AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಮಗ್ಲಿಂಗ್ ಪ್ರಕರಣ: ಸ್ಟಾರ್ ನಟ ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಮನೆ ಮೇಲೆ ದಾಳಿ

Dulquer Salmaan-Prithviraj Sukumaran: ಮಲಯಾಳಂ ಚಿತ್ರರಂಗದ ಸ್ಟಾರ್ ನಟ, ನಿರ್ಮಾಪಕರುಗಳಾದ ದುಲ್ಕರ್ ಸಲ್ಮಾನ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರುಗಳ ಮನೆಗಳ ಮೇಲೆ ಕಸ್ಟಮ್ಸ್ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ದಾಳಿ ನಡೆಸಿದ್ದು, ಇಬ್ಬರೂ ನಟರ ಕಾರುಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಸ್ಮಗ್ಲಿಂಗ್ ಪ್ರಕರಣ: ಸ್ಟಾರ್ ನಟ ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಮನೆ ಮೇಲೆ ದಾಳಿ
Pruthviraj Dulquer
ಮಂಜುನಾಥ ಸಿ.
|

Updated on: Sep 23, 2025 | 12:45 PM

Share

ಮಲಯಾಳಂ ಚಿತ್ರರಂಗ ಮಾತ್ರವೇ ಅಲ್ಲದೆ ಪ್ಯಾನ್ ಇಂಡಿಯಾ (Pan India) ಸ್ಟಾರ್ ನಟ, ನಿರ್ಮಾಪಕರಾಗಿರುವ ದುಲ್ಕರ್ ಸಲ್ಮಾನ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರ ಮನೆಗಳ ಮೇಲೆ ಕಸ್ಟಮ್ಸ್ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ಇಬ್ಬರೂ ನಟರ ವಿರುದ್ಧ ಸ್ಮಗ್ಲಿಂಗ್ ಗುಮಾನಿಯಿಂದ ಕಸ್ಟಮ್ಸ್ ಅಧಿಕಾರಿಗಳು ದಾಳಿ ನಡೆಸಿದ್ದು, ಮನೆಯಲ್ಲಿರುವ ಕಾರುಗಳು, ಇತರೆ ವಿದೇಶಿ ವಸ್ತುಗಳ ತನಿಖೆ ನಡೆಸಿದ್ದಾರೆ.

ದುಲ್ಕರ್ ಸಲ್ಮಾನ್ ಮತ್ತು ಪೃಥ್ವಿರಾಜ್ ಸುಕುಮಾರನ್ ಇಬ್ಬರೂ ಸಹ ಬಹಳ ಕಾರ್ ಕ್ರೇಜ್ ಹೊಂದಿರುವ ನಟರು. ತಮ್ಮ ಸಂಗ್ರಹದಲ್ಲಿ ಹಲವಾರು ಐಶಾರಾಮಿ ವಿದೇಶಿ ಬ್ರ್ಯಾಂಡ್​​ನ ಕಾರುಗಳನ್ನು ಹೊಂದಿದ್ದಾರೆ. ಕೆಲ ಲಿಮಿಟೆಡ್ ಎಡಿಷನ್ ಕಾರುಗಳನ್ನು ಈ ನಟರುಗಳು ವಿದೇಶಗಳಿಂದಲೂ ತರಿಸಿಕೊಂಡಿದ್ದಾರೆ. ಹಾಗಾಗಿ ಇದೀಗ ಕಸ್ಟಮ್ಸ್ ಅಧಿಕಾರಿಗಳು ಆ ಕಾರುಗಳ ದಾಖಲೆಗಳನ್ನು ಪರಿಶೀಲಿಸಿದ್ದು, ತೆರಿಗೆ, ನೊಂದಣಿ ಇತ್ಯಾದಿ ಮಾಹಿತಿಯನ್ನು ಪಡೆದಿದ್ದಾರೆ.

ಕೇರಳದ ಕೊಚ್ಚಿಯ ತೇವರದಲ್ಲಿರುವ ಪೃಥ್ವಿರಾಜ್ ಸುಕುಮಾರನ್ ಮನೆ ಹಾಗೂ ಕೊಚ್ಚಿಯ ಪನಂಪಿನ್ನಿ ನಗರದಲ್ಲಿರುವ ದುಲ್ಕರ್ ಸಲ್ಮಾನ್ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಧಿಕಾರಿಗಳು ಪೃಥ್ವಿರಾಜ್ ಅವರ ತಿರುವನಂತಪುರಂನ ಮನೆ ಮೇಲೂ ದಾಳಿ ಮಾಡಿದ್ದಾರೆ. ಆದರೆ ಅಲ್ಲಿ ಯಾವುದೇ ವಿದೇಶಿ ವಾಹನ ಪತ್ತೆಯಾಗಿಲ್ಲವಂತೆ. ನಟರುಗಳು ಮಾತ್ರವೇ ಅಲ್ಲದೆ ಕೆಲವು ಉದ್ಯಮಿಗಳ ಮನೆಗಳ ಮೇಲೂ ಸಹ ಕಸ್ಟಮ್ಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿಗೆ ‘ನುಮ್​ಕೂರ್’ ಎಂದು ಹೆಸರಿಡಲಾಗಿದೆ. ವಾಹನಗಳನ್ನು ಮಲಯಾಳಿ ಭಾಷೆಯಲ್ಲಿ ನುಮ್​ಕೂರ್ ಎನ್ನಲಾಗುತ್ತದೆಯಂತೆ. ಅಕ್ರಮವಾಗಿ ವಿದೇಶಗಳಿಂದ ವಾಹನ ಆಮದು ಮಾಡಿಕೊಳ್ಳುವುದು, ತೆರಿಗೆ ವಂಚನೆಗಳನ್ನು ಪತ್ತೆ ಹಚ್ಚವುದು ದಾಳಿಯ ಉದ್ದೇಶ.

ಇದನ್ನೂ ಓದಿ: ಮಲಯಾಳಂನ ಜನಪ್ರಿಯ ನಟಿಯ ಅವಮಾನಿಸಿದ ಬಾಲಿವುಡ್, ಕೆರಳಿದ ಕೇರಳಿಗರು

ಇತ್ತೀಚೆಗೆ ಕೇರಳ ಮತ್ತು ಇತರೆ ಕೆಲವು ರಾಜ್ಯಗಳಲ್ಲಿ ಐಶಾರಾಮಿ ಕಾರುಗಳ ಮಾರಾಟದ ಅಕ್ರಮ ದಂಧೆ ಪ್ರಾರಂಭ ಆಗಿದೆ. ಭೂತಾನ್​​​ನಿಂದ ವಿದೇಶಿ ಕಾರುಗಳನ್ನು ಕಡಿಮೆ ಮೊತ್ತಕ್ಕೆ ಖರೀದಿ ಮಾಡಿ ಅವನ್ನು ಅಕ್ರಮವಾಗಿ ಹಿಮಾಚಲ ಪ್ರದೇಶಕ್ಕೆ ತಂದು ಅಲ್ಲಿ ನಕಲಿ ವಿಳಾಸ, ವ್ಯಕ್ತಿಗಳ ಹೆಸರಲ್ಲಿ ಅವುಗಳನ್ನು ನೊಂದಾಯಿಸಿ, ಆ ಕಾರುಗಳನ್ನು ಭಾರಿ ದೊಡ್ಡ ಮೊತ್ತಕ್ಕೆ ಸಿನಿಮಾ ಸೆಲೆಬ್ರಿಟಿಗಳು, ಉದ್ಯಮಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಅದರಲ್ಲೂ ಕೇರಳದಲ್ಲಿಯೇ ಇಂಥಹಾ ಕಾರುಗಳ ಮಾರಾಟ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಕಸ್ಟಮ್ಸ್ ಅಧಿಕಾರಿಗಳು ಇದೀಗ ದಾಳಿಗಳನ್ನು ಮಾಡುತ್ತಿದ್ದಾರೆ.

ದುಲ್ಕರ್ ಸಲ್ಮಾನ್ ಬಳಿ ಹಲವಾರು ಕಾರುಗಳಿವೆ. ಅವರೇ ಹೇಳಿಕೊಂಡಿರುವಂತೆ ಸುಮಾರು 40ಕ್ಕೂ ಹೆಚ್ಚು ಕಾರುಗಳು ದುಲ್ಕರ್ ಬಳಿ ಇವೆ. ಬಿಎಂಡಬ್ಲು ಒಂದೇ ಬ್ರ್ಯಾಂಡ್​​ನ ಸುಮಾರು 10ಕ್ಕೂ ಹೆಚ್ಚು ಕಾರುಗಳು ದುಲ್ಕರ್ ಸಲ್ಮಾನ್ ಬಳಿ ಇವೆ. ಎಲ್ಲ ರೀತಿಯ ಎಸ್​​ಯುವಿ ಕಾರುಗಳು, ಹಲವಾರು ಪಿಕಪ್ ಟ್ರಕ್​​ಗಳು, ಸೂಪರ್ ಕಾರುಗಳು ದುಲ್ಕರ್ ಸಂಗ್ರಹದಲ್ಲಿವೆ. ಪೃಥ್ವಿರಾಜ್ ಸುಕುಮಾರನ್ ಸಹ ಹಲವಾರು ವಿದೇಶಿ ಕಾರುಗಳನ್ನು ಹೊಂದಿದ್ದಾರೆ. ಅವರ ಸಂಗ್ರಹದಲ್ಲಿ ಆಸ್ಟಿನ್ ಮಾರ್ಟಿನ್ ಕಾರು ಸಹ ಇದೆ. ಹಲವು ಸ್ಪೋರ್ಟ್ಸ್ ಕಾರುಗಳನ್ನು ಪೃಥ್ವಿರಾಜ್ ಸುಕುಮಾರನ್ ಹೊಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ