AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಮ್ಮಿ ಆಯ್ತು ‘ದೇವರ’ ಹವಾ; ಈ ವಾರ ‘ಭೈರಾದೇವಿ’ ಜತೆ ಪೈಪೋಟಿಗೆ ಇಳಿದಿದ್ದು ಯಾರು?

ಭಾರಿ ಸದ್ದು ಮಾಡುತ್ತಾ ತೆರೆಗೆ ಬಂದಿದ್ದ ‘ದೇವರ’ ಸಿನಿಮಾದ ಹವಾ ಕಮ್ಮಿ ಆಗಿದೆ. ಈ ವಾರ ಒಂದಷ್ಟು ಹೊಸ ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ಪೈಪೋಟಿ ನಡೆಸುತ್ತಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ. ‘ಭೈರಾದೇವಿ’, ‘ಗೋಪಿಲೋಲ’, ‘ಜನಕ’, ‘ಮಿಂಚುಹುಳು’ ಮುಂತಾದ ಸಿನಿಮಾಗಳು ಜನರಿಗೆ ಮನರಂಜನೆ ನೀಡಲು ಬರುತ್ತಿವೆ. ಮುಂದಿನ ವಾರ ಕೆಲವು ಬಹುನಿರೀಕ್ಷಿತ ಚಿತ್ರಗಳು ತೆರೆಕಾಣಲಿವೆ.

ಕಮ್ಮಿ ಆಯ್ತು ‘ದೇವರ’ ಹವಾ; ಈ ವಾರ ‘ಭೈರಾದೇವಿ’ ಜತೆ ಪೈಪೋಟಿಗೆ ಇಳಿದಿದ್ದು ಯಾರು?
ರಾಧಿಕಾ ಕುಮಾರಸ್ವಾಮಿ
ಮದನ್​ ಕುಮಾರ್​
|

Updated on: Oct 03, 2024 | 6:49 PM

Share

ಕಳೆದ ವಾರ (ಸೆ.27) ಪ್ಯಾನ್​ ಇಂಡಿಯಾ ಮಟ್ಟದಲ್ಲಿ ‘ದೇವರ’ ಸಿನಿಮಾ ಬಿಡುಗಡೆ ಆಗಿತ್ತು. ಜೂನಿಯರ್​ ಎನ್​ಟಿಆರ್​, ಜಾನ್ವಿ ಕಪೂರ್​ ನಟನೆಯ ಈ ಸಿನಿಮಾ ಆರಂಭದಲ್ಲಿ ಅಬ್ಬರಿಸಿತಾದರೂ ಮೂರು ದಿನ ಕಳೆದ ಬಳಿಕ ಹವಾ ಕಡಿಮೆ ಆಯಿತು. ಪರಿಣಾಮವಾಗಿ ಹೊಸ ಸಿನಿಮಾಗಳ ಕಡೆಗೆ ಜನರು ಗಮನ ಹರಿಸುವಂತಾಗಿದೆ. ಈ ವಾರ ರಾಧಿಕಾ ಕುಮಾರಸ್ವಾಮಿ ನಟನೆಯ ‘ಭೈರಾದೇವಿ’ ಜೊತೆ ಹೊಸಬರ ಸಿನಿಮಾಗಳು ಕೂಡ ರಿಲೀಸ್​ ಆಗುತ್ತಿವೆ. ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ..

ರಾಧಿಕಾ ಕುಮಾರಸ್ವಾಮಿ ಅವರು ‘ಭೈರಾದೇವಿ’ ಸಿನಿಮಾದಲ್ಲಿ ಡಿಫರೆಂಟ್​ ಆದಂತಹ ಪಾತ್ರ ಮಾಡಿದ್ದಾರೆ. ಸೂಪರ್​ ನ್ಯಾಚುರಲ್​ ಕಹಾನಿ ಇರುವ ಈ ಸಿನಿಮಾದಲ್ಲಿ ರಮೇಶ್ ಅರವಿಂದ್​ ಕೂಡ ನಟಿಸಿದ್ದಾರೆ. ಸ್ವತಃ ರಾಧಿಕಾ ಕುಮಾರಸ್ವಾಮಿ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅಕ್ಟೋಬರ್​ 3ರಂದು ಈ ಸಿನಿಮಾ ಬಿಡುಗಡೆ ಆಗಿದೆ. ಶ್ರೀ ಜೈ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಟ್ರೇಲರ್​ನಲ್ಲಿ ರಾಧಿಕಾ ಕುಮಾರಸ್ವಾಮಿ ಅವರ ಗೆಟಪ್​ ಗಮನ ಸೆಳೆದಿದೆ. ಆ ಕಾರಣದಿಂದ ಅವರ ಅಭಿಮಾನಿಗಳ ವಯಲದಲ್ಲಿ ಈ ಸಿನಿಮಾ ಬಗ್ಗೆ ಹೈಪ್​ ಕ್ರಿಯೇಟ್​ ಆಯಿತು.

ಅಕ್ಟೋಬರ್​ 4ರಂದು ಕನ್ನಡದ ‘ಗೋಪಿಲೋಲ’ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ಮಂಜುನಾಥ್ ಅರಸು, ನಿಮಿಷಾ, ಎಸ್​. ನಾರಾಯಣ್, ಪದ್ಮಾ ವಾಸಂತಿ, ಡಿಂಗ್ರಿ ನಾಗರಾಜ್​ ಮುಂತಾದವರು ನಟಿಸಿದ್ದಾರೆ. ಆರ್​. ರವೀಂದ್ರ ಅವರು ನಿರ್ದೇಶನ ಮಾಡಿದ್ದಾರೆ. ಇದರೊಂದಿಗೆ ‘ಜನಕ’ ಸಿನಿಮಾ ಕೂಡ ಅ.4ಕ್ಕೆ ತೆರೆಕಾಣುತ್ತಿದೆ. ಹೊಸ ನಟ ರಕ್ಷಿತ್ ಮನೋಜ್​ ಅವರು ಈ ಸಿನಿಮಾದಲ್ಲಿ ಹೀರೋ ಆಗಿ ಅಭಿನಯಿಸಿದ್ದಾರೆ. ನಿರ್ದೇಶನ ಕೂಡ ಅವರದ್ದೇ.

ಇದನ್ನೂ ಓದಿ: ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ ಕುಮಾರಸ್ವಾಮಿ

ಡಾ. ರಾಜ್​ಕುಮಾರ್​ ಅವರ ಸಹೋದರ ವರದಪ್ಪ ಅವರ ಮೊಮ್ಮಗ ಪೃಥ್ವಿರಾಜ್​ ಹಾಗೂ ಪ್ರೀತಂ ಅವರು ‘ಮಿಂಚುಹುಳ’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಸಿನಿಮಾಗೆ ಮಹೇಶ್​ ಕುಮಾರ್​ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಈ ಚಿತ್ರ ಕೂಡ ಅಕ್ಟೋಬರ್​ 4ಕ್ಕೆ ತೆರೆಗೆ ಬರುತ್ತಿವೆ. ತೆಲುಗಿನಲ್ಲಿ ‘ಸ್ವ್ಯಾಗ್’, ತಮಿಳಿನಲ್ಲಿ ‘ಅರಗನ್’ ಚಿತ್ರಗಳು ಕೂಡ ಈ ವಾರ ಪೈಪೋಟಿಗೆ ಇಳಿಯುತ್ತಿವೆ.

ಮುಂದಿನ ವಾರ ಕೆಲವು ಬಹುನಿರೀಕ್ಷಿಯ ಸಿನಿಮಾಗಳು ರಿಲೀಸ್​ ಆಗಲಿವೆ. ರಜನಿಕಾಂತ್​ ಅಭಿನಯದ ‘ವೆಟ್ಟಯ್ಯನ್’ ಸಿನಿಮಾ ಅಕ್ಟೋಬರ್​ 10ಕ್ಕೆ ಬಿಡುಗಡೆ ಆಗಲಿದೆ. ಧ್ರುವ ಸರ್ಜಾ ನಟನೆಯ ‘ಮಾರ್ಟಿನ್​’ ಸಿನಿಮಾ ಅಕ್ಟೋಬರ್​ 11ಕ್ಕೆ ತೆರೆಕಾಣಲಿದೆ. ಅದೇ ದಿನ ಆಲಿಯಾ ಭಟ್​ ನಟನೆಯ ‘ಜಿಗ್ರಾ’ ರಿಲೀಸ್​ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ