AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಜಾನೆ 3 ಗಂಟೆಗೆ ತೃಪ್ತಿ ಕಾಲ್ ಮಾಡೋದು ಯಾರಿಗೆ?

ಅನೇಕರು ತೃಪ್ರಿ ದಿಮ್ರಿ ಹಾಗೂ ರಣಬೀರ್ ಕಪೂರ್ ಒಳ್ಳೆಯ ಬಾಂಡಿಗ್ ಬೆಳೆಸಿಕೊಂಡಿದ್ದರು ಎಂದು ಊಹಿಸಲಾಗಿತ್ತು. ಆದರೆ, ಹಾಗಾಗಿಲ್ಲ. ಅವರು ವಿಕ್ಕಿ ಜೊತೆ ಗೆಳೆತನ ಬೆಳೆಸಿಕೊಂಡಿದ್ದಾರೆ. ವಿಕ್ಕಿ ನನ್ನ ‘3ಎಎಂ’ ಫ್ರೆಂಡ್ ಎಂದು ಹೇಳಿದ್ದಾರೆ.  

ಮುಂಜಾನೆ 3 ಗಂಟೆಗೆ ತೃಪ್ತಿ ಕಾಲ್ ಮಾಡೋದು ಯಾರಿಗೆ?
ತೃಪ್ತಿ
 ಶ್ರೀಲಕ್ಷ್ಮೀ ಎಚ್
| Edited By: |

Updated on: Sep 27, 2024 | 9:37 AM

Share

ತೃಪ್ತಿ ದಿಮ್ರಿ ಅವರು ಸದ್ಯ ‘ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ’ ಸಿನಿಮಾದ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಅವರಿಗೆ 2023 ಆಶಾದಾಯಕವಾಗಿತ್ತು ಎಂಬುದನ್ನು ಮತ್ತೆ ಬಾಯ್ಬಿಟ್ಟು ಹೇಳಬೇಕಿಲ್ಲ. ‘ಅನಿಮಲ್’ ಸಿನಿಮಾ ಅವರ ಕರಿಯರ್​ಗೆ ಮೈಲೇಜ್ ನೀಡಿದೆ. ಅವರಿಗೆ ನ್ಯಾಷನಲ್ ಕ್ರಶ್ ಎನ್ನುವ ಪಟ್ಟ ಕೂಡ ಸಿಕ್ಕಿದೆ. ರಣಬೀರ್ ಕಪೂರ್ ಜೊತೆಗಿನ ಕೆಮಿಸ್ಟ್ರಿ ಜನರಿಗೆ ಇಷ್ಟ ಆಯಿತು. ಆದರೆ, ಅವರು ಈ ಚಿತ್ರದ ಭಾಗ ಆಗಿದ್ದಕ್ಕೆ ಕೆಲವರಿಗೆ ಖುಷಿ ಇಲ್ಲ.

ತೃಪ್ತಿ ಈವರೆಗೆ ಬಾಲಿವುಡ್​ನಲ್ಲಿ ಅನೇಕರ ಜೊತೆ ನಟಿಸಿದ್ದಾರೆ. ಹಾಗಾದರೆ ಅವರ ಕ್ಲೋಸ್ ಫ್ರೆಂಡ್ ಯಾರು? ಇದಕ್ಕೆ ಅವರ ಉತ್ತರ ಭಿನ್ನವಾಗಿದೆ. ‘ನಾನು ವಿಕ್ಕಿ ಕೌಶಲ್ ಜೊತೆ ಕ್ಲೋಸ್ ಆಗಿದ್ದೇನೆ. ನಾವು ಒಟ್ಟಿಗೆ ಸಾಕಷ್ಟು ಸಮಯ ಕಳೆದಿದ್ದೇವೆ. ನಾವು ಮಸೂರಿಯಲ್ಲಿ ಒಟ್ಟಿಗೆ ಶೂಟ್ ಮಾಡಿದ್ದೆವು. ಅವರು ಕೂಲ್ ವ್ಯಕ್ತಿ ಎಂದಿದ್ದಾರೆ ತೃಪ್ತಿ.

ತೃಪ್ತಿ ದಿಮ್ರಿ ಅವರು ವಿಕ್ಕಿ ಕೌಶಲ್​ಗೆ ಯಾವಾಗ ಫೋನ್ ಮಾಡಬೇಕು ಎಂದರೂ ಯೋಚಿಸುವುದಿಲ್ಲ. ಅವರು ಯಾವುದೇ ಆಲೋಚನೆ ಮಾಡದೆ ವಿಕ್ಕಿಗೆ ಕರೆ ಮಾಡುವಷ್ಟು ಸಲುಗೆ ಬೆಳೆಸಿಕೊಂಡಿದ್ದಾರೆ. ಹೀಗಾಗಿ ಅವರನ್ನು 3ಎಎಂ ಫ್ರೆಂಡ್ ಎಂದು ಕರೆದಿದ್ದಾರೆ. 3 ಎಎಂ ಫ್ರೆಂಡ್ ಎಂದರೆ ಅವರಿಗೆ ಯಾವಾಗ ಬೇಕಿದ್ದರೂ ಅಂಜಿಕೆ ಇಲ್ಲದೆ ಕರೆ ಮಾಡಬಹುದು. ಅವರು ಏನು ಜಡ್ಜ್​ ಮಾಡುತ್ತಾರೆ ಯಾವುದೇ ಚಿಂತೆ ಇರುವುದಿಲ್ಲ.

ಅನೇಕರು ತೃಪ್ರಿ ದಿಮ್ರಿ ಹಾಗೂ ರಣಬೀರ್ ಕಪೂರ್ ಒಳ್ಳೆಯ ಬಾಂಡಿಗ್ ಬೆಳೆಸಿಕೊಂಡಿದ್ದರು ಎಂದು ಊಹಿಸಲಾಗಿತ್ತು. ಆದರೆ, ಹಾಗಾಗಿಲ್ಲ. ಅವರು ವಿಕ್ಕಿ ಜೊತೆ ಗೆಳೆತನ ಬೆಳೆಸಿಕೊಂಡಿದ್ದಾರೆ. ವಿಕ್ಕಿ ನನ್ನ ‘3ಎಎಂ’ ಫ್ರೆಂಡ್ ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ಅನಿಮಲ್​’ ಸಿನಿಮಾದ ಸುಂದರಿ ತೃಪ್ತಿ ದಿಮ್ರಿಗೆ ಈಗ 30ರ ಪ್ರಾಯ

‘ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ’ ಬಗ್ಗೆ ಹೇಳಬೇಕು ಎಂದರೆ ರಾಜಾ ಶಾಂಡಿಲ್ಯ ಅವರು ಇದನ್ನು ನಿರ್ದೇಶನ ಮಾಡಿದ್ದಾರೆ. ರಾಜ್​ಕುಮಾರ್ ರಾವ್ ಈ ಚಿತ್ರದ ಹೀರೋ. ಈ ಚಿತ್ರ ಅಕ್ಟೋಬರ್ 11ರಂದು ಬಿಡುಗಡೆ ಕಾಣುತ್ತಿದೆ. ಈ ಹಾಡಿನ ಸ್ಟೆಪ್ ವಿವಾದ ಸೃಷ್ಟಿ ಮಾಡಿದೆ. ಇದಲ್ಲದೆ ಅನೀಸ್ ಬಾಜ್ಮೀ ಅವರ ‘ಭೂಲ್ ಭುಲಯ್ಯ 3’ ಸಿನಿಮಾದಲ್ಲೂ ತೃಪ್ತಿ ನಟಿಸುತ್ತಿದ್ದಾರೆ. ಈ ಚಿತ್ರ ನವೆಂಬರ್ 1ರಂದು ಬಿಡುಗಡೆ ಕಾಣುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.