AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದೂ ಧರ್ಮದ ಬಗ್ಗೆ ಹೇಳಿಕೆ, ಕಮಲ್ ಹಾಸನ್​ಗೆ ಕೊಲೆ ಬೆದರಿಕೆ

Kamal Haasan: ಕೆಲ ತಿಂಗಳುಗಳ ಹಿಂದಷ್ಟೆ ಕನ್ನಡ ಭಾಷೆ ಬಗ್ಗೆ ಕಮಲ್ ಹಾಸನ್ ನೀಡಿದ್ದ ಹೇಳಿಕೆ ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಅದಾಗಿ ಕೆಲವೇ ತಿಂಗಳಲ್ಲಿ ಕಮಲ್ ಹಾಸನ್ ಮತ್ತೊಂದು ಹೇಳಿಕೆ ಮೂಲಕ ವಿವಾದಕ್ಕೆ ಕಾರಣವಾಗಿದ್ದಾರೆ. ಹಿಂದೂ ಧರ್ಮದ ಬಗ್ಗೆ ಕಮಲ್ ನೀಡಿದ್ದ ಹೇಳಿಕೆಗೆ ವಿರೋಧ ವ್ಯಕ್ತವಾಗಿದ್ದು, ಇದೀಗ ಅವರಿಗೆ ಕೊಲೆ ಬೆದರಿಕೆ ಎದುರಾಗಿದೆ.

ಹಿಂದೂ ಧರ್ಮದ ಬಗ್ಗೆ ಹೇಳಿಕೆ, ಕಮಲ್ ಹಾಸನ್​ಗೆ ಕೊಲೆ ಬೆದರಿಕೆ
Kamal Haasan
ಮಂಜುನಾಥ ಸಿ.
|

Updated on: Aug 13, 2025 | 11:31 AM

Share

ನಟ ಕಮಲ್ ಹಾಸನ್ (Kamal Haasan) ಇತ್ತೀಚೆಗೆ ಸಿನಿಮಾಗಳಿಗಿಂತಲೂ ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಚ್ಚು ಸುದ್ದಿ ಆಗುತ್ತಿದ್ದಾರೆ. ಅವರ ನಟನೆಯ ‘ಥಗ್ ಲೈಫ್’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಕಮಲ್ ಹಾಸನ್, ಕನ್ನಡ ಭಾಷೆಯ ಬಗ್ಗೆ ನೀಡಿದ್ದ ಹೇಳಿಕೆ ದೊಡ್ಡ ವಿವಾದವಾಗಿತ್ತು. ‘ಥಗ್ ಲೈಫ್’ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಸಹ ಆಗಲಿಲ್ಲ. ಇದೀಗ ಸನಾತನ ಧರ್ಮದ ಬಗ್ಗೆ ಮಾತನಾಡಿ ಮತ್ತೊಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ನಟ ಸೂರ್ಯ ಅವರ ಅಗರಂ ಫೌಂಡೇಶನ್​ನ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ನಟ ಕಮಲ್ ಹಾಸನ್, ಶಿಕ್ಷಣದ ಶಕ್ತಿ ಬಗ್ಗೆ ಮಾತನಾಡುತ್ತಾ, ‘ಗ ಯುದ್ಧ ನಡೆಯುತ್ತಿದೆ. ಈ ಯುದ್ಧವನ್ನು ಕೇವಲ ಶಿಕ್ಷಣದಿಂದ ಮಾತ್ರವೇ ಗೆಲ್ಲಲು ಸಾಧ್ಯ. ಸರಪಳಿಗಳನ್ನು ಒಡೆಯುವ ಆಯುಧ ಶಿಕ್ಷಣವೊಂದೇ, ಸರ್ವಾಧಿಕಾರಿ ಹಾಗೂ ಸನಾತನವನ್ನು ಸೋಲಿಸುವ ಶಕ್ತಿ ಶಿಕ್ಷಣಕ್ಕೆ ಮಾತ್ರವೇ ಇದೆ’ ಎಂದಿದ್ದರು.

ಕಮಲ್ ಹಾಸನ್ ಅವರ ಈ ಹೇಳಿಕೆಗೆ ವಿರೋಧ ವ್ಯಕ್ತವಾಗಿತ್ತು, ತಮಿಳುನಾಡು ಬಿಜೆಪಿ ನಾಯಕರು ಕಮಲ್ ಹಾಸನ್ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಜೊತೆಗೆ ತಮಿಳುನಾಡಿನಲ್ಲಿ ಕಮಲ್ ಹಾಸನ್ ಸಿನಿಮಾಗಳ ಬಿಡುಗಡೆಗೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿದ್ದರು. ಅದರ ಬೆನ್ನಲ್ಲೆ ಇದೀಗ ಹೇಳಿಕೆಗೆ ಪ್ರತಿಯಾಗಿ, ಕಮಲ್ ಹಾಸನ್​ಗೆ ಕೊಲೆ ಬೆದರಿಕೆ ಬಂದಿದೆ.

ಇದನ್ನೂ ಓದಿ:ಮತ್ತೆ ವಿವಾದದಲ್ಲಿ ಕಮಲ್ ಹಾಸನ್, ತಮಿಳುನಾಡಿನಲ್ಲಿ ಸಿನಿಮಾ ನಿಷೇಧಕ್ಕೆ ಆಗ್ರಹ

ತಮಿಳು ಟಿವಿ ನಟ ರವಿಚಂದ್ರನ್ ಎಂಬುವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗಿ ಆಗಿದ್ದಾಗ, ಕಮಲ್ ಹಾಸನ್, ಸನಾತನ ಧರ್ಮದ ಬಗ್ಗೆ ಆಡಿರುವ ಮಾತನ್ನು ಪ್ರಸ್ತಾಪಿಸಿ, ‘ಕಮಲ್ ಹಾಸನ್ ಕತ್ತು ಕತ್ತರಿಸುತ್ತೇವೆ’ ಎಂದಿದ್ದರು. ರವಿಚಂದ್ರನ್ ಹೇಳಿಕೆ ವಿರುದ್ಧ ಕಮಲ್ ಹಾಸನ್ ಅವರ ಮಕ್ಕಳ್ ನಿಧಿ ಮಯಂ ಪಕ್ಷದ ಕಾರ್ಯಕರ್ತರು ಚೆನ್ನೈ ಪೊಲೀಸರಿಗೆ ದೂರು ನೀಡಿ ತನಿಖೆಗೆ ಆಗ್ರಹಿಸಿದ್ದರು.

ಕಮಲ್ ಹಾಸನ್​ ಅವರಿಗೆ ವಿವಾದ ಹೊಸದಲ್ಲ. ಹಲವು ದಶಕಗಳಿಂದಲೂ ಅವರು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಲೇ ಬಂದಿದ್ದಾರೆ. ಅವರ ಸಿನಿಮಾಗಳಾದ ‘ತೇವರ್ ಮಗನ್’, ‘ಹೇ ರಾಮ್’ ಇನ್ನೂ ಕೆಲ ಸಿನಿಮಾಗಳು ವಿವಾದದಲ್ಲಿ ಸಿಲುಕಿಕೊಂಡಿದ್ದವು. 2019 ರಲ್ಲಿ ಚುನಾವಣಾ ಪ್ರಚಾರದ ವೇಳೆ ಸ್ವತಂತ್ರ್ಯ ಭಾರತದ ಮೊದಲ ಭಯೋತ್ಪಾದಕ ಹಿಂದೂ ಆಗಿದ್ದ ಎಂದಿದ್ದರು. ಈ ಹೇಳಿಕೆಯೂ ಸಹ ವಿವಾದ ಸೃಷ್ಟಿಸಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ