‘ನಿಮಗೇನು ಗೊತ್ತಿಲ್ಲ ಸುಮ್ಮನಿರಿ’: ಬಚ್ಚನ್ ಕುಟುಂಬ ಟೀಕಿಸಿದವರಿಗೆ ನಟಿಯ ತಿರುಗೇಟು
Amitabh Bachchan: ಅಮಿತಾಬ್ ಬಚ್ಚನ್, ಐಶ್ವರ್ಯಾ ರೈ ಅನ್ನು ನಿರ್ಲಕ್ಷಿಸಿದ್ದಾರೆ ಎಂದು ಟೀಕಿಸುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದಕ್ಕೆ ಖಡಕ್ ಆಗಿ ಪ್ರತಿಕ್ರಿಯೆ ನೀಡಿರುವ ನಟಿ, ಮಾಜಿ ಪತ್ರಕರ್ತೆ ಸಿಮಿ ಗೆರೆವಾಲ್ ನಿಮಗೇನೂ ಗೊತ್ತಿಲ್ಲ ಸುಮ್ಮನಿದ್ದುಬಿಡಿ ಎಂದಿದ್ದಾರೆ.
ಐಶ್ವರ್ಯಾ ರೈ ಹಾಗೂ ಅವರ ಮಾವ ಅಮಿತಾಭ್ ಬಚ್ಚನ್ ಮಧ್ಯೆ ಸರಿ ಇಲ್ಲ ಎನ್ನುವ ಮಾತು ಇದೆ. ಐಶ್ವರ್ಯಾ ಹಾಗೂ ಅಮಿತಾಭ್ ಮಧ್ಯೆ ಏನೋ ಕಿರಿಕ್ ಆಗಿದೆ ಎನ್ನಲಾಗಿದೆ. ಅಮಿತಾಭ್ ಅವರು ಮಗಳು ಶ್ವೇತಾ, ಮಗ ಅಭಿಷೇಕ್, ಮೊಮ್ಮೊಗಳು ನವ್ಯಾ ಬಗ್ಗೆ ಪೋಸ್ಟ್ ಹಾಗು ಕಮೆಂಟ್ ಮಾಡುತ್ತಾರೆ. ಅದೇಕೋ ಏನೋ ಐಶ್ವರ್ಯಾ ಅವರನ್ನು ಕಂಡರೆ ಅವರಿಗೆ ಅಷ್ಟಕ್ಕಷ್ಟೆ. ಉದ್ದೇಶ ಪೂರ್ವಕವಾಗಿ ಅವರು ಐಶ್ವರ್ಯಾನ ದೂರವಿಡುತ್ತಿರುವಂತೆ ಕಂಡು ಬರುತ್ತಿದೆ.
ಐಶ್ವರ್ಯಾ ಹಾಗೂ ಅಮಿತಾಭ್ ಮಧ್ಯೆ ಯಾವುದೂ ಸರಿ ಇಲ್ಲ ಎನ್ನಲಾಗಿದೆ. ಈ ಕಾರಣದಿಂದಲೇ ಐಶ್ವರ್ಯಾ ಅವರು ಪತಿ ಅಭಿಷೇಕ್ ಇಂದ ದೂರ ಆಗುವ ಪ್ರಯತ್ನದಲ್ಲಿ ಇದ್ದಾರೆ. ಇತ್ತೀಚೆಗೆ ‘ಜಾಗರೂಕ್ ಜನತಾ’ ಹೆಸರಿನ ಇನ್ಸ್ಟಾಗ್ರಾಮ್ ಖಾತೆ ಮೂಲಕ ಮಹಿಳೆಯೊಬ್ಬರು ವಿಡಿಯೋ ಪೋಸ್ಟ್ ಮಾಡಿದ್ದರು. ಇದರಲ್ಲಿ ಅವರು ಐಶ್ವರ್ಯಾನ ನಿರ್ಲಕ್ಷಿಸಿದ ಅಮಿತಾಭ್ ಅವರನ್ನು ಟೀಕಿಸಿದ್ದರು.
ಇದನ್ನೂ ಓದಿ:ಪತಿ ಅಮಿತಾಬ್ ಬಚ್ಚನ್ ಬಗ್ಗೆ ಜಯಾ ಬಚ್ಚನ್ಗೆ ಇದೆ ಒಂದು ದೂರು
ಇದಕ್ಕೆ ಹಿರಿಯ ನಟಿ ಸಿಮಿ ಗರೇವಾಲ್ ಅವರು ಕಮೆಂಟ್ ಮಾಡಿದ್ದಾರೆ. ‘ನಿಮಗೇನು ಗೊತ್ತಿಲ್ಲ. ಇದನ್ನು ನಿಲ್ಲಿಸಿ’ ಎಂದು ಬರೆಇದ್ದಾರೆ. ಅವರ ಕಮೆಂಟ್ ಸ್ವಲ್ಪ ಖಡಕ್ ಆಗಿಯೇ ಇತ್ತು. ಈ ಮೂಲಕ ಬಚ್ಚನ್ ಕುಟುಂಬದಲ್ಲಿ ಎಲ್ಲವೂ ಸರಿಯಾಗಿಯೇ ಇದೆ ಎಂದು ಹೇಳುವ ಪ್ರಯತ್ನ ಮಾಡಿದ್ದಾರೆ. ಇತ್ತೀಚೆಗೆ ಐಶ್ವರ್ಯಾ ಹಾಗೂ ಮಗಳು ಆರಾಧ್ಯಾ ಪ್ಯಾರಿಸ್ ತೆರಳಿದ್ದಾರೆ. ಅಲ್ಲಿ ‘ಪ್ಯಾರಿಸ್ ಫ್ಯಾಷನ್ ವೀಕ್’ನಲ್ಲಿ ಭಾಗಿ ಆಗಿ ಗಮನ ಸೆಳೆದಿದ್ದಾರೆ. ಈ ವೇಳೆ ಐಶ್ವರ್ಯಾ ಕೈಯಲ್ಲಿ ಅಭಿಷೇಕ್ ಈ ಮೊದಲು ಹಾಕಿದ್ದ ರಿಂಗ್ ಇತ್ತು. ಇದು ಫ್ಯಾನ್ಸ್ಗೆ ಗೊಂದಲ ಮೂಡಿಸಿದೆ.
ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ 2007ರ ಏಪ್ರಿಲ್ 20ರಂದು ವಿವಾಹ ಆದರು. ಗ್ರ್ಯಾಂಡ್ ಆಗಿ ಈ ಮದುವೆ ನಡೆಯಿತು. ಈ ದಂಪತಿಗೆ ಆರಾಧ್ಯಾ ಬಚ್ಚನ್ ಹೆಸರಿನ ಮಗಳು ಇದ್ದಾರೆ. ಐಶ್ವರ್ಯಾ ಹಾಗೂ ಆರಾಧ್ಯಾ ಮಾತ್ರ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಸಹಜವಾಗಿಯೇ ಚರ್ಚೆಗಳು ಸೃಷ್ಟಿ ಆಗಿವೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಸ್ಟೇಟ್ಮೆಂಟ್ ಇವರು ನೀಡಿಲ್ಲ. ಈ ಬಗ್ಗೆ ಸ್ಪಷ್ಟನೆ ಸಿಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ