ವಿಶೇಷ ವಸ್ತು ಹಿಡಿದು ಹಿಡಿದು ‘ದೇವರ’ ಸಿನಿಮಾ ನೋಡಿದ ಪ್ರಶಾಂತ್ ನೀಲ್ ಪತ್ನಿ
Devara Movie: ಜೂ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾ ನೋಡಲು ವಿಶಲ್ ತೆಗೆದುಕೊಂಡು ಚಿತ್ರಮಂದಿರಕ್ಕೆ ಹೋದ ಪ್ರಶಾಂತ್ ನೀಲ್ ಪತ್ನಿ ಲಿಖಿತಾ ರೆಡ್ಡಿ. ಅಂದಹಾಗೆ ಜೂ ಎನ್ಟಿಆರ್ ಮುಂದಿನ ಸಿನಿಮಾ ನಿರ್ದೇಶಿಸುತ್ತಿರುವುದು ಪ್ರಶಾಂತ್ ನೀಲ್
ಪ್ರಶಾಂತ್ ನೀಲ್ ಪತ್ನಿ ಲಿಖಿತಾ ರೆಡ್ಡಿ ಅವರು ಚಿತ್ರರಂಗದಲ್ಲಿ ಸಂಪೂರ್ಣವಾಗಿ ಆ್ಯಕ್ಟೀವ್ ಆಗಿಲ್ಲ. ಆದರೆ, ಆಗಾಗ ಅವರು ಸಿನಿಮಾಗಳಿಗೆ ಬೆಂಬಲ ನೀಡುವ ಕೆಲಸ ಮಾಡುತ್ತಾರೆ. ಹೊಸ ಸಿನಿಮಾ ರಿಲೀಸ್ ಆದರೆ ಈ ಬಗ್ಗೆ ಪೋಸ್ಟ್ ಮಾಡುತ್ತಾರೆ. ಈಗ ಅವರು ‘ದೇವರ’ ಸಿನಿಮಾನ ವೀಕ್ಷಣೆ ಮಾಡಿದ್ದಾರೆ. ವಿಶೇಷ ವಸ್ತುವಿನ ಜೊತೆಗೆ ಅವರು ಈ ಸಿನಿಮಾ ನೋಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಪ್ರಶಾಂತ್ ನೀಲ್, ಜಾನ್ವಿ ಕಪೂರ್ ಅಭಿನಯದ ‘ದೇವರ’ ಸಿನಿಮಾ ಇಂದು (ಸೆಪ್ಟೆಂಬರ್ 27) ಬಿಡುಗಡೆ ಕಂಡಿದೆ. ಜೂನಿಯರ್ ಎನ್ಟಿಆರ್ ಅವರ ನಟನೆಯನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಜೂನಿಯರ್ ಎನ್ಟಿಆರ್ ಹಾಗೂ ಕೊರಟಾಲ ಶಿವ ಅವರು ಒಟ್ಟಾಗಿ ಕೆಲಸ ಮಾಡಿದ ಈ ಚಿತ್ರವನ್ನು ಜನರು ಮೆಚ್ಚಿಕೊಳ್ಳುತ್ತಿದ್ದಾರೆ. ಕೆಲವರು ಅಪಸ್ವರ ತೆಗೆದಿದ್ದಾರೆ. ಈ ಚಿತ್ರವನ್ನು ಮೊದಲ ದಿನ ಮೊದಲ ಶೋ ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕೂಡ ಸಿನಿಮಾ ವೀಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ:‘ದೇವರ’ ಬಿಡುಗಡೆ, ಜೂ ಎನ್ಟಿಆರ್ ಬೃಹತ್ ಕಟೌಟ್ಗೆ ಬೆಂಕಿ: ವಿಡಿಯೋ ನೋಡಿ
ಲಿಖಿತಾ ರೆಡ್ಡಿ ಅವರು ಪತಿ ಪ್ರಶಾಂತ್ ನೀಲ್ ಜೊತೆ ‘ದೇವರ’ ನೋಡಿದ್ದಾರೆ ಎಂದು ಹೇಳಲಾಗಿದೆ. ಈ ವೇಳೆ ಅವರು ವಿಸಿಲ್ ತೆಗೆದುಕೊಂಡು ಹೋಗಿದ್ದಾರೆ. ಜೂನಿಯರ್ ಎನ್ಟಿಆರ್ ಅವರ ಎಂಟ್ರಿಗೆ ವಿಸಿಲ್ ಹೊಡೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಸಿಲ್ನ ಫೋಟೋನ ಅವರು ಹಂಚಿಕೊಂಡಿದ್ದಾರೆ.
ಲಿಖಿತಾ ರೆಡ್ಡಿ ಅವರು ‘ದೇವರ’ ಸಿನಿಮಾಗೆ ಇಷ್ಟು ಬೆಂಬಲ ನೀಡಲು ಒಂದು ಕಾರಣ ಇದೆ. ಪತಿ ಪ್ರಶಾಂತ್ ನೀಲ್ ಅವರ ಮುಂದಿನ ಚಿತ್ರ ಇರೋದು ಜೂನಿಯರ್ ಎನ್ಟಿಆರ್ ಜೊತೆಯೇ. ಈ ಬಗ್ಗೆ ಘೋಷಣೆ ಕೂಡ ಆಗಿದೆ. ಈ ಚಿತ್ರಕ್ಕೆ ‘ಡ್ರ್ಯಾಗನ್’ ಎಂದು ಟೈಟಲ್ ಇಡಲಾಗಿದೆಯಂತೆ. ಪ್ರಶಾಂತ್ ನೀಲ್-ಜೂನಿಯರ್ ಎನ್ಟಿಆರ್ ಸಿನಿಮಾದ ಕೆಲಸ ಯಾವಾಗ ಆರಂಭ ಆಗಲಿದೆ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಮೂಡಿದೆ.
ಇತ್ತೀಚೆಗೆ ಜೂನಿಯರ್ ಎನ್ಟಿಆರ್ ಅವರು ಕುಂದಾಪುರಕ್ಕೆ ಬಂದಿದ್ದರು. ಆಗ ಪ್ರಶಾಂತ್ ನೀಲ್ ಕೂಡ ಇದ್ದರು. ಈ ವೇಳೆ ಸಿನಿಮಾ ಕೆಲಸಗಳ ಬಗ್ಗೆ ಚರ್ಚೆ ಬಿಟ್ಟು ಪ್ರಕೃತಿ ಸೌಂದರ್ಯ ಎಂಜಾಯ್ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:49 pm, Fri, 27 September 24