ರಿಯಾಲಿಟಿ ಶೋ ತೊರೆಯುವ ನಿರ್ಧಾರಕ್ಕೆ ಬಂದ ಧನಶ್ರೀ; ಕಾರಣ ಏನು?

ಧನಶ್ರೀ ವರ್ಮಾ ಅವರು ಅಮೇಜಾನ್ ಮಿನಿಟಿವಿಯ "ರೈಸ್ ಆ್ಯಂಡ್ ಫಾಲ್" ರಿಯಾಲಿಟಿ ಶೋನಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಚರ್ಚೆ ನಡೆದಾಗ ಭಾವುಕರಾಗಿದ್ದಾರೆ. ಸ್ಪರ್ಧಿಗಳು ಅವರ ವಿಚ್ಛೇದನದ ಬಗ್ಗೆ ಮಾತನಾಡಿದ್ದರಿಂದ ಅವರು ಕಣ್ಣೀರು ಹಾಕಿ ಶೋ ತೊರೆಯುವುದಾಗಿ ಹೇಳಿದರು. ಆದರೆ ಶೋನ ಹೋಸ್ಟ್ ಅಶ್ನೀರ್ ಗ್ರೋವರ್ ಅವರು ಅವರನ್ನು ಮನವೊಲಿಸಿದರು.

ರಿಯಾಲಿಟಿ ಶೋ ತೊರೆಯುವ ನಿರ್ಧಾರಕ್ಕೆ ಬಂದ ಧನಶ್ರೀ; ಕಾರಣ ಏನು?
ಧನಶ್ರೀ
Updated By: ರಾಜೇಶ್ ದುಗ್ಗುಮನೆ

Updated on: Sep 23, 2025 | 8:16 AM

ಡ್ಯಾನ್ಸರ್ ಹಾಗೂ ನಟಿ ಧನಶ್ರೀ (Dhanashree) ವರ್ಮಾ ಅಮೇಜಾನ್ ಎಂಎಕ್ಸ್​ ಪ್ಲೇಯರ್​ನಲ್ಲಿ ಪ್ರಸಾರ ಆಗುವ ‘ರೈಸ್ ಆ್ಯಂಡ್ ಫಾಲ್’ ರಿಯಾಲಿಟಿ ಶೋನ ಭಾಗ ಆಗಿದ್ದಾರೆ. ಈ ಶೋ ಆರಂಭ ಆದಾಗಿನಿಂದಲೂ ಧನಶ್ರೀ ಸುದ್ದಿಯಲ್ಲಿದ್ದಾರೆ. ಈ ಶೋನಲ್ಲಿ ವಿಶೇಷ ವ್ಯಕ್ತಿಯೊಂದಿಗಿನ ಅವರ ಬಾಂಧವ್ಯ ಅಭಿಮಾನಿಗಳಲ್ಲಿ ಚರ್ಚೆಯ ವಿಷಯವಾಗಿದೆ. ಈಗ ಅವರು ಗಳಗಳನೆ ಕಣ್ಣೀರು ಹಾಕಿದ್ದಾರೆ. ಶೋ ತೊರೆಯೋದಾಗಿಯೂ ಹೇಳಿದರು.

ಈ ಕಾರ್ಯಕ್ರಮದಲ್ಲಿ ಧನಶ್ರೀ ಅವರ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಕೆಲವು ಸ್ಪರ್ಧಿಗಳು ಯುಜ್ವೇಂದ್ರ ಚಾಹಲ್ ಅವರೊಂದಿಗಿನ ವಿಚ್ಛೇದನದ ಬಗ್ಗೆ ಮಾತನಾಡಿದರು. ನಟಿ ಅಹಾನಾ ಕುಮ್ರಾ ಕೂಡ ಧನಶ್ರೀ ಬಗ್ಗೆ ಹಲವು ಬಾರಿ ಮಾತನಾಡಿದ್ದಾರೆ. ಈಗ ಮತ್ತೆ ಇದೇ ವಿಚಾರ ತೆಗೆದಿದ್ದಾರೆ. ಇದು ಧನಶ್ರೀಗೆ ಬೇಸರ ಮೂಡಿಸದೆ.

ಈಗ ಕಾರ್ಯಕ್ರಮದ ಕೆಲವು ತುಣುಕುಗಳು ಹರಿದಾಡಿವೆ. ಇದರಲ್ಲಿ ಧನಶ್ರೀ ತುಂಬಾ ಅಳುತ್ತಿರುವುದು ಕಂಡುಬರುತ್ತದೆ. ಕಾರ್ಯಕ್ರಮದಲ್ಲಿ ಇತರ ಸ್ಪರ್ಧಿಗಳು ತಮ್ಮ ವೈಯಕ್ತಿಕ ಜೀವನ ಮತ್ತು ವಿಚ್ಛೇದನದ ಬಗ್ಗೆ ಮಾತನಾಡುವುದು ಧನಶ್ರೀಗೆ ಇಷ್ಟವಾಗಲಿಲ್ಲ. ಅವರು ಕಾರ್ಯಕ್ರಮವನ್ನು ತೊರೆಯುವುದಾಗಿ ಬೆದರಿಕೆ ಹಾಕುತ್ತಿದ್ದಾರೆ.

ಇದನ್ನೂ ಓದಿ
‘ಕಾಂತಾರ: ಚಾಪ್ಟರ್ 1’ ಅವಧಿ ಅದೆಷ್ಟು ದೀರ್ಘ; ಇಲ್ಲಿದೆ ಸೆನ್ಸಾರ್ ವಿವರ
ಮಾಡಿದ ಆ ಒಂದು ತಪ್ಪಿಗೆ ವೇದಿಕೆ ಮೇಲೆ ಅನುಶ್ರೀಗೆ ಕ್ಷಮೆ ಕೇಳಿದ ರಿಷಬ್
‘BBK 12’ ಆರಂಭಕ್ಕೆ ಕೆಲವೇ ದಿನ ಬಾಕಿ ಇರುವಾಗ ಬಂತು ಸ್ಪರ್ಧಿಗಳ ಹೊಸ ಪಟ್ಟಿ
ಗಾಯಕ ಜುಬೀನ್ ಗಾರ್ಗ್ ಸಾಯಲು ಅಸಲಿ ಕಾರಣ ಏನು? ರಿವೀಲ್ ಮಾಡಿದ ಪತ್ನಿ

‘ನಾನು ನನ್ನ ವೈಯಕ್ತಿಕ ಜೀವನವನ್ನು ಯಾರ ಮುಂದೆಯೂ ಹಂಚಿಕೊಂಡಿಲ್ಲ. ಈ ವಿಷಯದ ಬಗ್ಗೆ ನಾನು ಯಾರೊಂದಿಗೂ ಮಾತನಾಡಿಲ್ಲ’ ಎಂದು ಧನಶ್ರೀ ಅಳುತ್ತಾ ಹೇಳಿದರು. ಅಲ್ಲದೆ ಶೋ ಅವರಿಗೆ ಅನ್​ಸೇಫ್ ಎಂದು ಅನಿಸುತ್ತಾ ಇದೆಯಂತೆ. ಈ ಬಗ್ಗೆಯೂ ಅವರು ಹೇಳಿದರು.

ಧನಶ್ರೀ ಕೂಡ ಕಾರ್ಯಕ್ರಮ ಬಿಡುವ ಬಗ್ಗೆ ಮಾತನಾಡಿದರು. ‘ಇದೆಲ್ಲ ಏನು? ನಾನು ಈ ಕಾರ್ಯಕ್ರಮ ಮಾಡಲು ಸಾಧ್ಯವಿಲ್ಲ’ ಎಂದರು. ಆಗ ಶೋನ ಹೋಸ್ಟ್, ಅಶ್ನೀರ್ ಗ್ರೋವರ್ ಅವರು ಧನಶ್ರೀ ಅವರನ್ನು ಮನವೊಲಿಸಲು ಪ್ರಯತ್ನಿಸಿದರು. ‘ಕ್ಷಮಿಸಿ, ಆದರೆ ನಾನು ಈ ಕಾರ್ಯಕ್ರಮ ಮಾಡಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಚಹಲ್ ‘ಶುಗರ್ ಡ್ಯಾಡಿ’ ಟಿ-ಶರ್ಟ್ ಮೆಸೇಜ್​ಗೆ ಖಡಕ್ ಆಗಿ ಉತ್ತರಿಸಿದ ಧನಶ್ರೀ ವರ್ಮಾ

ಧನಶ್ರೀ ಕಾರ್ಯಕ್ರಮದಿಂದ ಹೊರನಡೆಯುವುದನ್ನು ಅಶ್ನೀರ್ ಗ್ರೋವರ್ ತಡೆದಿದ್ದಾರೆ. ಅವರನ್ನು ಯಶಸ್ವಿಯಾಗಿ ಮನ ಒಲಿಸಿದರು. ‘ನಿಮ್ಮನ್ನು ಗೌರವಿಸುವುದು ನನ್ನ ಜವಾಬ್ದಾರಿ’ ಎಂದು ಅಶ್ನೀರ್ ಹೇಳಿದ್ದಾರೆ. ಪವನ್ ಸಿಂಗ್ ಕೂಡ ಧನಶ್ರೀ ಅವರ ಭುಜದ ಮೇಲೆ ಕೈ ಇಟ್ಟು ಶಾಂತಗೊಳಿಸಲು ಪ್ರಯತ್ನಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.