ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಈ 12 ಜನರೇ ಪ್ರಮುಖ ಸಾಕ್ಷಿಗಳು
ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಅನೇಕರು ಅರೆಸ್ಟ್ ಆಗಿದ್ದಾರೆ. ಈ ಪ್ರಕರಣದಲ್ಲಿ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸರು ಈಗಾಗಲೇ 12 ಜನ ಸಾಕ್ಷಿಗಳ ವೀಡಿಯೋ ಹೇಳಿಕೆಯನ್ನು ದಾಖಲು ಮಾಡಿಕೊಂಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಈ 12 ಜನರೇ ಪ್ರಮುಖ ಸಾಕ್ಷಿಗಳು ಎಂದು ಪರಿಗಣಿಸಲಾಗಿದೆ.
ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ದರ್ಶನ್ ಅವರನ್ನು ಬಂಧಿಸಿ ಹಲವು ದಿನಗಳಕಾಲ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇದೇ ವೇಳೆ ಹಲವು ಜನರ ಹೇಳಿಕೆಗಳನ್ನು ದಾಖಲು ಮಾಡಿದ್ದಾರೆ. ಇನ್ನು ಕೆಲವೇ ವಾರಗಳಲ್ಲಿ ಪೊಲೀಸರು ಪ್ರಾಥಮಿಕ ಚಾರ್ಜ್ಶೀಟ್ ಸಲ್ಲಿಕೆ ಮಾಡಲಿದ್ದಾರೆ. ಈ ಮಧ್ಯೆ ಪ್ರಕರಣದಲ್ಲಿ ಪೊಲೀಸರು ಪಡೆದಿರುವ ಹೇಳಿಕೆಗಳು ಕೇಸ್ಗೆ ಮತ್ತಷ್ಟು ಪ್ರಾಮುಖ್ಯತೆ ನೀಡಲಿವೆ.
ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸರು ಈಗಾಗಲೇ 12 ಜನ ಸಾಕ್ಷಿಗಳ ವೀಡಿಯೋ ಹೇಳಿಕೆಯನ್ನು ದಾಖಲು ಮಾಡಿಕೊಂಡಿದ್ದಾರೆ. ನ್ಯಾಯಾಧೀಶರ ಮುಂದೆ CRPC 164 ಅಡಿಯಲ್ಲಿ 12 ಜನರ ಹೇಳಿಕೆ ದಾಖಲು ಮಾಡಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಈ 12 ಜನರೇ ಪ್ರಮುಖ ಸಾಕ್ಷಿಗಳು ಎಂದು ಪರಿಗಣಿಸಲಾಗಿದೆ.
- ಎ1 ಆರೋಪಿ ಪವಿತ್ರಾಗೌಡ ಮನೆಯ ಸಿಸಿಟಿವಿ ಡಿವಿಆರ್ ರಿಟ್ರೀವ್ ಮಾಡಿದ ಎಫ್ಎಸ್ಎಲ್ ಅಧಿಕಾರಿ CRPC 164 ಅಡಿ ಹೇಳಿಕೆ ನೀಡಿದ್ದಾರೆ.
- A2 ಆರೋಪಿ ದರ್ಶನ್ ಮನೆಯ ಡಿವಿಆರ್ ರಿಟ್ರೀವ್ ಮಾಡಿದ ಎಫ್ಎಸ್ಎಲ್ ಅಧಿಕಾರಿಗಳ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ.
- ಶವ ಸಾಗಿಸಿದ ಸ್ಕಾರ್ಫಿಯೋ ವಾಹನದ ಮಾಲೀಕ ಕೂಡ ಹೇಳಿಕೆ ನೀಡಿದ್ದಾನೆ.
- ಪಟ್ಟಣಗೆರೆ ಶೆಡ್ನ ಗುತ್ತಿಗೆದಾರನ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ.
- ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿದ್ದ ಕಾರು ಚಾಲಕನ ಹೇಳಿಕೆ ದಾಖಲು ಮಾಡಿಕೊಳ್ಳಾಗಿದೆ.
- ಆರೋಪಿಗಳು ರೇಣುಕಾಸ್ವಾಮಿಯನ್ನು ಹಲ್ಲೆ ಮಾಡಿದ ಬಳಿಕ ಪೋಟೋಗಳನ್ನು ಒರ್ವ ವ್ಯಕ್ತಿಗೆ ಕಳುಹಿಸಿದ್ದು, ಆತನ ಹೇಳಿಕೆ ತೆಗೆದುಕೊಳ್ಳಾಗಿದೆ.
- ಮೃತದೇಹ ಬಿಸಾಡಿದ ಬಳಿಕ ಆರೋಪಿಗಳಾದ ಕಾರ್ತಿಕ್ ಹಾಗೂ ನಿಖಿಲ್ ಆಟೋದಲ್ಲಿ ನಾಯಂಡಹಳ್ಳಿವರೆಗೂ ಬಂದಿದ್ದಾರೆ. ಈ ವೇಳೆ ಡ್ರಾಪ್ ಮಾಡಿದ್ದ ಆಟೋ ಚಾಲಕನ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ.
- ಪಟ್ಟಣಗೆರೆ ಶೆಡ್ನಲ್ಲಿ ಕೆಲಸ ಮಾಡುತ್ತಿದ್ದ ಕಿರಣ್ ಎಂಬಾತನ ಹೇಳಿಕೆ ಪಡೆದುಕೊಳ್ಳಲಾಗಿದೆ.
- ಪಟ್ಟಣಗೆರೆ ಶೆಡ್ನಲ್ಲಿ ಕೆಲಸ ಮಾಡ್ತಾ ಇದ್ದ ಪ್ರವೀಣ್ ಎಂಬಾತನ ಹೇಳಿಕೆ ಪಡೆಯಲಾಗಿದೆ.
- ಆರೋಪಿಗಳ ಸಂಪರ್ಕದಲ್ಲಿ ಇದ್ದ ಮುತ್ತಿರಾಜ್ ಎಂಬಾತನ ಹೇಳಿಕೆ ತೆಗೆದುಕೊಳ್ಳಲಾಗಿದೆ.
- ರೇಣುಕಾಸ್ವಾಮಿಯನ್ನು ಚಿತ್ರದುರ್ಗದಲ್ಲಿ ಆಟೋದಲ್ಲಿ ಕಿಡ್ನಾಪ್ ಮಾಡಿದ್ದಾಗ ಆಟೋ ಚಾಲಕನ ಹೇಳಿಕೆ ಪಡೆಯಲಾಗಿದೆ.
- ಜೂನ್ 8 ರಂದು ಶೆಡ್ನಲ್ಲಿ ಇದ್ದ ಸೆಕ್ಯುರಿಟಿ ಗಾರ್ಡ್ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ.
ಇಷ್ಟೇ ಅಲ್ಲದೆ ಇನ್ನು ಕೆಲ ಸಾಕ್ಷಿಗಳ ಹೇಳಿಕೆಯನ್ನ CRPC 164 ಅಡಿ ದಾಖಲಿಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಕೊಲೆ ಪ್ರಕರಣದಲ್ಲಿ CRPC 164 ಅಡಿಯಲ್ಲಿ ದಾಖಲಾದ ಹೇಳಿಕೆಗಳು ಮಹತ್ವ ಪಡೆಯಲಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.