AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೌರಾಣಿಕದ ಈ ಪಾತ್ರದ ಮೂಲಕ ಇತಿಹಾಸ ನಿರ್ಮಿಸಲು ದೀಪಿಕಾ ರೆಡಿ

ಬಾಲಿವುಡ್​ನಲ್ಲಿ ಸೋಲಿಲ್ಲದೇ ಸಾಗ್ತಿರೋ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಈಗ ತನ್ನ ಯಶಸ್ಸಿಗೆ ಮತ್ತೊಂದು ಮಹತ್ತರ ಇತಿಹಾಸವನ್ನ ಸೇರಿಸೋಕೆ ಮುಂದಾಗಿದ್ದಾರೆ. ಐತಿಹಾಸಿಕ ಪಾತ್ರದಲ್ಲಿ ಯಶಸ್ಸು ಪಡೆದಿರುವ ಡಿಪ್ಪಿ ಪಾಂಡವರ ಹೆಂಡತಿ ದ್ರೌಪದಿಯಾಗಿ ಬಣ್ಣ ಹಚ್ಚಲಿದ್ದಾರೆ. ದೀಪಿಕಾ ಪಡುಕೋಣೆ. ಬಿಟೌನ್​ಗೆ ಕಾಲಿಟ್ಟಾಗಿನಿಂದಲೂ ಗಮನ ಸೆಳೆದಿರೋ ನಟಿ. ಅದ್ರಲ್ಲೂ, ಸ್ಟೈಲಿಸ್ ಪಾತ್ರಗಳಿಗಿಂತ ಹೆಚ್ಚಾಗಿ ಐತಿಹಾಸಿಕ ಪಾತ್ರಗಳಲ್ಲಿ ದೀಪಿಕಾ ಮತ್ತಷ್ಟು ಇಷ್ಟವಾಗ್ತಾರೆ. ದೀಪಿಕಾ ಮಾಡಿರೋ ಐತಿಹಾಸಿಕ ಪಾತ್ರಗಳೆಲ್ಲವೂ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು ಸೂಪರ್ ಹಿಟ್ ಆಗಿವೆ. ಸದ್ಯ ಪೌರಾಣಿಕ ಪಾತ್ರದಲ್ಲಿ […]

ಪೌರಾಣಿಕದ ಈ ಪಾತ್ರದ ಮೂಲಕ ಇತಿಹಾಸ ನಿರ್ಮಿಸಲು ದೀಪಿಕಾ ರೆಡಿ
ಸಾಧು ಶ್ರೀನಾಥ್​
| Edited By: |

Updated on:Nov 24, 2020 | 7:44 AM

Share

ಬಾಲಿವುಡ್​ನಲ್ಲಿ ಸೋಲಿಲ್ಲದೇ ಸಾಗ್ತಿರೋ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಈಗ ತನ್ನ ಯಶಸ್ಸಿಗೆ ಮತ್ತೊಂದು ಮಹತ್ತರ ಇತಿಹಾಸವನ್ನ ಸೇರಿಸೋಕೆ ಮುಂದಾಗಿದ್ದಾರೆ. ಐತಿಹಾಸಿಕ ಪಾತ್ರದಲ್ಲಿ ಯಶಸ್ಸು ಪಡೆದಿರುವ ಡಿಪ್ಪಿ ಪಾಂಡವರ ಹೆಂಡತಿ ದ್ರೌಪದಿಯಾಗಿ ಬಣ್ಣ ಹಚ್ಚಲಿದ್ದಾರೆ.

ದೀಪಿಕಾ ಪಡುಕೋಣೆ. ಬಿಟೌನ್​ಗೆ ಕಾಲಿಟ್ಟಾಗಿನಿಂದಲೂ ಗಮನ ಸೆಳೆದಿರೋ ನಟಿ. ಅದ್ರಲ್ಲೂ, ಸ್ಟೈಲಿಸ್ ಪಾತ್ರಗಳಿಗಿಂತ ಹೆಚ್ಚಾಗಿ ಐತಿಹಾಸಿಕ ಪಾತ್ರಗಳಲ್ಲಿ ದೀಪಿಕಾ ಮತ್ತಷ್ಟು ಇಷ್ಟವಾಗ್ತಾರೆ. ದೀಪಿಕಾ ಮಾಡಿರೋ ಐತಿಹಾಸಿಕ ಪಾತ್ರಗಳೆಲ್ಲವೂ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು ಸೂಪರ್ ಹಿಟ್ ಆಗಿವೆ. ಸದ್ಯ ಪೌರಾಣಿಕ ಪಾತ್ರದಲ್ಲಿ ಅಭಿನಯಿಸಲು ಡಿಪ್ಪಿ ಸಜ್ಜಾಗಿದ್ದಾರೆ.

ಬಾಜಿರಾವ್​ ಮಸ್ತಾನಿ, ಪದ್ಮಾವತ್ ಪಾತ್ರಗಳ ನಂತ್ರ ಸದ್ಯ ಡಿಪ್ಪಿ ದ್ರೌಪದಿ ಅವತಾರ ತಾಳಲಿದ್ದಾರೆ. ಬಾಲಿವುಡ್​ನಲ್ಲಿ ಬಿಗ್​ ಬಜೆಟ್​ನಲ್ಲಿ ತಯಾರಾಗ್ತಿರೋ ಮಹಾಭಾರತ ಸಿನಿಮಾದಲ್ಲಿ ದೀಪಿಕಾ ದ್ರೌಪದಿ ಪಾತ್ರ ಮಾಡಲಿದ್ದಾರಂತೆ. ಈ ಬಿಸಿ ಬಿಸಿ ಸುದ್ದಿ ಬಾಲಿವುಡ್​ನಲ್ಲಿ ಸಂಚಲನ ಮೂಡಿಸಿದೆ. ಮಹಾಭಾರತದ ಬಗ್ಗೆ ಮಾತ್ನಾಡಿರೋ ಡಿಪ್ಪಿ, ಇದೊಂದು ಅದೃಷ್ಟವೇ ಸರಿ. ಈ ಪಾತ್ರ ಜೀವನದ ಅತ್ಯುನ್ನತ ಪಾತ್ರವಾಗಲಿದೆ ಅಂತಾ ಹೇಳಿಕೊಂಡಿದ್ದಾರೆ. ಈ ಮೂಲಕ ದೀಪಿಕಾ ದ್ರೌಪದಿಯಾಗೋಕೆ ಎಷ್ಟು ಖುಷಿಯಾಗಿದ್ದಾರೆ ಅನ್ನೋದನ್ನ ಹಂಚಿಕೊಂಡಿದ್ದಾರೆ.

ಮಹಾಭಾರತಕ್ಕೆ ಬಂಡವಾಳ ಹಾಕ್ತಿರೋದು ನಿರ್ಮಾಪಕ ಮಧುಮಂತೆನಾ. ಅಭಿನಯದ ಜೊತೆಗೆ ದೀಪಿಕಾ ಕೂಡ ನಿರ್ಮಾಣದಲ್ಲಿ ಪಾಲು ಪಡೆದಿದ್ದಾರೆ. ಹಾಗಾಗಿ, ಭಾರತೀಯ ಚಿತ್ರರಂಗದ ಅತಿರಥ, ಮಹಾರಥರನ್ನೆಲ್ಲಾ ದೀಪಿಕಾ ಮತ್ತು ಮಧು ಮಹಾಭಾರತಕ್ಕೆ ಕರೆತರೋ ಪ್ರಯತ್ನದಲ್ಲಿದ್ದಾರಂತೆ. ಒಟ್ಟಾರೆ ಈ ಸುದ್ದಿ ಅಭಿಮಾನಿಗಳಲ್ಲೂ ಕುತೂಹಲ ಮೂಡಿಸಿದೆ. ದೀಪಿಕಾ ದ್ರೌಪದಿ ಅವತಾರದಲ್ಲಿ ಹೇಗೆ ಕಾಣ್ತಾರೆ ಅನ್ನೋ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

Published On - 7:13 am, Sat, 26 October 19