ನನ್ನ ಕೂದಲು ಉದುರಿದೆ, ಆದರೆ ನಾಗಾರ್ಜುನ ಇನ್ನೂ ಯಂಗ್ ಆಗಿದ್ದಾರೆ: ರಜನಿಕಾಂತ್

ಭಾರಿ ನಿರೀಕ್ಷೆ ಮೂಡಿಸಿರುವ ‘ಕೂಲಿ’ ಸಿನಿಮಾದಲ್ಲಿ ರಜನಿಕಾಂತ್, ನಾಗಾರ್ಜುನ ಒಟ್ಟಿಗೆ ನಟಿಸಿದ್ದಾರೆ. 34 ವರ್ಷಗಳ ಬಳಿಕ ರಜನಿಕಾಂತ್ ಮತ್ತು ನಾಗಾರ್ಜುನ ತೆರೆ ಹಂಚಿಕೊಂಡಿದ್ದಾರೆ ಎಂಬುದು ವಿಶೇಷ. ನಾಗಾರ್ಜುನ ಅವರ ಫಿಟ್ನೆಸ್ ಮತ್ತು ಲುಕ್ ಬಗ್ಗೆ ರಜನಿಕಾಂತ್ ಅವರು ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ.

ನನ್ನ ಕೂದಲು ಉದುರಿದೆ, ಆದರೆ ನಾಗಾರ್ಜುನ ಇನ್ನೂ ಯಂಗ್ ಆಗಿದ್ದಾರೆ: ರಜನಿಕಾಂತ್
Rajinikanth, Nagarjuna

Updated on: Aug 05, 2025 | 6:21 PM

ಸಿನಿಮಾದಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುವ ನಟ ರಜನಿಕಾಂತ್ (Rajinikanth) ಅವರು ನಿಜಜೀವನದಲ್ಲಿ ಸಿಂಪಲ್ ಆಗಿ ಕಾಣಿಸಿಕೊಳ್ಳುತ್ತಾರೆ. ತಲೆ ಕೂದಲು ಉದುರಿದ್ದರೂ ಅವರು ರಿಯಲ್ ಲೈಫ್​​ನಲ್ಲಿ ವಿಗ್ ಧರಿಸುವುದಿಲ್ಲ. ಅವರಿಗೆ ಈಗ 74 ವರ್ಷ ವಯಸ್ಸು. ಆದರೂ ಕೂಡ ಆ್ಯಕ್ಷನ್ ಸಿನಿಮಾಗಳ ಮೂಲಕ ಜನರನ್ನು ರಂಜಿಸುತ್ತಿದ್ದಾರೆ. ರಜನಿಕಾಂತ್ ನಟಿಸಿರುವ ‘ಕೂಲಿ’ ಸಿನಿಮಾ (Coolie Movie) ಆಗಸ್ಟ್ 14ರಂದು ಬಿಡುಗಡೆ ಆಗಲಿದೆ. ಇದೇ ಸಿನಿಮಾದಲ್ಲಿ ಟಾಲಿವುಡ್ ಸ್ಟಾರ್ ನಟ ನಾಗಾರ್ಜುನ ಕೂಡ ಅಭಿನಯಿಸಿದ್ದಾರೆ. 65ನೇ ವಯಸ್ಸಿನಲ್ಲೂ ಯುವಕನಂತೆ ಕಾಣುವ ನಾಗಾರ್ಜುನ (Nagarjuna) ಬಗ್ಗೆ ರಜನಿಕಾಂತ್ ಮಾತನಾಡಿದ್ದಾರೆ.

‘ಕೂಲಿ’ ಸಿನಿಮಾದಲ್ಲಿ ನಾಗಾರ್ಜುನ ಅವರು ವಿಲನ್ ಪಾತ್ರ ಮಾಡಿದ್ದಾರೆ. ಅದು ಈ ಸಿನಿಮಾದ ಪ್ರಮುಖ ಹೈಲೈಟ್. ಸೈಮನ್ ಎಂಬ ಪಾತ್ರಕ್ಕೆ ನಾಗಾರ್ಜುನ ಅವರು ಬಣ್ಣ ಹಚ್ಚಿದ್ದಾರೆ. ರಜನಿಕಾಂತ್ ಅವರಿಗೂ ಈ ಪಾತ್ರ ತುಂಬ ಇಷ್ಟವಂತೆ. 5 ಬಾರಿ ಮಾತುಕಥೆ ಮಾಡಿದ ಬಳಿಕ ನಾಗಾರ್ಜುನ ಅವರು ಈ ಪಾತ್ರ ಮಾಡಲು ಒಪ್ಪಿಕೊಂಡರು ಎಂದು ಚಿತ್ರತಂಡ ಹೇಳಿದೆ.

ಇದನ್ನೂ ಓದಿ
ರಜನಿಕಾಂತ್ ತಾಯಿ, ಸಹೋದರಿ ಮತ್ತು ಗೆಳತಿಯಾಗಿ ನಟಿಸಿದ ಏಕೈಕ ನಾಯಕಿ ಇವರು
ಕೇರಳಕ್ಕೆ ಬಂದ ರಜನಿಕಾಂತ್: ಅಭಿಮಾನಿಗಳ ಸಂಭ್ರಮ ಹೇಗಿತ್ತು ನೋಡಿ
ಕಂಡಕ್ಟರ್ ಆಗಿದ್ದಾಗಲೇ ರಜನಿಕಾಂತ್ ಸ್ಟೈಲಿಶ್​
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್

34 ವರ್ಷಗಳ ಹಿಂದೆ ‘ಶಾಂತಿ ಕ್ರಾಂತಿ’ ಸಿನಿಮಾದಲ್ಲಿ ರಜನಿಕಾಂತ್ ಮತ್ತು ನಾಗಾರ್ಜುನ ಅವರು ಒಟ್ಟಿಗೆ ತೆರೆಹಂಚಿಕೊಂಡಿದ್ದರು. ಈಗ ಮತ್ತೆ ಅವರು ‘ಕೂಲಿ’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ನಾಗಾರ್ಜುನ ಅವರು ಅಂದು ಯಾವ ರೀತಿ ಇದ್ದರೋ ಈಗಲೂ ಹಾಗೆಯೇ ಇದ್ದಾರೆ ಎಂದು ರಜನಿಕಾಂತ್ ಅವರು ಹೊಗಳಿದ್ದಾರೆ.

‘ನಾಗಾರ್ಜುನ ಅವರು ಮೊದಲಿಗಿಂತಲೂ ಯಂಗ್ ಆಗಿ ಕಾಣುತ್ತಿದ್ದಾರೆ. ನನ್ನ ಕೂದಲೆಲ್ಲ ಉದುರಿಹೋಗಿದೆ. ಅವರು ಈಗಲೂ ಫಿಸಿಕ್ ಚೆನ್ನಾಗಿ ಇಟ್ಟುಕೊಂಡಿದ್ದಾರೆ. ಅದು ಹೇಗೆ ಎಂದು ಅವರನ್ನು ನಾನು ಕೇಳಿದ್ದೆ. ವ್ಯಾಯಾಮ ಮತ್ತು ಡಯಟ್ ಹೊರತು ಬೇರೇನೂ ಇಲ್ಲ ಅಂತ ಹೇಳಿದ್ದರು’ ಎಂದು ರಜನಿಕಾಂತ್ ಅವರು ಹೇಳಿದ್ದಾರೆ. ಸಂಜೆ 7 ಗಂಟೆಗೆ ನಾಗಾರ್ಜುನ ಊಟ ಮುಗಿಸುತ್ತಾರೆ. ತಮ್ಮ ಫಿಟ್ನೆಸ್​​ಗೆ ತಂದೆ ಅಕ್ಕಿನೇನಿ ನಾಗೇಶ್ವರ ರಾವ್ ಅವರ ಜೀನ್ಸ್ ಸಹ ಕಾರಣ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ರಜನಿಕಾಂತ್ ಕಾಲಿಗೆ ಬೀಳಲು ಬಂದ ಆಮಿರ್ ಖಾನ್; ತಡೆದು ನಿಲ್ಲಿಸಿದ ಸೂಪರ್ ಸ್ಟಾರ್

ಟ್ರೇಲರ್​ ನೋಡಿದ ಎಲ್ಲರಿಗೂ ‘ಕೂಲಿ’ ಸಿನಿಮಾ ಬಗ್ಗೆ ಕುತೂಹಲ ಮೂಡಿದೆ. ಈ ಸಿನಿಮಾದಲ್ಲಿ ರಜನಿಕಾಂತ್, ನಾಗಾರ್ಜುನ ಜೊತೆ ಆಮಿರ್ ಖಾನ್, ಉಪೇಂದ್ರ, ರಚಿತಾ ರಾಮ್, ಶ್ರುತಿ ಹಾಸನ್, ಸತ್ಯರಾಜ್ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಲೋಕೇಶ್ ಕನಗರಾಜ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.