ ವಿತ್ ಕರಣ್’ ಶೋನಲ್ಲಿ ಸ್ಪಷ್ಟನೆ ನೀಡಿದ್ದರು.

ಬೋಲ್ಡ್ ಪಾತ್ರದಿಂದ

ಸಮಂತಾ ಅವರು ‘ಫ್ಯಾಮಿ ಮ್ಯಾನ್ 2’ ಸರಣಿಯಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಅವರು ವ್ಯಕ್ತಿಯೊಬ್ಬರ ಎದುರು ಅರೆಬೆತ್ತಲಾಗುವ ದೃಶ್ಯವೂ ಇತ್ತು. ‘ಈ ರೀತಿಯ ಪಾತ್ರಗಳನ್ನು ಮಾಡದಂತೆ ಸಮಂತಾಗೆ ಒತ್ತಡ ಇತ್ತು. ಆದರೆ, ಇದನ್ನು ಒಪ್ಪದ ಕಾರಣಕ್ಕೆ ವಿಚ್ಛೇದನ ಆಯಿತು’ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ, ಇದರಲ್ಲಿ ಹುರುಳಿರಲಿಲ್ಲ.

ಕಾಯಿಲೆ

ಸಮಂತಾಗೆ ಮಯೋಸೈಟಿಸ್ ಕಾಯಿಲೆ ಕಾಣಿಸಿಕೊಂಡಿತ್ತು. ಇದರಿಂದ ಅವರು ಸಾಕಷ್ಟು ತೊಂದರೆ ಅನುಭವಿಸಿದ್ದರು. ಈ ಸಮಯದಲ್ಲಿ ಅವರ ವಿರುದ್ಧ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ಅವರು ಚಿತ್ರರಂಗದಿಂದ ದೂರ ಆಗುತ್ತಾರೆ ಎಂದು ಕೂಡ ಹೇಳಲಾಗಿತ್ತು. ಅದ್ಯಾವುದೂ ನಿಜವಾಗಿಲ್ಲ. ‘ಶಾಕುಂತಲಂ’ ರಿಲೀಸ್ ಆದ ಬಳಿಕ ಮಾತನಾಡಿದ್ದ ಚಿಟ್ಟಿ ಬಾಬು, ‘ಸಮಂತಾ ವೃತ್ತಿ ಜೀವನ ಮುಗಿದ ಅಧ್ಯಾಯ. ಸಿಂಪತಿ ಗಿಟ್ಟಿಸಿಕೊಳ್ಳಳು ಈ ರೀತಿ ಅನಾರೋಗ್ಯದ ಕಥೆ ಹೇಳುತ್ತಿದ್ದಾರೆ’ ಎನ್ನುವ ಆರೋಪವನ್ನು ಅವರು ಮಾಡಿದ್ದರು.

ಮಿಸ್ ಲೀಡಿಂಗ್ ಕಾಂಟ್ರೋವರ್ಸಿ

ಸಮಂತಾ ಅವರು ಕೆಲವು ಆರೋಗ್ಯ ಟಿಪ್ಸ್ ಕೊಡುತ್ತಾ ಬಂದಿದ್ದರು. ಈ ವೇಳೆ ಅವರು ವೈರಲ್ ಫಿವರ್ಗೆ ನೀಡಿದ್ದ ಔಷಧ ವಿಷಕಾರಿ ಎಂದು ಕೆಲವರು ಅಭಿಪ್ರಾಯಪಟ್ಟಿದ್ದರು. ಈಗ ಕೊಂಡ ಸುರೇಖಾ ಅವರ ಹೇಳಿಕೆ ಸಂಚಲನ ಸೃಷ್ಟಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ