AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಲೆಗೆ 1 ಕೋಟಿ ಬೆಲೆ

Ram Gopal Varma: ರಾಮ್ ಗೋಪಾಲ್ ವರ್ಮಾ ತಲೆ ಕಡಿದು ತಂದವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುತ್ತೇನೆಂದು ಟಿಡಿಪಿ ಮುಖಂಡ ಘೋಷಿಸಿದ್ದಾರೆ.

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಲೆಗೆ 1 ಕೋಟಿ ಬೆಲೆ
ರಾಮ್ ಗೋಪಾಲ್ ವರ್ಮಾ
ಮಂಜುನಾಥ ಸಿ.
|

Updated on: Dec 27, 2023 | 4:01 PM

Share

ತೆಲುಗು ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ (Ram Gopal Varma) ವಿವಾದಗಳೆಂದರೆ ಬಲು ಪ್ರೀತಿ, ತಾವೇ ಖುದ್ದು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿರುತ್ತಾರೆ. ಒಂದು ಕಾಲದ ಟಾಪ್ ನಿರ್ದೇಶಕ ಆಗಿದ್ದ ರಾಮ್ ಗೋಪಾಲ್ ವರ್ಮಾ ಇತ್ತೀಚೆಗೆ ಕೇವಲ ವಿವಾದಗಳಿಂದಲೇ ಸುದ್ದಿ ಆಗುತ್ತಿದ್ದಾರೆ. ಸಿನಿಮಾಗಳಿಗೂ ವಿವಾದಾತ್ಮಕ ವಿಷಯಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಅಂಥಹುದೇ ಒಂದು ವಿವಾದವನ್ನು ರಾಮ್ ಗೋಪಾಲ್ ವರ್ಮಾ ಸೃಷ್ಟಿಸಿಕೊಂಡಿದ್ದು, ಇದೇ ಕಾರಣಕ್ಕೆ ವರ್ಮಾ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಮಾತ್ರವಲ್ಲದೆ ವರ್ಮಾ ತಲೆಗೆ 1 ಕೋಟಿ ಬಹುಮಾನ ಸಹ ಘೋಷಿಸಲಾಗಿದೆ.

ರಾಮ್ ಗೋಪಾಲ್ ವರ್ಮಾ, ‘ವ್ಯೂಹಂ’ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ವಿಲನ್ ರೀತಿ ಚಿತ್ರಿಸಲಾಗಿದೆ. ರಾಜಶೇಖರ ರೆಡ್ಡಿ ಸಾವಿಗೆ ಚಂದ್ರಬಾಬು ನಾಯ್ಡು ಕಾರಣ ಎಂಬರ್ಥ ಬಿಂಬಿಸುವ ದೃಶ್ಯಗಳೂ ಸಿನಿಮಾದಲ್ಲಿ ಇವೆ ಎನ್ನಲಾಗುತ್ತಿದೆ. ಸಿನಿಮಾದಲ್ಲಿ ಹಾಲಿ ಸಿಎಂ ಜಗನ್ ಅನ್ನು ಹೀರೋ ರೀತಿಯಲ್ಲಿ ಚಿತ್ರಿಸಲಾಗಿದೆ. ಇದು ಚಂದ್ರಬಾಬು ನಾಯ್ಡು ನಾಯಕತ್ವದ ಟಿಡಿಪಿ ಪಕ್ಷದ ಕಾರ್ಯಕರ್ತರ ಅಸಹನೆಗೆ ಕಾರಣವಾಗಿದೆ.

ಟಿವಿ ಡಿಬೇಟ್​ನಲ್ಲಿ ಭಾಗವಹಿಸಿದ್ದ ಟಿಡಿಪಿ ಮುಖಂಡ ಕೋಲಿಕಪುಡಿ ಶ್ರೀನಿವಾಸ ನಾಯ್ಡು, ‘‘ರಾಮ್ ಗೋಪಾಲ್ ವರ್ಮಾ ತಲೆ ಕಡಿದು ತಂದವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುತ್ತೇನೆ’’ ಎಂದು ಘೋಷಿಸಿದ್ದಾರೆ. ಟಿವಿ ನಿರೂಪಕ, ‘‘ದಯವಿಟ್ಟು ಬೇಡ, ಕಾನೂನಿಗೆ ವ್ಯತಿರೇಕವಾದ ಮಾತುಗಳು ಬೇಡ’’ ಎಂದು ಮನವಿ ಮಾಡಿದರೂ ಸಹ, ‘‘ಇಲ್ಲ ನನ್ನ ಆಫರ್ ಅನ್ನು ನಾನು ಮತ್ತೆ ಹೇಳುತ್ತೇನೆ, ಯಾರು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಲೆ ಕಡಿದು ತರುತ್ತಾರೋ ಅವರಿಗೆ ಒಂದು ಕೋಟಿ ರೂಪಾಯಿ ನೀಡುತ್ತೇನೆ. ಏಕೆಂದರೆ ಈ ಸಮಾಜಕ್ಕೆ ಆ ವ್ಯಕ್ತಿ ಮಾರಕ’’ ಎಂದಿದ್ದಾರೆ.

ಇದನ್ನೂ ಓದಿ:RGV: ತಮ್ಮ ಸಹಿ ಫೋರ್ಜರಿ ಮಾಡಲಾಗಿದೆ ಎಂದು ಪೊಲೀಸ್​ ಠಾಣೆ ಮೆಟ್ಟಿಲೇರಿದ ರಾಮ್ ಗೋಪಾಲ್ ವರ್ಮಾ; ಏನಿದು ಪ್ರಕರಣ?

ಮುಂದುವರೆದು, ‘‘ಹುಚ್ಚು ನಾಯಿಯನ್ನು ಯಾಕೆ ಕೊಲ್ಲುತ್ತೇವೆ, ಹೊಲಗಳಿಗೆ ಹುಳ ಹಿಡಿದಾಗ ಹಣ ಖರ್ಚು ಮಾಡಿ ಏಕೆ ಸಿಂಪಡಿಸಿ ಅವನ್ನು ಸಾಯಿಸುತ್ತೇವೆ. ಏಕೆಂದರೆ ಅವುಗಳಿಂದ ಇಡೀ ಹೊಲ ನಾಶವಾಗುತ್ತದೆ. ಇದು ಸಹ ಹಾಗೆಯೇ, ನನಗೆ ನನ್ನ ಸಮಾಜದ ಬಗ್ಗೆ ಪ್ರೀತಿ, ಗೌರವ ಇದೆ, ಅದು ಯಾರೋ ಕೆಲವರಿಂದ ಹಾಳಾಗುವುದು ನನಗೆ ಇಷ್ಟವಿಲ್ಲ. ಹಾಗಾಗಿ ನಾನು ಈ ಆಫರ್ ನೀಡಿದ್ದೇನೆ. ಮುಂದಿನ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ಸಿಎಂ ಆಗುವುದು ಖಾತ್ರಿ, ಅವರು ಸಿಎಂ ಆದ ನಂತರ ವರ್ಮಾ ಅದೆಷ್ಟು ಭದ್ರತೆ ತಂದು ತನಗೆ ಇಟ್ಟುಕೊಳ್ಳುತ್ತಾನೋ ನೋಡೋಣ’’ ಎಂದು ಸವಾಲು ಹಾಕಿದ್ದಾರೆ.

ಟಿಡಿಪಿ ಮುಖಂಡ ಕೋಲಿಕಪುಡಿ ಶ್ರೀನಿವಾಸ ನಾಯ್ಡು, ಟಿವಿ ಡಿಬೇಟ್​ನಲ್ಲಿ ತಮಗೆ ಬೆದರಿಕೆ ಹಾಕಿರುವ ವಿಡಿಯೋ ಹಂಚಿಕೊಂಡಿರುವ ರಾಮ್ ಗೋಪಾಲ್ ವರ್ಮಾ, ‘‘ನಾನು ವಿಜಯವಾಡದಲ್ಲಿ ಕೋಲಿಕಪುಡಿ ಶ್ರೀನಿವಾಸ ನಾಯ್ಡು ವಿರುದ್ಧ ಟಿವಿ ನಿರೂಪಕನ ವಿರುದ್ಧ ಹಾಗೂ ಟಿವಿ ಚಾನೆಲ್ ಮಾಲೀಕನ ವಿರುದ್ಧ ದೂರು ದಾಖಲಿಸಲಿದ್ದೇನೆ’’ ಎಂದು ಟ್ವೀಟ್ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ