ರಾಮ್ ಗೋಪಾಲ್ ವರ್ಮಾ ಈಗ ನಟ; ನಿರ್ದೇಶಕನಿಗೆ ಧನ್ಯವಾದ ಹೇಳಿದ ಆರ್ಜಿವಿ
ತಮ್ಮದೇ ಸಿನಿಮಾಗಳಲ್ಲಿ ನಿರ್ದೇಶಕರು ನಟಿಸೋದು ಹೊಸದಲ್ಲ. ರಾಜಮೌಳಿ ಅವರು ಈ ಮೊದಲು ‘ಬಾಹುಬಲಿ’ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದರು. ಅದೇ ರೀತಿ ಅನೇಕ ನಿರ್ದೇಶಕರು ತಮ್ಮದೇ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಆದರೆ, ಆರ್ಜಿವಿ ಅವರು ಬೇರೆ ಸಿನಿಮಾ ನಿರ್ದೇಶಕನ ಚಿತ್ರದಲ್ಲಿ ನಟಿಸಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ.
ನಿರ್ದೇಶಕನಾಗಿ, ನಿರ್ಮಾಪಕನಾಗಿ ರಾಮ್ ಗೋಪಾಲ್ ವರ್ಮಾ ಅವರು ಗುರುತಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ಸಿಕ್ಕಿದೆ. ಆದರೆ ಅವರು ಈವರೆಗೆ ನಟನೆ ಮಾಡುವ ಸಾಹಸಕ್ಕೆ ಮುಂದಾಗಿರಲಿಲ್ಲ. ಈಗ ಇದೇ ಮೊದಲ ಬಾರಿಗೆ ರಾಮ್ ಗೋಪಾಲ್ ವರ್ಮಾ ಅವರು ನಟನೆಗೆ ಕಾಲಿಟ್ಟಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಆರ್ಜಿವಿ ನಟಿಸಿದ್ದಾರೆ.
ನಿರ್ದೇಶಕರು ತಮ್ಮದೇ ಸಿನಿಮಾಗಳಲ್ಲಿ ನಟಿಸೋದು ಹೊಸದಲ್ಲ. ಈ ಮೊದಲು ರಾಜಮೌಳಿ ಅವರು ‘ಬಾಹುಬಲಿ’ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದರು. ಅದೇ ರೀತಿ ಅನೇಕ ನಿರ್ದೇಶಕರು ತಮ್ಮದೇ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಆರ್ಜಿವಿ ಅವರು ಬೇರೆ ಸಿನಿಮಾ ನಿರ್ದೇಶಕನ ಚಿತ್ರದಲ್ಲಿ ನಟಿಸಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಅವರು ಕೆಲವು ನಿಮಿಷ ಬರುತ್ತಾರೆ. ಈ ಚಿತ್ರದಲ್ಲಿ ಆರ್ಜಿವಿ ಅವರದ್ದು ಅತಿಥಿ ಪಾತ್ರ.
‘ಕಲ್ಕಿ 2898 ಎಡಿ’ ಚಿತ್ರದಲ್ಲಿ ನಟಿಸಿದ್ದಕ್ಕೆ ಆರ್ಜಿವಿ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಅನೇಕರು ಆರ್ಜಿವಿ ನಟನೆಯನ್ನು ಹೊಗಳಿದ್ದಾರೆ. ಅವರು ಮಂದಿನ ದಿನಗಳಲ್ಲಿ ಸಿನಿಮಾಗಳಲ್ಲಿ ನಟಿಸಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ. ಈ ಎಲ್ಲಾ ವಿಚಾರಗಳ ಬಗ್ಗೆ ಆರ್ಜಿವಿ ಅವರು ಮಾತನಾಡಿದ್ದಾರೆ.
Hey @nagashwin7 KUDOS to ur AMBITION and IMAGINATION .. @srbachchan is a 100 times more dynamic than ever and #prabhas is in a never before seen avatar and AHEM 😌also THANKS for giving me my acting DEBUT 😌#Kalki2898
— Ram Gopal Varma (@RGVzoomin) June 27, 2024
‘ನಾಗ್ ಅಶ್ವಿನ್ ಅವರೇ ನಿಮ್ಮ ಮಹತ್ವಾಕಾಂಕ್ಷೆ ಹಾಗೂ ಕಲ್ಪನೆಗೆ ಒಂದು ವಂದನೆ. ಅಮಿತಾಭ್ ಬಚ್ಚನ್ ಅವರು ಹಿಂದೆಂದಿಗಿಂತಲೂ 100 ಪಟ್ಟು ಕ್ರಿಯಾಶೀಲರಾಗಿದ್ದಾರೆ. ಪ್ರಭಾಸ್ ಅವರದ್ದು ಹಿಂದೆಂದೂ ನೋಡದ ಅವತಾರ. ನನಗೆ ನಟನೆಗೆ ಕಾಲಿಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದ’ ಎಂದಿದ್ದಾರೆ ರಾಮ್ ಗೋಪಾಲ್ ವರ್ಮಾ.
ಇದನ್ನೂ ಓದಿ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಲೆಗೆ 1 ಕೋಟಿ ಬೆಲೆ
ರಾಮ್ ಗೋಪಾಲ್ ವರ್ಮಾ ಅವರು ‘ವ್ಯೂಹಂ’ ಚಿತ್ರವನ್ನು ನಿರ್ಮಾಣ ಮಾಡಿದ್ದು, ಇತ್ತೀಚೆಗೆ ರಿಲೀಸ್ ಆಗಿದೆ. ಈ ಚಿತ್ರ ಮೆಚ್ಚುಗೆ ಪಡೆದಿದೆ. ಅವರು ನಿರ್ದೇಶನದ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ. ಇದಕ್ಕಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.
ಗಳಿಕೆ ಬಗ್ಗೆ
‘ಕಲ್ಕಿ 2898 ಎಡಿ’ ಚಿತ್ರಕ್ಕೆ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ, ಸಿನಿಮಾ ಭಾರತದಲ್ಲಿ 115 ಕೋಟಿ ರೂಪಾಯಿ (ಗ್ರಾಸ್ ಕಲೆಕ್ಷನ್) ಗಳಿಕೆ ಮಾಡಿದೆ. ವಿಶ್ವಾದ್ಯಂತ ಈ ಚಿತ್ರ 180 ಕೋಟಿ ರೂಪಾಯಿ ಗಳಿಸಿದೆ. ಈ ಚಿತ್ರ ಹಲವು ಚಿತ್ರಗಳ ದಾಖಲೆ ಮುರಿದಿದೆ. ಮೊದಲ ದಿನದ ಗಳಿಕೆಯಲ್ಲಿ ಕನ್ನಡದ ‘ಕೆಜಿಎಫ್ 2’ (159 ಕೋಟಿ ರೂಪಾಯಿ), ಸಲಾರ್ (158 ಕೋಟಿ ರೂಪಾಯಿ), ‘ಲಿಯೋ’ (142 ಕೋಟಿ ರೂಪಾಯಿ), ‘ಸಾಹೋ’ (130ಕೋಟಿ ರೂಪಾಯಿ) ದಾಖಲೆಗಳನ್ನು ಈ ಚಿತ್ರ ಹಿಂದಿಕ್ಕಿದೆ. ಆದರೆ, ‘ಆರ್ಆರ್ಆರ್’ (223) ಹಾಗೂ ‘ಬಾಹುಬಲಿ 2’ (217) ಚಿತ್ರವನ್ನು ಹಿಂದಿಕ್ಕಲು ಈ ಸಿನಿಮಾ ಬಳಿ ಸಾಧ್ಯವಾಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.