ಧನುಷ್ ಜೊತೆ ಮೃಣಾಲ್ ಠಾಕೂರ್ ಮದುವೆ? ಇಬ್ಬರ ನಡುವೆ ವಯಸ್ಸಿನ ಅಂತರ
ಪ್ರೇಮಿಗಳ ದಿನದಂದು, ಅಂದರೆ ಫೆಬ್ರವರಿ 14ಕ್ಕೆ ಧನುಷ್ ಹಾಗೂ ಮೃಣಾಲ್ ಠಾಕೂರ್ ಅವರು ಮದುವೆ ಆಗುತ್ತಾರೆ ಎನ್ನಲಾಗಿದೆ. ಕಳೆದ ಕೆಲವು ತಿಂಗಳಿಂದ ಅವರಿಬ್ಬರು ಡೇಟಿಂಗ್ ಮಾಡುತ್ತಿರುವ ಬಗ್ಗೆ ಗಾಸಿಪ್ ಕೇಳಿಬರುತ್ತಲೇ ಇದೆ. ಈಗ ಮಾಧ್ಯಮಗಳಲ್ಲಿ ಅವರ ಮದುವೆ ಬಗ್ಗೆ ಸುದ್ದಿ ಹಬ್ಬಿದೆ.

ಕಾಲಿವುಡ್ ಸ್ಟಾರ್ ನಟ ಧನುಷ್ (Dhanush) ಅವರು ಎರಡನೇ ಮದುವೆ ಬಗ್ಗೆ ಆಲೋಚನೆ ಮಾಡುತ್ತಿದ್ದಾರೆ. ಅಚ್ಚರಿ ಎಂದರೆ ಬಾಲಿವುಡ್ ನಟಿ ಮೃಣಾಲ್ ಠಾಕೂರ್ ಜೊತೆ ಅವರು ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಈ ಕುರಿತು ಮೃಣಾಲ್ ಠಾಕೂರ್ (Mrunal Thakur) ಅವರಾಗಲಿ, ಧನುಷ್ ಅವರಾಗಲಿ ಸ್ಪಷ್ಟನೆ ನೀಡಿಲ್ಲ. ಆದರೆ ಗಾಸಿಪ್ ಜೋರಾಗಿದೆ. ಫೆಬ್ರವರಿ 14ರಂದು ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಹರಡಿದ ಬಳಿಕ ಅವರಿಬ್ಬರ ವಯಸ್ಸಿನ ಅಂತರದ ಬಗ್ಗೆ ಚರ್ಚೆ ಆಗುತ್ತಿದೆ. ಧನುಷ್ ಮತ್ತು ಮೃಣಾಲ್ ಠಾಕೂರ್ ನಡುವೆ ಇರುವ ವಯಸ್ಸಿನ ಅಂತರ (Age Gap) 9 ವರ್ಷ.
ಮೃಣಾಲ್ ಠಾಕೂರ್ ಅವರು ಜನಿಸಿದ್ದು 1992ರ ಆಗಸ್ಟ್ 1ರಂದು. ಈಗ ಅವರಿಗೆ 33 ವರ್ಷ ವಯಸ್ಸು. ನಟ ಧನುಷ್ ಅವರು ಜನಿಸಿದ್ದು 1983ರ ಜುಲೈ 28ರಂದು. ಈಗ ಅವರ ವಯಸ್ಸು 42 ವರ್ಷ. 9 ವರ್ಷ ವಯಸ್ಸಿನ ಅಂತರ ಇರುವ ಧನುಷ್ ಮತ್ತು ಮೃಣಾಲ್ ಠಾಕೂರ್ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ ಅವರು ಇದನ್ನು ಒಪ್ಪಿಕೊಂಡಿಲ್ಲ.
‘ಸನ್ ಆಫ್ ಸರ್ದಾರ್ 2’ ಸಿನಿಮಾದಲ್ಲಿ ಮೃಣಾಲ್ ಠಾಕೂರ್ ಅವರು ನಟಿಸಿದ್ದರು. ಆ ಸಿನಿಮಾ 2025ರ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಯಿತು. ಆ ಚಿತ್ರದ ಪ್ರೀಮಿಯರ್ ಶೋನಲ್ಲಿ ಮೃಣಾಲ್ ಠಾಕೂರ್ ಮತ್ತು ಧನುಷ್ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದರು. ಅಲ್ಲಿಂದ ಅವರಿಬ್ಬರ ಬಗ್ಗೆ ಗಾಸಿಪ್ ಹರಡಲು ಶುರು ಆಯಿತು. ‘ನಾವಿಬ್ಬರು ಜಸ್ಟ್ ಫ್ರೆಂಡ್ಸ್’ ಎಂದು ಹೇಳುವ ಮೂಲಕ ಮೃಣಾಲ್ ಅವರು ತಪ್ಪಿಸಿಕೊಂಡಿದ್ದರು.
ಧನುಷ್ ಅವರು ಈ ಮೊದಲು ಐಶ್ವರ್ಯಾ ರಜನಿಕಾಂತ್ ಜೊತೆ ಮದುವೆ ಆಗಿದ್ದರು. 2004ರಲ್ಲಿ ಐಶ್ವರ್ಯಾ ಹಾಗೂ ಧನುಷ್ ಮದುವೆ ನಡೆದಿತ್ತು. ಆ ಜೋಡಿಗೆ ಯಾತ್ರ ಮತ್ತು ಲಿಂಗ ಎಂಬಿಬ್ಬರು ಗಂಡು ಮಕ್ಕಳು ಇದ್ದಾರೆ. 20 ವರ್ಷಗಳ ದಾಂಪತ್ಯದ ಬಳಿಕ ಧನುಷ್ ಮತ್ತು ಐಶ್ವರ್ಯಾ ಸಂಸಾರದಲ್ಲಿ ಬಿರುಕು ಮೂಡಿತು. 2024ರಲ್ಲಿ ಅವರಿಬ್ಬರು ವಿಚ್ಛೇದನ ಪಡೆದರು.
ಇದನ್ನೂ ಓದಿ: ಮೃಣಾಲ್ ಠಾಕೂರ್ ಗ್ಲಾಮರಸ್ ಫೋಟೊಶೂಟ್: ವಿಡಿಯೋ ನೋಡಿ
ಮೃಣಾಲ್ ಠಾಕೂರ್ ಅವರು ಕಿರುತೆರೆ ಸೀರಿಯಲ್ಗಳ ಮೂಲಕ ಜನರಿಗೆ ಪರಿಚಯ ಆದವರು. ಬಳಿಕ ಅವರಿಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು. ಬಾಲಿವುಡ್ ಮಾತ್ರವಲ್ಲದೇ ದಕ್ಷಿಣ ಭಾರತದ ಸಿನಿಮಾಗಳಲ್ಲೂ ನಟಿಸಿ ಅವರು ಫೇಮಸ್ ಆಗಿದ್ದಾರೆ. ಅವರ ಮದುವೆ ಬಗ್ಗೆ ಹರಡಿರುವ ಗಾಸಿಪ್ ಕೇಳಿ ಅಭಿಮಾನಿಗಳಿಗೆ ಅಚ್ಚರಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




