ಸಪ್ತಪದಿ ತುಳಿದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್

Milana Nagaraj and Darling Krishna Wedding; ಸ್ವಿಮ್ಮಿಂಗ್ ಪೂಲ್​ನಲ್ಲಿ ಮದುವೆಯಾಗಬೇಕೆಂದು ಮಿಲನಾ ನಾಗರಾಜ್ ಹೇಳಿಕೊಂಡಿದ್ದರು ಎಂದು ಮದುವೆಯ ನಂತರ ಡಾರ್ಲಿಂಗ್ ಕೃಷ್ಣ ಗುಟ್ಟುಬಿಟ್ಟುಕೊಟ್ಟರು.

  • TV9 Web Team
  • Published On - 15:02 PM, 14 Feb 2021
ಸಪ್ತಪದಿ ತುಳಿದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್
ನವ ಜೋಡಿಗಳು ಮದುವೆಗೆ ಸೇರಿದ್ದ ಹಿರಿಯರು, ಗಣ್ಯರಲ್ಲಿ ಕೈ ಮುಗಿದು ಆಶೀರ್ವಾದ ಪಡೆದಿದ್ದಾರೆ. ಈ ದೃಶ್ಯ ನಮ್ಮನ್ನು ಹರಸಿ, ಹಾರೈಸಿ, ಆಶೀರ್ವದಿಸಿ ಎಂದು ಕೋರುವಂತಿದೆ.

ಬೆಂಗಳೂರು: ಸ್ಯಾಂಡಲ್​ವುಡ್ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್​ ಇಂದು ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಪ್ರೇಮಿಗಳ ದಿನದಂದೇ ಈ ಜೋಡಿ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ. ಬಹಳ ಅದ್ಧೂರಿಯಲ್ಲಿ ಆರತಕ್ಷತೆ ಸಮಾರಂಭವೂ ನೆರವೇರಿತು.

ವಿವಾಹದ ನಂತರ ಮಿಲನಾ ನಾಗರಾಜ್ ಮತ್ತು  ಕೃಷ್ಣ ಮಾತನಾಡಿ, ಮಿಲನಾ ನಾಗರಾಜ್​ ಸ್ವಿಮ್ಮರ್​ ಹಾಗಾಗಿ ಈ ಮೊದಲು ಮಾತನಾಡುವಾಗ ಸ್ವಿಮ್ಮಿಂಗ್ ಪೂಲ್​ನಲ್ಲಿ ಮದುವೆಯಾಗಬೇಕೆಂದು ಹೇಳಿಕೊಂಡಿದ್ರು. ಇದೇ ತರಹ ಇನ್ನೂ ತುಂಬಾ ಆಸೆಗಳನ್ನು ಹೇಳಿಕೊಂಡಿದ್ದರು. ಅದೇ ರೀತಿ ವಿವಾಹ ಸಿದ್ಧತೆ ನಡೆಸುವ ಪ್ಲಾನರ್​ ಬಳಿ ಮಾತನಾಡಿ ಮದುವೆಯ ಸಂಪೂರ್ಣ ತಯಾರಿ ಮಾಡಲಾಯಿತು. ವ್ಯಾಲೆಂಟೈನ್​ನಲ್ಲಿ ಏನಾದರೂ ಹೊಸತು ಬೇಕೆಂದು ಅನ್ನಿಸುತ್ತಿತ್ತು. ಇದೇ ದಿನ ನಮ್ಮಿಬ್ಬರ ವಿವಾಹವಾಗಿದೆ. ಈಗ ಪರಿಪೂರ್ಣ ಅನ್ನಿಸುತ್ತಿದೆ ಎಂದು ಮಾತನಾಡಿದರು.

ಸಿನಿಮಾ ಕುರಿತು ಮಾತನಾಡುವುದಾದ್ರೆ, ಲವ್​ಮಾಕ್ಟೇಲ್​-2 ಹಾಡು ರಿಲೀಸ್​ ಅಂತ ಮಾತ್ರ ಗೊತ್ತು. ಯಾವಾಗ ಎಂಬುದರ ದಿನವನ್ನು ಫಿಕ್ಸ್​ ಮಾಡಿಲ್ಲ. ನಾವಿಬ್ಬರೂ ಜೊತೆಯಾಗಿ ಸಿನಿಮಾ ಮಾಡುವ ಆಫರ್​ಗಳು ಬರುತ್ತಿವೆ. ಹೆಚ್ಚು ಹೆಚ್ಚು ನಮ್ಮ ಡೈರಕ್ಷನ್​ನಲ್ಲೇ ಸಿನಿಮಾ ಚಿತ್ರಿಸುವ ಆಸೆ ಇದೆ ಎಂದು ಅಭಿಪ್ರಾಯ ಹಂಚಿಕೊಂಡರು.

milana nagaraj and darling krishna marraige

ಮಿಲನಾ ನಾಗರಾಜ್​ ಮತ್ತು ಡಾರ್ಲಿಂಗ್ ಕೃಷ್ಣ ವಿವಾಹ ಮಂಟಪ

ಇದನ್ನೂ ಓದಿ: ಇಂದು ಪ್ರೇಮಿಗಳ ದಿನ.. ಸಪ್ತಪದಿ ತುಳಿಯುತ್ತಿದ್ದಾರೆ ಡಾರ್ಲಿಂಗ್​ ಕೃಷ್ಣ ಹಾಗೂ ಮಿಲನಾ ನಾಗರಾಜ್

milana nagaraj anf darling krishna 1

ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್