ದೆವ್ವ-ಭೂತದ ಸಿನಿಮಾ ಇಷ್ಟಪಡುವವರಿಗೆ ಈ ದೀಪಾವಳಿಯಲ್ಲಿ ಧಮಾಕಾ; ಬಂತು ಹೊಸ ಟೀಸರ್

ಬಾಕ್ಸ್​ ಆಫೀಸ್​ನಲ್ಲಿ ಈ ವರ್ಷ ಹಾರರ್​ ಸಿನಿಮಾಗಳೇ ಹೆಚ್ಚಾಗಿ ಅಬ್ಬರಿಸುತ್ತಿವೆ. ಥಿಯೇಟರ್​ನಲ್ಲಿ ಮೈ ಜುಂ ಎನ್ನಿಸುವಂತಹ ದೆವ್ವ-ಭೂತದ ಕಥೆಯನ್ನು ನೋಡಬೇಕೆಂದು ಬಯಸುವ ಪ್ರೇಕ್ಷಕರಿಗಾಗಿ ಈ ವರ್ಷದ ದೀಪಾವಳಿ ಹಬ್ಬಕ್ಕೆ ‘ಭೂಲ್​ ಭುಲಯ್​ 3’ ಸಿನಿಮಾವನ್ನು ಬಿಡುಗಡೆ ಮಾಡಲಾಗುವುದು. ಈಗ ಟೀಸರ್​ ಮೂಲಕ ಈ ಸಿನಿಮಾದ ಹೈಪ್​ ಹೆಚ್ಚಿಸಲಾಗಿದೆ.

ದೆವ್ವ-ಭೂತದ ಸಿನಿಮಾ ಇಷ್ಟಪಡುವವರಿಗೆ ಈ ದೀಪಾವಳಿಯಲ್ಲಿ ಧಮಾಕಾ; ಬಂತು ಹೊಸ ಟೀಸರ್
ವಿದ್ಯಾ ಬಾಲನ್
Follow us
ಮದನ್​ ಕುಮಾರ್​
|

Updated on: Sep 27, 2024 | 6:30 PM

ಸದ್ಯಕ್ಕೆ ಪ್ರೇಕ್ಷಕರು ಹಾರರ್ ಸಿನಿಮಾಗಳ ಕಡೆಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಬಾಲಿವುಡ್​ನಲ್ಲಿ ಈ ವರ್ಷ ‘ಮುಂಜ್ಯ’, ‘ಸ್ತ್ರೀ 2’ ಸಿನಿಮಾಗಳು ಸೂಪರ್​ ಹಿಟ್​ ಆಗಿವೆ. ಶ್ರದ್ಧಾ ಕಪೂರ್​ ನಟನೆಯ ‘ಸ್ತ್ರೀ 2’ ಚಿತ್ರ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಬಾಲಿವುಡ್​ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ. ವಾತಾವರಣ ಹೀಗಿರುವಾಗ ಇನ್ನೊಂದು ಹಾರರ್​ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಹೌದು, ‘ಭೂಲ್​ ಭುಲಯ್ಯ 3’ ಸಿನಿಮಾ ಈ ವರ್ಷದ ದೀಪಾವಳಿ ಹಬ್ಬದಲ್ಲಿ ರಿಲೀಸ್​ ಆಗಲಿದೆ. ಸಿನಿಮಾ ಹೇಗಿದೆ ಎಂಬುದರ ಝಲಕ್ ತೋರಿಸಲು ಹೊಸ ಟೀಸರ್​ ರಿಲೀಸ್​ ಮಾಡಲಾಗಿದೆ.

‘ಭೂಲ್​ ಭುಲಯ್ಯ’ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​, ವಿದ್ಯಾ ಬಾಲನ್ ಅವರು ಪ್ರಮುಖ ಪಾತ್ರ ಮಾಡಿದ್ದರು. ‘ಭೂಲ್​ ಭುಲಯ್ಯ 2’ ಸಿನಿಮಾದಲ್ಲಿ ಅವರ ಬದಲು ಕಾರ್ತಿಕ್​ ಆರ್ಯನ್​, ಟಬು, ಕಿಯಾರಾ ಅಡ್ವಾನಿ ನಟಿಸಿದ್ದರು. ಈ ಎರಡೂ ಸಿನಿಮಾಗಳು ಸೂಪರ್​ ಹಿಟ್​ ಆಗಿದ್ದವು. ಈಗ ‘ಭೂಲ್​ ಭುಲಯ್ಯ 3’ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಈ ಸಿನಿಮಾದಲ್ಲಿ ಮತ್ತೆ ವಿದ್ಯಾ ಬಾಲನ್ ಬಣ್ಣ ಹಚ್ಚಿದ್ದಾರೆ ಎಂಬುದು ವಿಶೇಷ. ಹೀರೋ ಪಾತ್ರದಲ್ಲಿ ಕಾರ್ತಿಕ್​ ಆರ್ಯನ್​ ಮುಂದುವರಿದಿದ್ದಾರೆ.

ಮಂಜುಲಿಕಾ ಎಂಬ ಪಾತ್ರದಲ್ಲಿ ವಿದ್ಯಾ ಬಾಲಯ್​ ಅವರು ಭಯ ಹುಟ್ಟಿಸಲಿದ್ದಾರೆ. ಟೀಸರ್​ನಲ್ಲಿ ಅವರು ಆಕ್ರೋಶಭರಿತ ನೋಟ ಬೀರಿದ್ದಾರೆ. ದೆವ್ವ, ಭೂತದ ಕಥೆ ಇರುವ ಸಿನಿಮಾಗಳನ್ನು ನೋಡಿ ಇಷ್ಟಪಡುವವರು ‘ಭೂಲ್​ ಭುಲಯ್ಯ 3’ ಸಿನಿಮಾಗಾಗಿ ಕಾದಿದ್ದಾರೆ. ಟೀಸರ್​ ನೋಡಿದ ಬಳಿಕ ಸಿನಿಪ್ರಿಯರಿಗೆ ನಿರೀಕ್ಷೆ ಡಬಲ್​ ಆಗಿದೆ. ಈ ಸಿನಿಮಾದಲ್ಲಿ ‘ಅನಿಮಲ್​’ ಖ್ಯಾತಿಯ ನಟಿ ತೃಪ್ತಿ ದಿಮ್ರಿ ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ.

ಇದನ್ನೂ ಓದಿ: ಹಾರರ್ ಸಿನಿಮಾ ಒಪ್ಪಿಕೊಂಡ ರಶ್ಮಿಕಾ ಮಂದಣ್ಣ; ಕರ್ನಾಟಕದಲ್ಲಿ ನಡೆಯಲಿದೆ ಕಥೆ

ಅನೀಸ್​ ಬಾಜ್ಮಿ ಅವರು ‘ಭೂಲ್​ ಭುಲಯ್ಯ 3’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಟೀಸರ್​ ನೋಡಿ ಸಿನಿಪ್ರಿಯರು ಸಾಕಷ್ಟು ಕಮೆಂಟ್​ ಮಾಡಿದ್ದಾರೆ. ‘ಈ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ ನಟಿಸಬೇಕು’ ಎಂದು ಕೆಲವರು ಬೇಡಿಕೆ ಇಟ್ಟಿದ್ದಾರೆ. ಭಯಬೀಳಿಸುವಂತಹ ಬೃಹತ್ ಬಂಗಲೆಯಲ್ಲಿ ಈ ಚಿತ್ರದ ಶೂಟಿಂಗ್​ ಮಾಡಲಾಗಿದೆ. ಟೀಸರ್​ನಲ್ಲಿ ವಿದ್ಯಾ ಬಾಲನ್ ಅವರ ಅಭಿನಯ ಕಂಡು ಫ್ಯಾನ್ಸ್​ ಫಿದಾ ಆಗಿದ್ದಾರೆ. ಇದು ಕೇವಲ ಟೀಸರ್​ ಅಷ್ಟೇ. ಇನ್ನು ಟ್ರೇಲರ್​ ಹೇಗಿರಬಹುದು? ಪೂರ್ತಿ ಸಿನಿಮಾ ಹೇಗಿರಬಹುದು ಎಂದು ಫ್ಯಾನ್ಸ್​ ನಿರೀಕ್ಷೆ ಹೆಚ್ಚಿಸಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು