AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮ್ ಗೋಪಾಲ್ ವರ್ಮಾಗಾಗಿ ಹಲವು ಆಫರ್ ತಿರಸ್ಕರಿಸಿದ್ದ ಊರ್ಮಿಳಾ: ಪ್ರೇಮ ಪಯಣದ ಜರ್ನಿ ಗೊತ್ತಾ?

ಊರ್ಮಿಳಾ ಮಾತೋಂಡ್ಕರ್ ದಾಂಪತ್ಯದಲ್ಲಿ ಕಲಹ ಶುರುವಾಗಿದ್ದು, ದಂಪತಿಗಳು ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ. ಅಂದಹಾಗೆ ಊರ್ಮಿಳಾ ಒಂದು ಕಾಲದಲ್ಲಿ ರಾಮ್ ಗೋಪಾಲ್ ವರ್ಮಾಗೆ ಬಹಳ ಹತ್ತಿರದಲ್ಲಿದ್ದರು. ವರ್ಮಾಗಾಗಿ ಹಲವು ಸಿನಿಮಾಗಳನ್ನು ಸಹ ಊರ್ಮಿಳಾ ತ್ಯಜಿಸಿದ್ದರು.

ರಾಮ್ ಗೋಪಾಲ್ ವರ್ಮಾಗಾಗಿ ಹಲವು ಆಫರ್ ತಿರಸ್ಕರಿಸಿದ್ದ ಊರ್ಮಿಳಾ: ಪ್ರೇಮ ಪಯಣದ ಜರ್ನಿ ಗೊತ್ತಾ?
 ಶ್ರೀಲಕ್ಷ್ಮೀ ಎಚ್
| Edited By: |

Updated on: Sep 25, 2024 | 6:49 PM

Share

ನಟಿ ಊರ್ಮಿಳಾ ಮಾತೋಂಡ್ಕರ್ ಬಾಲಿವುಡ್‌ನಲ್ಲಿ ಪ್ರಸಿದ್ಧ ಮತ್ತು ಜನಪ್ರಿಯ ನಟಿ. ಊರ್ಮಿಳಾ ತಮ್ಮ ವೃತ್ತಿಜೀವನದಲ್ಲಿ ಅನೇಕ ಪ್ರಸಿದ್ಧ ಸೆಲೆಬ್ರಿಟಿಗಳೊಂದಿಗೆ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲ, ಈ ನಟಿ ಬಾಲಿವುಡ್‌ಗೆ ಹಲವು ಸೂಪರ್‌ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಆದರೆ ಈಗ ನಟಿ ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಸುದ್ದಿಯಲ್ಲಿದ್ದಾರೆ. ಸದ್ಯ ಊರ್ಮಿಳಾ ಮತ್ತು ಮೊಹ್ಸಿನ್ ಅಖ್ತರ್ ಮಿರ್ ವಿಚ್ಛೇದನ ಎಲ್ಲೆಡೆ ಚರ್ಚೆಯಾಗುತ್ತಿದೆ.

ಬಣ್ಣದ ಲೋಕದಲ್ಲಿ ಊರ್ಮಿಳಾ ಜೊತೆ ಕೆಲಸ ಮಾಡಲು ಅನೇಕ ನಿರ್ದೇಶಕರು ಮತ್ತು ನಿರ್ಮಾಪಕರು ಸಾಲುಗಟ್ಟಿ ನಿಂತಿದ್ದ ಕಾಲವೊಂದಿತ್ತು. ಒನ್ ಸೈಡ್ ಲವ್ನಿಂದಾಗಿ ಊರ್ಮಿಳಾ ವೃತ್ತಿಜೀವನ ಕೊನೆಗೊಂಡಿತು. ವರದಿಗಳ ಪ್ರಕಾರ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಊರ್ಮಿಳಾ ಅವರನ್ನು ಪ್ರೀತಿಸುತ್ತಿದ್ದರು. ವರ್ಮಾ ಅವರು ತಮ್ಮ ಪ್ರತಿಯೊಂದು ಚಿತ್ರದಲ್ಲೂ ಊರ್ಮಿಳಾ ಅವರನ್ನು ಹಾಕಿಕೊಂಡಿದ್ದರು.

‘ದ್ರೋಹಿ’ ಸಿನಿಮಾದ ಹಾಡಿನ ಚಿತ್ರೀಕರಣದ ವೇಳೆ ರಾಮಗೋಪಾಲ್ ವರ್ಮಾ ಅವರಿಗೆ ಊರ್ಮಿಳಾ ಅವರ ಡ್ಯಾನ್ಸ್ ತುಂಬಾ ಇಷ್ಟವಾಗಿತ್ತು. ಆಗ ರಾಮಗೋಪಾಲ್ ವರ್ಮಾ ‘ರಂಗೀಲಾ’ ಚಿತ್ರಕ್ಕೆ ಊರ್ಮಿಳಾ ಅವರನ್ನು ಆಯ್ಕೆ ಮಾಡಿಕೊಂಡರು. ‘ರಂಗೀಲಾ’ ಹಿಟ್ ಆದ ನಂತರ ರಾಮಗೋಪಾಲ್ ಪ್ರತಿ ಸಿನಿಮಾದಲ್ಲೂ ಊರ್ಮಿಳಾ ಇರುತ್ತಿದ್ದರು. ಆ ನಂತರ ಇಬ್ಬರ ಸಂಬಂಧ ಗಟ್ಟಿಯಾಯಿತು. ಇಂದಿಗೂ ಇವರಿಬ್ಬರ ಸಂಬಂಧ ಅಭಿಮಾನಿಗಳಲ್ಲಿ ಚರ್ಚೆಯಾಗುತ್ತಿದೆ.

ಇದನ್ನೂ ಓದಿ:ರಾಮ್ ಗೋಪಾಲ್ ವರ್ಮಾ ಈಗ ನಟ; ನಿರ್ದೇಶಕನಿಗೆ ಧನ್ಯವಾದ ಹೇಳಿದ ಆರ್​ಜಿವಿ

ರಾಮ್ ಗೋಪಾಲ್ ವರ್ಮಾ ಅವರೊಂದಿಗೆ ಕೆಲಸ ಮಾಡಲು ಊರ್ಮಿಳಾ ಹಲವಾರು ನಿರ್ದೇಶಕರ ಚಿತ್ರವನ್ನು ನಿರಾಕರಿಸಿದ್ದರು. ರಾಮ್‌ಗೋಪಾಲ್ ವರ್ಮಾ ಅವರೊಂದಿಗಿನ ಸಂಬಂಧವು ಕೊನೆಗೊಂಡ ನಂತರ ನಟಿಗೆ ಸಂಕಷ್ಟ ಎದುರಾಯಿತು. ಇದಾದ ನಂತರ ಊರ್ಮಿಳಾಗೆ ಚಿತ್ರಗಳ ಆಫರ್ ಬರುವುದು ನಿಂತಿತು. ಆಗ ಅವರು ಬಾಲಿವುಡ್ ಬಿಟ್ಟು ರಾಜಕೀಯದತ್ತ ಮುಖ ಮಾಡಿದರು. ಆದರೆ ನಟಿ ರಾಜಕೀಯದಲ್ಲಿಯೂ ಯಶಸ್ವಿಯಾಗಲಿಲ್ಲ.

ರಾಮ್ ಗೋಪಾಲ್ ವರ್ಮಾ ಅವರಿಂದ ಬೇರ್ಪಟ್ಟ ನಂತರ, ಊರ್ಮಿಳಾ ಕೆಲವೇ ಚಿತ್ರಗಳಲ್ಲಿ ಕಾಣಿಸಿಕೊಂಡರು. ಅಂತಿಮವಾಗಿ 2016ರಲ್ಲಿ ಅವರು ಉದ್ಯಮಿ ಮೊಹ್ಸಿನ್ ಅಖ್ತರ್ ಮಿರ್ ಅವರೊಂದಿಗೆ ಮದುವೆ ಆದರು. ಮೊಹ್ಸಿನ್ ಅಖ್ತರ್ ಮಿರ್ ಕಾಶ್ಮೀರಿ ಉದ್ಯಮಿ. ಅಷ್ಟೇ ಅಲ್ಲ ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ಊರ್ಮಿಳಾ ಮತ್ತು ಮೊಹ್ಸಿನ್ ನಡುವೆ 10 ವರ್ಷಗಳ ಅಂತರವಿದೆ. ಪತಿಗಿಂತ ಊರ್ಮಿಳಾ 10 ವರ್ಷ ದೊಡ್ಡವರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ