Devara Collection: ಬಾಕ್ಸ್ ಆಫೀಸ್​ನಲ್ಲಿ ‘ದೇವರ’ ಕಮಾಲ್; ದಾಖಲೆಗಳೆಲ್ಲ ಉಡೀಸ್

‘ದೇವರ’ ಸಿನಿಮಾ ಮೊದಲ ದಿನ ಭಾರತದ ಬಾಕ್ಸ್ ಆಫೀಸ್​ನಲ್ಲಿ 77 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ತೆಲುಗು ಭಾಷೆಯಿಂದ 68 ಕೋಟಿ ರೂಪಾಯಿ, ಹಿಂದಿಯಿಂದ 7 ಕೋಟಿ ರೂಪಾಯಿ, ಕನ್ನಡ ಹಾಗೂ ಮಲಯಾಳಂನಿಂದ ತಲಾ 30 ಲಕ್ಷ ರೂಪಾಯಿ ಮತ್ತು ತಮಿಳಿನಿಂದ 80 ಲಕ್ಷ ರೂಪಾಯಿ ಹರಿದು ಬಂದಿದೆ.

Devara Collection: ಬಾಕ್ಸ್ ಆಫೀಸ್​ನಲ್ಲಿ ‘ದೇವರ’ ಕಮಾಲ್; ದಾಖಲೆಗಳೆಲ್ಲ ಉಡೀಸ್
ದೇವರ

Updated on: Sep 28, 2024 | 8:36 AM

ಜೂನಿಯರ್ ಎನ್​ಟಿಆರ್ ನಟನೆಯ, ಕೊರಟಾಲ ಶಿವ ನಿರ್ದೇಶನದ ‘ದೇವರ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಗೆಲುವು ಕಂಡಿದೆ. ಈ ಚಿತ್ರ ವಿಮರ್ಶೆಯಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದ ಹೊರತಾಗಿಯೂ ಜನರು ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಈ ಕಾರಣದಿಂದ ಸಿನಿಮಾ ಭರ್ಜರಿ ಕಮಾಯಿ ಮಾಡಿದೆ. ಈ ಚಿತ್ರದ ಒಟ್ಟಾರೆ ಗಳಿಕೆ ಎಷ್ಟು? ಮುಂದಿನ ದಿನಗಳಲ್ಲಿ ಕಲೆಕ್ಷನ್ ಹೇಗಿರಬಹುದು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

‘ದೇವರ’ ಸಿನಿಮಾ ಮೊದಲ ದಿನ ಭಾರತದ ಬಾಕ್ಸ್ ಆಫೀಸ್​ನಲ್ಲಿ 77 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ತೆಲುಗು ಭಾಷೆಯಿಂದ 68 ಕೋಟಿ ರೂಪಾಯಿ, ಹಿಂದಿಯಿಂದ 7 ಕೋಟಿ ರೂಪಾಯಿ, ಕನ್ನಡ ಹಾಗೂ ಮಲಯಾಳಂನಿಂದ ತಲಾ 30 ಲಕ್ಷ ರೂಪಾಯಿ ಮತ್ತು ತಮಿಳಿನಿಂದ 80 ಲಕ್ಷ ರೂಪಾಯಿ ಹರಿದು ಬಂದಿದೆ.

ಇನ್ನು, ವಿಶ್ವ ಬಾಕ್ಸ್ ಆಫೀಸ್​ನಲ್ಲೂ ‘ದೇವರ’ ಅಬ್ಬರಿಸಿದೆ. ಈ ಚಿತ್ರ ವಿಶ್ವ ಮಟ್ಟದಲ್ಲಿ 140 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನಲಾಗಿದೆ. ಅಂದರೆ, ಭಾರತದ ಬಾಕ್ಸ್ ಆಫೀಸ್​ನಲ್ಲಿ ಸಿನಿಮಾ ಎಷ್ಟು ಗಳಿಕೆ ಮಾಡಿದೆಯೋ ಸುಮಾರು ಅಷ್ಟೇ ದೊಡ್ಡ ಮೊತ್ತವನ್ನು ವಿದೇಶದಲ್ಲೂ ಸಿನಿಮಾ ಮಾಡಿದೆ.

ಇದನ್ನೂ ಓದಿ: ವಿಶೇಷ ವಸ್ತು ಹಿಡಿದು ಹಿಡಿದು ‘ದೇವರ’ ಸಿನಿಮಾ ನೋಡಿದ ಪ್ರಶಾಂತ್ ನೀಲ್ ಪತ್ನಿ

‘ದೇವರ’ ಸಿನಿಮಾ ಬಗ್ಗೆ ಜನರಿಗೆ ನಿರೀಕ್ಷೆ ಸೃಷ್ಟಿ ಆಗಲು ಹಲವು ಕಾರಣಗಳು ಇದ್ದವು. ಆರು ವರ್ಷಗಳ ಬಳಿಕ ಜೂನಿಯರ್ ಎನ್​ಟಿಆರ್ ನಟನೆಯ ಸಿನಿಮಾ ಸೋಲೋ ರಿಲೀಸ್ ಕಂಡಿದೆ. ಈ ಕಾರಣಕ್ಕೂ ನಿರೀಕ್ಷೆ ಹೆಚ್ಚಿತ್ತು. ಸಿನಿಮಾದಲ್ಲಿ ಅದ್ದೂರಿ ಸೆಟ್​ಗಳಿದ್ದವು. ಆದರೆ, ಕಥೆಯಲ್ಲಿ ಗಟ್ಟಿತನ ಇಲ್ಲದ ಕಾರಣ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us