AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘45 ಟೈಟಲ್ ಕೊಟ್ಟಿದ್ದು ನಾನು, ಸೌಜನ್ಯಕ್ಕೂ ನನ್ನ ಹೆಸರು ಹೇಳಿಲ್ಲ’; ನಟನ ಬೇಸರ

ಅರ್ಜುನ್ ಜನ್ಯ ನಿರ್ದೇಶನದ '45' ಸಿನಿಮಾ ಶೀರ್ಷಿಕೆ ಕುರಿತು ನಟ ಮಿತ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಟೈಟಲ್ ತಮಗೆ ಸೇರಿತ್ತು ಎಂದು ಹೇಳಿರುವ ಮಿತ್ರ, ನಿರ್ಮಾಪಕರಿಗೆ ಅದನ್ನು ನೀಡಿದರೂ, ಚಿತ್ರತಂಡದಿಂದ ಯಾವುದೇ ಕೃತಜ್ಞತೆ ಅಥವಾ ಉಲ್ಲೇಖಿಸಿಲ್ಲ ಎಂದಿದ್ದಾರೆ. ಹಣ ನಿರೀಕ್ಷಿಸದಿದ್ದರೂ, ಸಣ್ಣದೊಂದು ಮಾನ್ಯತೆ ಸಿಗಬೇಕಿತ್ತು ಎಂಬುದು ಅವರ ಅಭಿಪ್ರಾಯ.

‘45 ಟೈಟಲ್ ಕೊಟ್ಟಿದ್ದು ನಾನು, ಸೌಜನ್ಯಕ್ಕೂ ನನ್ನ ಹೆಸರು ಹೇಳಿಲ್ಲ’; ನಟನ ಬೇಸರ
45 ಸಿನಿಮಾ
ರಾಜೇಶ್ ದುಗ್ಗುಮನೆ
|

Updated on: Jan 24, 2026 | 12:51 PM

Share

ಅರ್ಜುನ್ ಜನ್ಯ (Arjun Janya) ನಿರ್ದೇಶನದ, ಶಿವರಾಜ್​​ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟನೆಯ ‘45’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಕೆಲವರಿಂದ ಮೆಚ್ಚುಗೆ ಪಡೆಯಿತು. ಈಗ ಚಿತ್ರ ಒಟಿಟಿಗೂ ಬಂದಿದೆ. ‘45’ ಅನ್ನೋದು ಸಿನಿಮಾದ ಕಥೆಗೆ ಹೆಚ್ಚು ಸೂಕ್ತ. ಹೀಗಾಗಿ, ಈ ಟೈಟಲ್ ಇಡಲಾಗಿದೆ. ಈಗ ಟೈಟಲ್ ವಿಷಯಕ್ಕೆ ಸಂಬಂಧಿಸಿದಂತೆ ಸಿನಿಮಾ ಹಾಗೂ ಕಿರುತೆರೆ ಕಲಾವಿದ ಮಿತ್ರ ಮಾತನಾಡಿದ್ದಾರೆ. ‘ಟೈಟಲ್ ನನ್ನದಾಗಿತ್ತು, ಅವರಿಗೆ ನೀಡಿದ್ದೇನೆ’ ಎಂದಿದ್ದಾರೆ.

ಸಿನಿಮಾ ವೀಕ್ಷಿಸಿದವರಿಗೆ ‘45’ ಎಂಬ ಟೈಟಲ್ ಯಾಕೆ ಇಡಲಾಗಿದೆ ಎಂಬುದು ಮನದಟ್ಟಾಗುತ್ತದೆ. ಈ ಟೈಟಲ್​​ ಇಡೋಣ ಎಂದು ನಿರ್ದೇಶಕರು ಹಾಗೂ ನಿರ್ಮಾಪಕರು ನಿರ್ಧರಿಸಿದಾಗ ನಟ ಮಿತ್ರ ಅವರು ಈ ಶೀರ್ಷಿಕೆ ನೋಂದಣಿ ಮಾಡಿಸಿದ ವಿಷಯ ಗೊತ್ತಾಗಿದೆ. ಹೀಗಾಗಿ, ಟೈಟಲ್​​ನ ಅವರ ಬಳಿ ಕೇಳಿ ಪಡೆದರು ನಿರ್ಮಾಪಕ ರಮೇಶ್ ರೆಡ್ಡಿ. ಸೌಜನ್ಯಕ್ಕೆ ಒಮ್ಮೆ ಹೆಸರನ್ನಾದರೂ ಹೇಳಬಹುದಿತ್ತು ಎಂಬುದು ಮಿತ್ರನ ಅಭಿಪ್ರಾಯ.

ಇದನ್ನೂ ಓದಿ: ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿಗೆ ಚಿತ್ರಮಂದಿರದಲ್ಲೇ ಅರ್ಜುನ್ ಜನ್ಯ ಉತ್ತರ

‘ಕನ್ನಡ ಪಿಚ್ಚರ್​’ಗೆ ನೀಡಿದ ಸಂದರ್ಶನದಲ್ಲಿ ಮಿತ್ರ ಮಾತನಾಡಿದ್ದಾರೆ.  ‘45 ಟೈಟಲ್ ಕೊಟ್ಟಿದ್ದೇ ನಾನು. ನನ್ನ ಬ್ಯಾನರ್ ಅಡಿಯಲ್ಲಿ ಸಿನಿಮಾ ನೋಂದಣಿ ಮಾಡಿಸಿದ್ದೆ. ರಮೇಶ್ ರೆಡ್ಡಿ ಅವರು ಕರೆ ಮಾಡಿದರು. ನಮ್ಮ ಕಥೆಗೆ ಈ ಶೀರ್ಷಿಕೆ ಹೊಂದಾಣಿಕೆ ಆಗುತ್ತಿದೆ, ಟೈಟಲ್ ಬೇಕಿತ್ತು. ಅರ್ಜುನ್ ಜನ್ಯ ನಿರ್ದೇಶನ ಇದೆ ಎಂದು ವಿವರಿಸಿದರು’ ಎಂದಿದ್ದಾರೆ ಮಿತ್ರ.

‘ಹಣ ನೀಡೋಕೆ ಬಂದರು. ನಾನು ಬೇಡ ಎಂದೆ. ಥ್ಯಾಂಕ್ಸ್ ಕಾರ್ಡ್ ಹಾಕ್ತಾರೆ ಅಥವಾ ಸಂದರ್ಶನದಲ್ಲಿ ಹೇಳ್ತಾರೆ ಎಂದುಕೊಂಡಿದ್ದೆ. ಕೊನೆಪಕ್ಷ ಅರ್ಜುನ್ ಜನ್ಯ ನನೆಪಿಸಿಕೊಳ್ಳುತ್ತಾರೆ ಎಂದುಕೊಂಡಿದ್ದೆ. ಆದರೆ, ಏನೂ ಮಾಡಿಲ್ಲ. ಪ್ರೀತಿಯಿಂದ ಟೈಟಲ್ ಬಿಟ್ಟು ಕೊಟ್ಟಿದ್ದೇನೆ, ಹಣ ನಿರೀಕ್ಷಿಸಿಲ್ಲ. ಬ್ಯುಸಿ ಇಂದ ಮರೆತು ಹೋಗಿರಬಹುದು. ಸೇವೆನ ಪರಿಗಣಿಸಬೇಕಿತ್ತು ಎಂಬುದು ನನ್ನ ಅಭಿಪ್ರಾಯ’ ಎನ್ನುತ್ತಾರೆ ಮಿತ್ರ. ‘45’ ಸಿನಿಮಾ ಡಿಸೆಂಬರ್ 25ರಂದು ಥಿಯೇಟರ್​​ಗೆ ಬಂತು. ಈಗ ಜನವರಿ 23ರಂದು ಜೀ 5 ಅಲ್ಲಿ ಪ್ರಸಾರ ಆರಂಭಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.