ಅನುಶ್ರೀ ಕಿವಿಯಲ್ಲಿ ‘ಯುಐ’ ರಿಲೀಸ್ ಡೇಟ್ ರಿವೀಲ್ ಮಾಡಿದ ಉಪೇಂದ್ರ?

ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಕಾರ್ಯಕ್ರಮದ ‘ಶಿವಣ್ಣ-ಉಪ್ಪಿ ಸ್ಪೆಷಲ್ ಮಹಾಸಂಚಿಕೆ’ ಭಾನುವಾರ ಸಂಜೆ 7ರಿಂದ 11 ಗಂಟೆವರೆಗೆ ನಡೆಯಲಿದೆ. ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಪ್ರಸಾರ ಕಾಣಲಿದೆ. ಇದಕ್ಕೆ ಕೌಂಟರ್ ಕೊಡೋ ನಿಟ್ಟಿನಲ್ಲಿ ‘ಶಿವಣ್ಣ-ಉಪ್ಪಿ ಸ್ಪೆಷಲ್ ಮಹಾಸಂಚಿಕೆ’ ಪ್ರಸಾರ ಕಾಣಲಿದೆ.

ಅನುಶ್ರೀ ಕಿವಿಯಲ್ಲಿ ‘ಯುಐ’ ರಿಲೀಸ್ ಡೇಟ್ ರಿವೀಲ್ ಮಾಡಿದ ಉಪೇಂದ್ರ?
ಉಪೇಂದ್ರ-ಅನುಶ್ರೀ
Follow us
ರಾಜೇಶ್ ದುಗ್ಗುಮನೆ
|

Updated on: Sep 28, 2024 | 11:00 AM

‘ಯುಐ’ ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ನಿರೀಕ್ಷೆ ಸೃಷ್ಟಿ ಆಗಿದೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಬಹುದು ಎಂದು ಪ್ರೇಕ್ಷಕರು ನಿರೀಕ್ಷಿಸಿದ್ದಾರೆ. ಇದು ಉಪೇಂದ್ರ ನಿರ್ದೇಶನದ ಸಿನಿಮಾ. ಈ ಕಾರಣದಿಂದಲೂ ಜನರಿಗೆ ನಿರೀಕ್ಷೆ ಹೆಚ್ಚಿದೆ. ಈ ಸಿನಿಮಾ ರಿಲೀಸ್ ಆಗೋದು ಯಾವಾಗ? ಈ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಈ ವಿಚಾರವನ್ನು ಅನುಶ್ರೀ ಕಿವಿಯಲ್ಲಿ ಉಪೇಂದ್ರ ಹೇಳಿದ್ದಾರೆ.

ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಕಾರ್ಯಕ್ರಮದ ‘ಶಿವಣ್ಣ-ಉಪ್ಪಿ ಸ್ಪೆಷಲ್ ಮಹಾಸಂಚಿಕೆ’ ಭಾನುವಾರ ಸಂಜೆ 7ರಿಂದ 11 ಗಂಟೆವರೆಗೆ ನಡೆಯಲಿದೆ. ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಪ್ರಸಾರ ಕಾಣಲಿದೆ. ಇದಕ್ಕೆ ಕೌಂಟರ್ ಕೊಡೋ ನಿಟ್ಟಿನಲ್ಲಿ ‘ಶಿವಣ್ಣ-ಉಪ್ಪಿ ಸ್ಪೆಷಲ್ ಮಹಾಸಂಚಿಕೆ’ ಪ್ರಸಾರ ಕಾಣಲಿದೆ. ಇದರಲ್ಲಿ ‘ಯುಐ’ ಬಗ್ಗೆ ಹಾಗೂ ‘ಓಂ’ ಸಿನಿಮಾ ಬಗ್ಗೆ ಮಾತನಾಡಲಾಗಿದೆ.

‘ಯುಐ’ ಸಿನಿಮಾ ಬಗ್ಗೆ ಮಾತನಾಡಿದ ಶಿವರಾಜ್​ಕುಮಾರ್, ‘ಉಪ್ಪಿ ಸಿನಿಮಾ ಎಂದಾಗ ಯಾವಾಗಲೂ ಕಾಯುತ್ತಾ ಇರುತ್ತೇನೆ. ಸಾಮಾನ್ಯ ಸಿನಿಮಾ ನೋಡೋದಕ್ಕೂ ಉಪೇಂದ್ರ ಸಿನಿಮಾ ನೋಡೋದಕ್ಕೂ ವ್ಯತ್ಯಾಸ ಇದೆ. ಯುಐ ಎಂದರೆ ನಾನು ನೀನು’ ಎಂದರು ಶಿವಣ್ಣ.

View this post on Instagram

A post shared by Zee Kannada (@zeekannada)

ಉಪೇಂದ್ರ ಕೂಡ ಸಿನಿಮಾ ಬಗ್ಗೆ ಹೇಳಿದ್ದಾರೆ. ‘ಸಿಂಬಾಲಿಸಂ ಜಾಸ್ತಿ ಇರುತ್ತದೆ. ಡಿಕೋಡ್ ಮಾಡೋದು ಜಾಸ್ತಿ ಇರುತ್ತದೆ. ಟೀಸರ್-ಟ್ರೇಲರ್ ನೋಡಿ ಜನರು ಸಿನಿಮಾ ನೋಡೋಬೇಕೋ ಅಥವಾ ಬೇಡವೋ ಎಂಬುದನ್ನು ನಿರ್ಧಾರ ಮಾಡುತ್ತಾರೆ’ ಎಂದಿದ್ದಾರೆ ಉಪೇಂದ್ರ.

ಇದನ್ನೂ ಓದಿ: ರಮೇಶ್ ಅರವಿಂದ್, ಅನುಶ್ರೀ ಸೇರಿ ‘ಮಹಾನಟಿ’ ತಂಡದ ವಿರುದ್ಧ ದಾಖಲಾಯ್ತು ದೂರು; ಕಾರಣವೇನು?

ಆ ಬಳಿಕ ಅನುಶ್ರೀ ಅವರು ರಿಲೀಸ್ ಡೇಟ್ ಬಗ್ಗೆ ಕೇಳಿದರು. ವೇದಿಕೆ ಏರಿದ ಉಪೇಂದ್ರ ಅವರು, ಅನುಶ್ರೀ ಕಿವಿಯಲ್ಲಿ ಏನೋ ಹೇಳಿದರು. ಎಲ್ಲರೂ ರಿಲೀಸ್ ಡೇಟ್ ಅನೌನ್ಸ್ ಆಯಿತು ಎಂದುಕೊಂಡರು. ಉಪೇಂದ್ರ ಅವರು ಕಿವಿಯಲ್ಲಿ ಹೇಳಿದ್ದು, ‘ಯಾರಿಗೂ ಹೇಳಬೇಡಿ’ ಎಂಬುದಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.