‘ಪಠಾಣ್​ ಶೂಟಿಂಗ್ ಸೆಟ್​​ನಲ್ಲಿ ಎಲ್ಲರೂ ಕೋರಿಕೊಳ್ಳುತ್ತಿದ್ದುದು ಒಂದೇ’; ದೀಪಿಕಾ ಬಿಚ್ಚಿಟ್ರು ಕುತೂಹಲಕಾರಿ ವಿಚಾರ

ದೀಪಿಕಾ ಪಡುಕೋಣೆ ಅವರಿಗೂ ಈ ಸಿನಿಮಾ ಗೆಲುವು ತುಂಬಾನೇ ಮುಖ್ಯ ಆಗಿತ್ತು. 2018ರಲ್ಲಿ ರಿಲೀಸ್ ಆದ ‘ಪದ್ಮಾವತ್​’ ಚಿತ್ರ ಸೂಪರ್ ಹಿಟ್ ಆಯಿತು. ಅದಾದ ಬಳಿಕ ಅವರ ಯಾವುದೇ ಚಿತ್ರ ಯಶಸ್ಸು ಕಂಡಿಲ್ಲ.

‘ಪಠಾಣ್​ ಶೂಟಿಂಗ್ ಸೆಟ್​​ನಲ್ಲಿ ಎಲ್ಲರೂ ಕೋರಿಕೊಳ್ಳುತ್ತಿದ್ದುದು ಒಂದೇ’; ದೀಪಿಕಾ ಬಿಚ್ಚಿಟ್ರು ಕುತೂಹಲಕಾರಿ ವಿಚಾರ
ಶಾರುಖ್​-ದೀಪಿಕಾ

Updated on: Feb 28, 2023 | 12:17 PM

ಶಾರುಖ್ ಖಾನ್​ (Shah Rukh Khan) ಹಾಗೂ ದೀಪಿಕಾ ಪಡುಕೋಣೆ ನಟನೆಯ ‘ಪಠಾಣ್​’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಯಶಸ್ಸು ಕಂಡಿದೆ. ಈ ಚಿತ್ರದ ಕಲೆಕ್ಷನ್ 1000 ಕೋಟಿ ರೂಪಾಯಿ ದಾಟಿದೆ. ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್​ ಕಂಡ ಅತಿ ದೊಡ್ಡ ಹಿಟ್ ಚಿತ್ರ ಎಂಬ ಖ್ಯಾತಿ ಇದಕ್ಕೆ ಸಿಕ್ಕಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಶಾರುಖ್ ಖಾನ್​ಗೆ ಈ ಗೆಲುವಿನ ಅವಶ್ಯಕತೆ ಅತಿಯಾಗಿತ್ತು. ಶಾರುಖ್​ ಖಾನ್​ಗೆ ಆ ಗೆಲುವು ಸಿಕ್ಕಿದೆ. ಈ ಗೆಲುವಿನ ಬಗ್ಗೆ ‘ಪ್ರೀತಿ ಮತ್ತು ಆಶೀರ್ವಾದ ಮರಳಿ ಬರುತ್ತಿದೆ’ ಎಂದು ದೀಪಿಕಾ ಹೇಳಿದ್ದಾರೆ.

‘ಪಠಾಣ್​ ಸಿನಿಮಾ ಸೆಟ್​ನಲ್ಲಿ ಎಲ್ಲರೂ ‘ಈ ಸಿನಿಮಾ ಶಾರುಖ್ ಖಾನ್​ಗೆ ದೊಡ್ಡ ಗೆಲುವು ತಂದುಕೊಡಲಿ’ ಎಂದು ಕೋರುತ್ತಿದ್ದರಂತೆ. ‘ಈ ಸಿನಿಮಾ ಗೆಲ್ಲಬೇಕು ಎಂದು ಎಲ್ಲರೂ ಕೋರುತ್ತಿದ್ದೆವು. ನೀವು ಕೊಟ್ಟ ಪ್ರೀತಿ ಹಾಗೂ ಆಶೀರ್ವಾದ ಮರಳಿ ಬರುತ್ತಿದೆ ಎಂದು ನಾನು ಶಾರುಖ್ ಖಾನ್ ಹಾಗೂ ಗೌರಿ ಖಾನ್​ಗೆ (ಶಾರುಖ್ ಖಾನ್ ಪತ್ನಿ) ಹೇಳುತ್ತಿದ್ದೆ. ಇದರಲ್ಲಿ ಯಾವುದೇ ಲಾಜಿಕ್ ಇಲ್ಲ. ಇದು ನಮ್ಮ ನಂಬಿಕೆ’ ಎಂದಿದ್ದಾರೆ ದೀಪಿಕಾ.

ದೀಪಿಕಾ ಪಡುಕೋಣೆ ಅವರಿಗೂ ಈ ಸಿನಿಮಾ ಗೆಲುವು ತುಂಬಾನೇ ಮುಖ್ಯ ಆಗಿತ್ತು. 2018ರಲ್ಲಿ ರಿಲೀಸ್ ಆದ ‘ಪದ್ಮಾವತ್​’ ಚಿತ್ರ ಸೂಪರ್ ಹಿಟ್ ಆಯಿತು. ಅದಾದ ಬಳಿಕ ಅವರ ಯಾವುದೇ ಚಿತ್ರ ಯಶಸ್ಸು ಕಂಡಿಲ್ಲ. ‘ಚಪಾಕ್​’ ಸಿನಿಮಾ ಸೋತಿದೆ. ‘83’ ಕೂಡ ದೊಡ್ಡ ಗೆಲುವು ಕಾಣಬಹುದು ಎಂದುಕೊಳ್ಳಲಾಗಿತ್ತು. ಆದರೆ, ಹಾಗಾಗಿಲ್ಲ. ‘ಗೆಹರಾಯಿಯಾ’ ಚಿತ್ರ ಕೂಡ ಯಶಸ್ಸು ಕಂಡಿಲ್ಲ. ನಾಲ್ಕು ವರ್ಷಗಳ ಬಳಿಕ ಅವರು ದೊಡ್ಡ ಕಂಬ್ಯಾಕ್ ಮಾಡಿದ್ದಾರೆ. ಸದ್ಯ ಅವರು, ‘ಜವಾನ್​’, ‘ಪ್ರಾಜೆಕ್ಟ್​ ಕೆ’ ಹಾಗೂ ‘ಫೈಟರ್​’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.

‘ಪಠಾಣ್​’ ಲಾಭ ಎಷ್ಟು?

ಜನವರಿ 25ರಂದು ‘ಪಠಾಣ್​’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರ ಮೊದಲ ವೀಕೆಂಡ್​ನಲ್ಲಿ ಅಬ್ಬರದ ಕಲೆಕ್ಷನ್ ಮಾಡಿತು. ಈ ಚಿತ್ರ ಹಿಂದಿ ಬಾಕ್ಸ್ ಆಫೀಸ್​ನಲ್ಲಿ ಯಶ್ ನಟನೆಯ ‘ಕೆಜಿಎಫ್ 2’ ಮಾಡಿದ ದಾಖಲೆಗಳನ್ನು ಮುರಿದು ಹಾಕಿತು. ಭಾರತದಲ್ಲಿ ಈ ಚಿತ್ರ 500+ ಕೋಟಿ ರೂಪಾಯಿ ಕಮಾಯಿ ಮಾಡಿದೆ. ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಚಿತ್ರದ ಗಳಿಕೆ 1000 ಕೋಟಿ ರೂಪಾಯಿ ದಾಟಿದೆ.

‘ಪಠಾಣ್​’ ಚಿತ್ರದಿಂದ ಆದಿತ್ಯ ಚೋಪ್ರಾಗೆ 662 ಕೋಟಿ ರೂಪಾಯಿ ಲಾಭ ಆಗಿದೆ ಎಂದು ವರದಿ ಆಗಿದೆ. ಬಾಲಿವುಡ್ ಇತಿಹಾಸದಲ್ಲಿ ಇಷ್ಟು ದೊಡ್ಡ ಮೊತ್ತದ ಲಾಭ ಕಂಡ ಏಕೈಕ ನಿರ್ಮಾಪಕ ಎಂಬ ಹೆಗ್ಗಳಿಕೆಗೆ ಆದಿತ್ಯ ಚೋಪ್ರಾ ಪಾತ್ರರಾಗಿದ್ದಾರೆ. ಈ ಮೊದಲು ‘ದಂಗಲ್​’ ಚಿತ್ರದಿಂದ ನಿರ್ಮಾಪಕ ಆಮಿರ್ ಖಾನ್​ಗೆ 600 ಕೋಟಿ ರೂಪಾಯಿ ಲಾಭ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:17 pm, Tue, 28 February 23

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us