ಗಳಿಕೆಯಲ್ಲಿ ದಾಖಲೆ ಬರೆದ ‘ಕಲ್ಕಿ 2898 ಎಡಿ’ ಸಿನಿಮಾ; ಮೊದಲ ದಿನದ ಕಲೆಕ್ಷನ್ ಎಷ್ಟು?

Kalki 2898 AD Box Office Collection Day 1: ಭಾರತದಲ್ಲಿ ‘ಕಲ್ಕಿ 2898 ಎಡಿ’ ಚಿತ್ರಕ್ಕೆ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿದೆ. ಹೀಗಾಗಿ, ಸಿನಿಮಾ ಭಾರತದಲ್ಲಿ 95 ಕೋಟಿ ರೂ. ಬಾಚಿಕೊಂಡಿದೆ. ಗ್ರಾಸ್ ಕಲೆಕ್ಷನ್ ಲೆಕ್ಕಾಚಾರ ಕೊಟ್ಟರೆ 115 ಕೋಟಿ ರೂಪಾಯಿ ಆಗುತ್ತದೆ. ವಿಶ್ವಾದ್ಯಂತದ ಲೆಕ್ಕಾಚಾರ ಹಾಕಿದರೆ ‘ಕಲ್ಕಿ 2898 ಎಡಿ’ ಚಿತ್ರ ಹಲವು ಚಿತ್ರಗಳ ದಾಖಲೆ ಮುರಿದಂತೆ ಆಗುತ್ತದೆ.

ಗಳಿಕೆಯಲ್ಲಿ ದಾಖಲೆ ಬರೆದ ‘ಕಲ್ಕಿ 2898 ಎಡಿ’ ಸಿನಿಮಾ; ಮೊದಲ ದಿನದ ಕಲೆಕ್ಷನ್ ಎಷ್ಟು?
ಕಲ್ಕಿ 2898
Follow us
ರಾಜೇಶ್ ದುಗ್ಗುಮನೆ
|

Updated on:Jun 28, 2024 | 6:59 AM

‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾದ ಗಳಿಕೆ ದಾಖಲೆ ಬರೆದಿದೆ. ಪ್ರಭಾಸ್, ದೀಪಿಕಾ ಪಡುಕೋಣೆ ಸೇರಿ ಸ್ಟಾರ್ ಕಲಾವಿದರ ದಂಡೇ ಚಿತ್ರದಲ್ಲಿ ಇದೆ. ಇದರ ಜೊತೆಗೆ ಅನೇಕ ಸೆಲೆಬ್ರಿಟಿಗಳು ಅತಿಥಿ ಪಾತ್ರ ಮಾಡಿದ್ದಾರೆ. ಈ ಎಲ್ಲಾ ಕಾರಣದಿಂದ ‘ಕಲ್ಕಿ 2898 ಎಡಿ’ ಸಿನಿಮಾ ಮೊದಲ ದಿನ ಭರ್ಜರಿ ಗಳಿಕೆ ಮಾಡಿದೆ. ಆರಂಭದ ಲೆಕ್ಕಾಚಾರದ ಪ್ರಕಾರ ಈ ಚಿತ್ರ ಮೊದಲ ದಿನ ಗಳಿಕೆ ಮಾಡಿದ್ದು ಬರೋಬ್ಬರಿ 180 ಕೋಟಿ ರೂಪಾಯಿ.

‘ಕಲ್ಕಿ 2898 ಎಡಿ’ ಚಿತ್ರಕ್ಕೆ ಭಾರತದಲ್ಲಿ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ, ಸಿನಿಮಾ ಭಾರತದಲ್ಲಿ 95 ಕೋಟಿ ರೂಪಾಯಿ ಬಾಚಿಕೊಂಡಿದೆ. ಗ್ರಾಸ್ ಕಲೆಕ್ಷನ್ ಲೆಕ್ಕಾಚಾರ ಕೊಟ್ಟರೆ 115 ಕೋಟಿ ರೂಪಾಯಿ ಆಗುತ್ತದೆ. ವಿಶ್ವಾದ್ಯಂತದ ಲೆಕ್ಕಾಚಾರ ಹಾಕಿದರೆ ‘ಕಲ್ಕಿ 2898 ಎಡಿ’ ಚಿತ್ರ ಹಲವು ಚಿತ್ರಗಳ ದಾಖಲೆ ಮುರಿದಂತೆ ಆಗುತ್ತದೆ.

ಮೊದಲ ದಿನದ ಗಳಿಕೆಯಲ್ಲಿ ಕನ್ನಡದ ‘ಕೆಜಿಎಫ್ 2’ (159 ಕೋಟಿ ರೂಪಾಯಿ), ಸಲಾರ್ (158 ಕೋಟಿ ರೂಪಾಯಿ), ‘ಲಿಯೋ’ (142 ಕೋಟಿ ರೂಪಾಯಿ), ‘ಸಾಹೋ’ (130ಕೋಟಿ ರೂಪಾಯಿ) ದಾಖಲೆಗಳನ್ನು ಈ ಚಿತ್ರ ಹಿಂದಿಕ್ಕಿದೆ. ಆದರೆ, ಮೊದಲ ದಿನದ ಗಳಿಕೆಯಲ್ಲಿ ‘ಆರ್​ಆರ್​ಆರ್’ (223) ಹಾಗೂ ‘ಬಾಹುಬಲಿ 2’ (217) ಚಿತ್ರವನ್ನು ಹಿಂದಿಕ್ಕಲು ಈ ಸಿನಿಮಾ ಬಳಿ ಸಾಧ್ಯವಾಗಿಲ್ಲ.

ಇದನ್ನೂ ಓದಿ: ‘ಸೂಪರ್​ ಆಗಿದೆ’: ಬೆಂಗಳೂರಿನಲ್ಲಿ ‘ಕಲ್ಕಿ 2898 ಎಡಿ’ ನೋಡಿ ಕನ್ನಡಿಗರು ಖುಷ್

‘ಕಲ್ಕಿ 2898 ಎಡಿ’ ಚಿತ್ರ ಜೂನ್ 27ರಂದು ರಿಲೀಸ್ ಆಗಿದೆ. ಮೊದಲ ದಿನ ಈ ಚಿತ್ರದ ಲಕ್ಷಾಂತರ ಟಿಕೆಟ್​ಗಳು ಮಾರಾಟ ಆಗಿವೆ. ಜನರು ಚಿತ್ರಕ್ಕೆ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಮಹಾಭಾರತದಿಂದ ಸಿನಿಮಾದ ಕಥೆ ಆರಂಭ ಆಗಲಿದೆ.  ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರಕ್ಕೆ ಅಶ್ವಿನಿ ದತ್ ಬಂಡವಾಳ ಹೂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:58 am, Fri, 28 June 24

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ