ಕದ್ದುಮುಚ್ಚಿ ಶಾಸ್ತ್ರೋಕ್ತವಾಗಿ ಮದುವೆ ಆದ್ರಾ ಧನುಶ್-ಮೃಣಾಲ್ ಠಾಕೂರ್?

ಧನುಶ್ ಹಾಗೂ ಮೃಣಾಲ್ ಠಾಕೂರ್ ರಹಸ್ಯವಾಗಿ ಮದುವೆಯಾಗಿದ್ದಾರೆಂಬ ಚರ್ಚೆಗಳು ಜೋರಾಗಿವೆ. ಇವರಿಬ್ಬರು ಶಾಸ್ತ್ರೋಕ್ತವಾಗಿ ಕುಳಿತಿರುವಂತೆ ಕಾಣುವ ಒಂದು AI ಸೃಷ್ಟಿಯ ಫೋಟೋ ವೈರಲ್ ಆಗಿ ಜನರನ್ನು ಗೊಂದಲಕ್ಕೀಡು ಮಾಡಿದೆ. ಆದರೆ ಇದು ಸುಳ್ಳು ಸುದ್ದಿ ಎಂಬುದಕ್ಕೆ ಸ್ಪಷ್ಟ ಪುರಾವೆಗಳಿವೆ. ಧನುಶ್ ಹಿಂದೆ ಐಶ್ವರ್ಯಾರನ್ನು ವಿವಾಹವಾಗಿದ್ದರು.

ಕದ್ದುಮುಚ್ಚಿ ಶಾಸ್ತ್ರೋಕ್ತವಾಗಿ ಮದುವೆ ಆದ್ರಾ ಧನುಶ್-ಮೃಣಾಲ್ ಠಾಕೂರ್?
ಧನುಶ್-ಮೃಣಾಲ್

Updated on: Jan 24, 2026 | 3:01 PM

ಧನುಶ್ ಹಾಗೂ ಮೃಣಾಲ್ ಠಾಕೂರ್ (Mrunal Thakur) ಅವರ ವಿವಾಹದ ಬಗ್ಗೆ ಚರ್ಚೆಗಳು ನಡೆದಿವೆ. ಫೆಬ್ರವರಿ 14 ಅಂದರೆ ಪ್ರೇಮಿಗಳ ದಿನ ಇವರು ಹಸೆಮಣೆ ಏರುತ್ತಾರೆ ಎಂಬ ಗಾಸಿಪ್ ಜೋರಾಗಿದೆ. ಆಪ್ತರು ಹಾಗೂ ಚಿತ್ರರಂಗದವರು ಈ ಮದುವೆಯಲ್ಲಿ ಭಾಗಿ ಆಗೋ ಸಾಧ್ಯತೆ ಇದೆ. ಹೀಗಿರುವಾಗಲೇ ಧನುಶ್ ಹಾಗೂ ಮೃಣಾಲ್ ಕದ್ದು ಮುಚ್ಚಿ ಮದುವೆ ಆದರೇ ಎನ್ನುವ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ ಆಗಿದ್ದು ಆ ಒಂದು ಫೋಟೋ.

ಧನುಶ್ ಹಾಗೂ ಮೃಣಾಲ್ ಒಟ್ಟಾಗಿ ಸಿನಿಮಾ ಮಾಡಿದವರಲ್ಲ. ಆದರೆ, ಇಬ್ಬರ ಮಧ್ಯೆ ಪರಿಚಯ ಆಯಿತು. ಇವರ ವಿವಾಹ ಸಮೀಪಿಸುತ್ತಿರುವಾಗಲೇ ಫೋಟೋ ವೈರಲ್ ಆಗಿದೆ. ಧನುಶ್ ಹಾಗೂ ಮೃಣಾಲ್ ಅಕ್ಕ ಪಕ್ಕ ಕೂತಿದ್ದಾರೆ. ಧನುಶ್ ಬಿಳಿ ಬಣ್ಣದ ಧೋತಿ ಹಾಗೂ ಶರ್ಟ್ ಧರಿಸಿದ್ದಾರೆ. ಮೃಣಾಲ್ ಠಾಕೂರ್ ಸೀರೆ ಉಟ್ಟಿ, ಕೂದಲಿಗೆ ಮಲ್ಲಿಗೆ ಹೂ ಮುಡಿದಿದ್ದಾರೆ.

ಹಿಂಭಾಗದಲ್ಲಿ ನಟರಾದ ದಳಪತಿ ವಿಜಯ್, ಅಜಿತ್, ದುಲ್ಖರ್ ಸಲ್ಮಾನ್, ನಟಿಯರಾದ ಶ್ರುತಿ ಹಾಸನ್, ತ್ರಿಷಾ ಇದ್ದಾರೆ. ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ರವಿಚಂದರ್ ಕೂಡ ಪೋಸ್ ಕೊಟ್ಟಿದ್ದಾರೆ. ಜನವರಿ 22ರಂದು ಈ ಮದುವೆ ನಡೆದಿದೆ ಎಂದು ಫೇಕ್ ನ್ಯೂಸ್ ಹಬ್ಬಿಸಲಾಗಿದೆ. ಚೆನ್ನೈನಲ್ಲಿ ಈ ವಿವಾಹ ನಡೆದಿದೆ ಎಂದು ಬರೆಯಲಾಗಿದೆ. ಕೊನೆಯಲ್ಲಿ ಇದನ್ನು ಎಐನಿಂದ ಮಾಡಿದ ವಿಡಿಯೋ ವಿಶೇಷ ಸೂಚನೆ ಹಾಕಲಾಗಿದೆ. ಈ ವಿಡಿಯೋ ನೋಡಿದ ಅನೇಕರು ಇದು ನಿಜ ಎಂದು ನಂಬಿದ್ದಾರೆ.

ಫೆಬ್ರವರಿ 14ರಂರು ಮೃಣಾಲ್ ಹಾಗೂ ಧನುಶ್ ಮದುವೆ ನಡೆಯಲಿದೆ ಎಂಬ ವರದಿ ಹರಿದಾಡಿದೆ. ಹೈದರಾಬಾದ್ ಈವೇಂಟ್​​ನಲ್ಲಿ ಇಬ್ಬರೂ ಭೇಟಿ ಮಾಡಿಯಾದರು ಎನ್ನಲಾಗಿದೆ. ಫೆಬ್ರವರಿ ಕೊನೆಯಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ವಿವಾಹ ನಡೆಯಲಿದೆಯಂತೆ. ಒಂದೇ ತಿಂಗಳಲ್ಲಿ ಎರಡೆರಡು ಮದುವೆ ನಡೆಯಲಿದೆ.

ಇದನ್ನೂ ಓದಿ: ಧನುಷ್ ಜೊತೆ ಮೃಣಾಲ್ ಠಾಕೂರ್ ಮದುವೆ? ಇಬ್ಬರ ನಡುವೆ ವಯಸ್ಸಿನ ಅಂತರ

ಧನುಶ್ ಅವರು ಈ ಮೊದಲು ರಜನಿಕಾಂತ್ ಮಗಳು ಐಶ್ವರ್ಯಾ ಅವರನ್ನು ವಿವಾಹ ಆಗಿದ್ದರು. ಆ ಬಳಿಕ ವಿಚ್ಛೇದನ ಪಡೆದು ಇವರು ದೂರವಾದರು. ಈ ಬೆನ್ನಲ್ಲೇ ಧನುಶ್ ಎರಡನೇ ಮದುವೆಗೆ ರೆಡಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.