ಬಾಲಿವುಡ್​ನ ಈ ನಟಿಯರಿಗೆ ಪ್ರತಿ ಸಿನಿಮಾಗೆ ಸಿಗೋ ಸಂಭಾವನೆ ಎಷ್ಟು ಗೊತ್ತಾ?

| Updated By: ರಾಜೇಶ್ ದುಗ್ಗುಮನೆ

Updated on: Jul 25, 2024 | 10:49 AM

ಬಾಲಿವುಡ್​ನಲ್ಲಿ ಬಹುತೇಕ ಹೀರೋಯಿನ್​ಗಳು ಕೋಟಿ ಮೇಲೆಯೇ ಸಂಭಾವನೆ ಪಡೆಯುತ್ತಾರೆ. ಈ ಪೈಕಿ ಕೆಲವು ಸ್ಟಾರ್ ಹೀರೋಯಿನ್​ಗಳು 15-20 ಕೋಟಿ ರೂಪಾಯಿ ಸಂಭಾವನೆ ಪಡೆದ ಉದಾಹರಣೆಯೂ ಇದೆ. ಈ ಸಾಲಿನಲ್ಲಿ ದೀಪಿಕಾ ಪಡುಕೋಣೆ, ಆಲಿಯಾ ಭಟ್ ಮೊದಲಾದವರು ಇದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಬಾಲಿವುಡ್​ನ ಈ ನಟಿಯರಿಗೆ ಪ್ರತಿ ಸಿನಿಮಾಗೆ ಸಿಗೋ ಸಂಭಾವನೆ ಎಷ್ಟು ಗೊತ್ತಾ?
ಈ ನಟಿಯರ ಸಂಭಾವನೆ ಬಗ್ಗೆ ಇಲ್ಲಿದೆ ಮಾಹಿತಿ..
Follow us on

ಬಾಲಿವುಡ್ ಸಿನಿಮಾ ರಂಗದಲ್ಲಿ ಹೀರೋಗಳಷ್ಟೇ ಸಂಭಾವನೆ ಹೀರೋಯಿನ್​ಗಳಿಗೆ ಇಲ್ಲ. ಬಾಲಿವುಡ್​ನಲ್ಲಿ ಪ್ರತಿ ಸಿನಿಮಾಗೆ 100 ಕೋಟಿ ರೂಪಾಯಿ ಸಂಭಾವನೆ ಪಡೆಯೋ ಹೀರೋಗಳೂ ಇದ್ದಾರೆ. ಆದರೆ, ಹೀರೋಯಿನ್​ಗಳಿಗೆ ಇಷ್ಟುದ ದೊಡ್ಡ ಮೊತ್ತದ ಸಂಭಾವನೆ ಕೊಡಲ್ಲ. ಆದಾಗ್ಯೂ ಕೆಲವು ಹೀರೋಯಿನ್​ಗಳು ಉಳಿದ ನಟಿಯರಿಗಿಂತ ಹೆಚ್ಚಿನ ಮೊತ್ತ ಪಡೆಯುತ್ತಾರೆ. ಯಾವ ನಟಿಯರು ಎಷ್ಟು ಸಂಭಾವನೆ ಪಡೆಯುತ್ತಾರೆ ಅನ್ನೋ ಬಗ್ಗೆ ಇಲ್ಲಿದೆ ವಿವರ.

ದೀಪಿಕಾ ಪಡುಕೋಣೆ

ಸದ್ಯ ಟ್ರೆಂಡ್​ನಲ್ಲಿರೋ ಹೀರೋಯಿನ್​ಗಳ ಪೈಕಿ ದೀಪಿಕಾ ಪಡುಕೋಣೆ ಅವರು ಮೊದಲ ಸ್ಥಾನದಲ್ಲಿ ಇದ್ದಾರೆ. ಅವರು ಪ್ರತಿ ಚಿತ್ರಕ್ಕೆ 15-20 ಕೋಟಿ ರೂಪಾಯಿ ಪಡೆದುಕೊಳ್ಳುತ್ತಾರೆ. ಇತ್ತೀಚೆಗೆ ರಿಲೀಸ್ ಆದ ‘ಕಲ್ಕಿ 2898 ಎಡಿ’ ಸಿನಿಮಾಗಾಗಿ ಅವರು ದೊಡ್ಡ ಸಂಭಾವನೆ ಪಡೆದಿದ್ದರು. ಸದ್ಯ ಪ್ರೆಗ್ನೆಂಟ್ ಆಗಿರೋ ದೊಡ್ಡ ಬ್ರೇಕ್ ಪಡೆಯಲಿದ್ದಾರೆ.

ಆಲಿಯಾ ಭಟ್

ಆಲಿಯಾ ಭಟ್ ಅವರು ಈ ಲಿಸ್ಟ್​ನಲ್ಲಿ ಎರಡನೇ ಸ್ಥಾನದಲ್ಲಿ ಇದ್ದಾರೆ. ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲಿ. ಈಗ ಅವರು ಯಶ್ ರಾಜ್ ಫಿಲ್ಮ್ಸ್​ನ ಸ್ಪೈ ಯೂನಿವರ್ಸ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಅವರು ಆ್ಯಕ್ಷನ್ ಮೆರೆಯಲಿದ್ದಾರೆ. ಇದರ ಜೊತೆ ಅವರು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಲವ್ ಆ್ಯಂಡ್ ವಾರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ವಿಕ್ಕಿ ಹಾಗೂ ರಣಬೀರ್ ನಟಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಅವರು 15 ಕೋಟಿ ರೂಪಾಯಿ ಪಡೆದಿದ್ದಾರೆ.

ಕರೀನಾ ಕಪೂರ್

ಕರೀನಾ ಕಪೂರ್​ ಅವರಿಗೆ ಈ ಮೊದಲಿನಷ್ಟು ಬೇಡಿಕೆ ಇಲ್ಲ. ಅವರು ಪ್ರತಿ ಚಿತ್ರಕ್ಕೆ 8-11 ಕೋಟಿ ರೂಪಾಯಿ ಪಡೆದುಕೊಳ್ಳುತ್ತಾರೆ. ಇತ್ತೀಚೆಗೆ ರಿಲೀಸ್ ಆದ ಅವರ ನಟನೆಯ ‘ಕ್ರ್ಯೂ’ ಸಿನಿಮಾ ಮೆಚ್ಚುಗೆ ಪಡೆದಿದೆ.

ಕತ್ರಿನಾ ಕೈಫ್

ಕತ್ರಿನಾ ಕೈಫ್ ಹಾಗೂ ಶ್ರದ್ಧಾ ಕಪೂರ್ ಅವರು ಒಂದೇ ರೀತಿಯ ಸಂಭಾವನೆ ಪಡೆಯುತ್ತಾರೆ. ಇವರು ಪ್ರತಿ ಚಿತ್ರಕ್ಕೆ 8-10 ಕೋಟಿ ರೂಪಾಯಿ ತೆಹೆದುಕೊಳ್ಳುತ್ತಾರೆ. ಶ್ರದ್ಧಾ ಕಪೂರ್ ಅವರು ಇತ್ತೀಚೆಗೆ ಲ್ಯಾಂಬೋರ್ಗಿನಿ ಕಾರನ್ನು ಖರೀದಿ ಮಾಡಿದ್ದಾರೆ.

ಉಳಿದ ನಟಿಯರು.

ಕೃತಿ ಸನೋನ್, ಕಿಯಾರಾ ಅಡ್ವಾಣಿ, ಕಂಗನಾ ರಣಾವತ್, ತಾಪ್ಸೀ ಪನ್ನು ಅವರು ಪ್ರತಿ ಸಿನಿಮಾಗೆ 5-8 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ.

ಇದನ್ನೂ ಓದಿ: ಮಹೇಶ್ ಬಾಬು ದಾನ ಮಾಡೋ ಹಣದಲ್ಲಿ ಒಂದು ಬಿಗ್ ಬಜೆಟ್ ಸಿನಿಮಾ ಮಾಡಬಹುದು

ಮಹಿಳಾ ಪ್ರಧಾನ ಸಿನಿಮಾಗಳು ಗೆದ್ದ ಉದಾಹರಣೆ ಸಾಕಷ್ಟು ಇವೆ. ಅದೇ ರೀತಿ ಹೀರೋಯಿನ್​ಗಳಿಂದ ಸಿನಿಮಾ ಮೆಚ್ಚುಗೆ ಪಡೆದ ಉದಾಹರಣೆಯೂ ಇದೆ. ಹೀಗಾಗಿ, ಹೀರೋಯಿನ್​​ಗಳಿಗೆ ಹೆಚ್ಚಿನ ಮೊತ್ತ ನೀಡಲು ನಿರ್ಮಾಪಕರು ರೆಡಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.