
ಫುಟ್ಬಾಲ್ ಲೋಕದ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೋ (Cristiano Ronaldo) ಹಾಗೂ ಅವರ ಬಹುಕಾಲದ ಗೆಳತಿ, ಮಾಡೆಲ್ ಜಾರ್ಜಿನಾ ರೊಡ್ರಿಗಸ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹಲವು ವರ್ಷಗಳ ಕಾಲ ಇವರು ಡೇಟಿಂಗ್ ಮಾಡುತ್ತಿದ್ದರು. ಈ ದಂಪತಿಗೆ ಮಕ್ಕಳು ಕೂಡ ಇದ್ದಾರೆ. ಈಗ ರೊನಾಲ್ಡೋ 26 ಕೋಟಿ ರೂಪಾಯಿ ಬೆಲೆಯ ಡೈಮಂಡ್ ಉಂಗುರ ಹಾಕಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ರೊನಾಲ್ಡೋ ಹಾಗೂ ಜಾರ್ಜಿನಾ ಮೊದಲ ಬಾರಿಗೆ ಭೇಟಿ ಆಗಿದ್ದು 2016ರಲ್ಲಿ. ಮ್ಯಾಡ್ರಿಡ್ನ ಗೂಚಿ ಬ್ರ್ಯಾಂಡ್ ಸ್ಟೋರ್ನಲ್ಲಿ ಇಬ್ಬರೂ ಬೇಟಿ ಆದರು. ಆ ಬಳಿಕ ಇಬ್ಬರ ಮಧ್ಯೆ ಗೆಳೆತನ ಬೆಳೆಯಿತು. 2017ರ ವೇಳೆಗೆ ಇವರು ತಮ್ಮ ಸಂಬಂಧ ಅಧಿಕೃತ ಮಾಡಿದರು.
ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇದರ ಜೊತೆಗೆ ರೊನಾಲ್ಡೋ ಅವರ ಇತರ ಮೂವರು ಮಕ್ಕಳನ್ನು ಜಾರ್ಜಿನಾ ಅವರೇ ನೋಡಿಕೊಳ್ಳುತ್ತಿದ್ದಾರೆ. ರೊನಾಲ್ಡೋ 2010ರಲ್ಲಿ ತಂದೆ ಜೂನಿಯರ್ ಹೆಸರಿನ ಮಗುವಿಗೆ ಆದರು. ಮಗುವಿನ ತಾಯಿ ಯಾರು ಎಂಬುದು ಗುಟ್ಟಾಗಿಯೇ ಇಡಲಾಗಿದೆ. ಏಳು ವರ್ಷಗಳ ಬಳಿಕ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ರೊನಾಲ್ಡೋ ಪಡೆದರು. ನಂತರ ಜಾರ್ಜಿಯಾನಾ ಜೊತೆ ಸೇರಿ ನಾಲ್ಕನೇ ಮಗು ಮಾಡಿಕೊಂಡರು. 2022ರಲ್ಲಿ ರೊನಾಲ್ಡೋಗೆ ಅವಳಿ ಮಕ್ಕಳು ಹುಟ್ಟಬೇಕಿತ್ತು. ಒಂದು ಮಗು ಹುಟ್ಟುವಾಗಲೇ ನಿಧನ ಹೊಂದಿತು. ರೊನಾಲ್ಡೋ ಈ ಮೊದಲು ವಿವಾಹ ಆಗಿಲ್ಲ. ಅವರು ಬಾಡಿಗೆ ತಾಯ್ತನದ ಮೂಲಕ ಮೂರು ಮಕ್ಕಳನ್ನು ಪಡೆದಿದ್ದರು.
ಜಾರ್ಜಿನಾ ಅವರು ಹುಟ್ಟಿದ್ದು ಅರ್ಜೆಂಟೀನಾದಲ್ಲಿ. ಅವರು ಬೆಳೆದಿದ್ದು ಸ್ಪೇನ್ನ ಜಾಕಾದಲ್ಲಿ. ಅವರು ಆರಂಭದಲ್ಲಿ ಡ್ಯಾನ್ಸರ್ ಆಗಿದ್ದರು. ಆ ಬಳಿಕ ಮ್ಯಾಡ್ರಿಡ್ಗೆ ತೆರಳಿದರು. ಅಲ್ಲಿ ಅವರು ವಿವಿಧ ಕೆಲಸ ಮಾಡಿ, ಮಾಡೆಲಿಂಗ್ ಆರಂಭಿಸಿದರು. ಅವರು ಹಲವು ಉದ್ಯಮ ಹೊಂದಿದ್ದಾರೆ. ರೊನಾಲ್ಡೋ ಅವರು ಫುಟ್ಬಾಲ್ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ.
ಇದನ್ನೂ ಓದಿ: ದಿಗ್ಗಜ ಫುಟ್ಬಾಲಿಗ ಕ್ರಿಸ್ಟಿಯಾನೋ ರೊನಾಲ್ಡೋ ಗಂಡು ಮಗು ಸಾವು
ರೊನಾಲ್ಡೋ ಹಾಗೂ ಜಾರ್ಜಿಯಾನಾ ವಿವಾಹ ಆಗಿದ್ದಾರೆ ಎಂದ ಹಲವರು ಭಾವಿಸಿದ್ದರು. ಆದರೆ, ಈ ಜೋಡಿ ಈಗ 9 ವರ್ಷಗಳ ಬಳಿಕ ನಿಶ್ಚಿತಾರ್ಥ ಮಾಡಿಕೊಂಡಿದೆ. ರೊನಾಲ್ಡೋ ನೀಡಿದ ಎಂಗೇಜ್ಮೆಂಟ್ ರಿಂಗ್ ತುಂಬಾನೇ ದುಬಾರಿ. ಈ ಉಂಗುರ 50 ಕ್ಯಾರಟ್ ಹೊಂದಿದ್ದು, ಇದರ ಬೆಲೆ 3 ಮಿಲಿಯನ್ ಡಾಲರ್. ಅಂದರೆ ಈ ಉಂಗುರ ಸುಮಾರು 26 ಕೋಟಿ ರೂಪಾಯಿ ಬೆಲೆ ಬಾಳುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:00 am, Wed, 13 August 25