AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟ ಧನುಷ್ ಜೊತೆ ಮೃಣಾಲ್ ಠಾಕೂರ್ ಡೇಟಿಂಗ್? ಹೆಚ್ಚಾಗಿದೆ ಅನುಮಾನ

ಖ್ಯಾತ ನಟಿ ಮೃಣಾಲ್ ಠಾಕೂರ್ ಅವರು ಧನುಷ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್ ಇದೆ. ಇಬ್ಬರ ನಡುವೆ ಆಪ್ತತೆ ಬೆಳೆದಿದೆ. ಒಂದೆರಡು ಬಾರಿ ಅವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದು ಕೂಡ ಇದೆ. ಧನುಷ್ ಅವರಿಗೆ 42 ವರ್ಷ ವಯಸ್ಸು. ಮೃಣಾಲ್ ಅವರಿಗೆ 33ರ ಪ್ರಾಯ. ಡೇಟಿಂಗ್ ಬಗ್ಗೆ ಇಲ್ಲಿದೆ ಮಾಹಿತಿ.

ನಟ ಧನುಷ್ ಜೊತೆ ಮೃಣಾಲ್ ಠಾಕೂರ್ ಡೇಟಿಂಗ್? ಹೆಚ್ಚಾಗಿದೆ ಅನುಮಾನ
Mrunal Thakur, Dhanush
ಮದನ್​ ಕುಮಾರ್​
|

Updated on: Nov 28, 2025 | 5:47 PM

Share

ಕಾಲಿವುಡ್ ನಟ ಧನುಷ್ (Dhanush) ಅವರು ಬಾಲಿವುಡ್ ಮಂದಿಗೂ ಚಿರಪರಿಚಿತರು. ಅವರು ನಟಿಸಿದ ಹೊಸ ಹಿಂದಿ ಸಿನಿಮಾ ‘ತೇರೆ ಇಷ್ಕ್ ಮೇ’ (Tere Ishq Mein) ಇಂದು (ನವೆಂಬರ್ 28) ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಅವರ ಜೊತೆ ಕೃತಿ ಸನನ್ ಅಭಿನಯಿಸಿದ್ದಾರೆ. ಈ ಚಿತ್ರದ ಬಿಡುಗಡೆ ಪ್ರಯುಕ್ತ ಧನುಷ್ ಅವರು ಸೋಶಿಯಲ್ ಮೀಡಿಯಾದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬನಾರಸ್​​ಗೆ ಭೇಟಿ ನೀಡಿದ ಕ್ಷಣಗಳು ಈ ಫೋಟೋದಲ್ಲಿ ಇವೆ. ಈ ಮೂಲಕ ಧನುಷ್ ಅವರು ನೆನಪಿನ ಪುಟ ತೆರೆದಿದ್ದಾರೆ. ಅದಕ್ಕೆ ನಟಿ ಮೃಣಾಲ್ ಠಾಕೂರ್ (Mrunal Thakur) ಅವರು ಕಮೆಂಟ್ ಮಾಡಿದ್ದಾರೆ. ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗೆ ಇದರಿಂದ ಪುಷ್ಟಿ ಸಿಕ್ಕಂತೆ ಆಗಿದೆ.

ಧನುಷ್ ಅವರು 2004ರಲ್ಲಿ ಐಶ್ವರ್ಯಾ ರಜನಿಕಾಂತ್ ಜೊತೆ ಮದುವೆ ಆಗಿದ್ದರು. 2024ರಲ್ಲಿ ಅವರಿಬ್ಬರು ವಿಚ್ಛೇದನ ಪಡೆದುಕೊಂಡರು. ಈಗ ಧನುಷ್ ಅವರು ಬಾಲಿವುಡ್ ನಟಿ ಮೃಣಾಲ್ ಠಾಕೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಅನುಮಾನ ಇದೆ. ಈಗಾಗಲೇ ಅವರಿಬ್ಬರು ಕೆಲವು ಸಂದರ್ಭಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಅದರಿಂದ ಅನುಮಾನ ಮೂಡಿದೆ.

ಧನುಷ್ ಅವರಿಗೆ ಈಗ 42 ವರ್ಷ ವಯಸ್ಸು. ಚಿತ್ರರಂಗದಲ್ಲಿ ಅವರು ಬ್ಯುಸಿ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ನಟಿ ಮೃಣಾಲ್ ಠಾಕೂರ್ ಅವರಿಗೆ ಈಗ 33 ವರ್ಷ ವಯಸ್ಸು. ಅವರು ಕೂಡ ಬಾಲಿವುಡ್ ಮತ್ತು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ತಮ್ಮಿಬ್ಬರ ಡೇಟಿಂಗ್ ಬಗ್ಗೆ ಅವರು ಬಾಯಿ ಬಿಟ್ಟಿಲ್ಲ.

View this post on Instagram

A post shared by Dhanush (@dhanushkraja)

ಇನ್​ಸ್ಟಾಗ್ರಾಮ್​​ನಲ್ಲಿ ಧನುಷ್ ಅವರು ಹಂಚಿಕೊಂಡ ಫೋಟೋಗೆ ಮೃಣಾಲ್ ಠಾಕೂರ್ ಭಾರಿ ಉತ್ಸಾಹದಲ್ಲಿ ಕಮೆಂಟ್ ಮಾಡಿದ್ದಾರೆ. ‘ಸರ್.. ಎಂಥ ಅದ್ಭುತ ಪಯಣ. ಬ್ಲಾಕ್ ಬಸ್ಟರ್, ಕಲ್ಟ್, ಲೆಗೆಸಿ’ ಎಂದ ಅವರು ಕಮೆಂಟ್ ಮಾಡಿದ್ದು, ಅದಕ್ಕೆ ಧನುಷ್ ಪ್ರತಿಕ್ರಿಯೆ ನೀಡಿದ್ದಾರೆ. ಅಪ್ಪುಗೆ ಮತ್ತು ಬಿಳಿ ಹಾರ್ಟ್ ಎಮೋಜಿಯನ್ನು ಧನುಷ್ ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಮಗನಿಗಾಗಿ ಒಂದಾದ ಧನುಷ್, ಐಶ್ವರ್ಯಾ ರಜನಿಕಾಂತ್; ಫೋಟೋ ವೈರಲ್

‘ಸನ್ ಆಫ್ ಸರ್ದಾರ್ 2’ ಸಿನಿಮಾದ ಪ್ರೀಮಿಯರ್ ವೇಳೆ ಮೃಣಾಲ್ ಠಾಕೂರ್ ಮತ್ತು ಧನುಷ್ ಅವರು ಜೊತೆಯಾಗಿ ಕಾಣಿಸಿಕೊಂಡಿದ್ದರು. ‘ತೇರೆ ಇಷ್ಕ್ ಮೇ’ ಸಿನಿಮಾದ ಶೂಟಿಂಗ್ ಮುಗಿದಾಗಲೂ ಧನುಷ್ ಜೊತೆ ಮೃಣಾಲ್ ಠಾಕೂರ್ ಅವರು ಇದ್ದರು. ಧನುಷ್ ಅವರು ಸಹೋದರಿಯ ಇನ್​ಸ್ಟಾಗ್ರಾಮ್ ಖಾತೆಯನ್ನು ಕೂಡ ಮೃಣಾಲ್ ಅವರು ಫಾಲೋ ಮಾಡಲು ಆರಂಭಿಸಿದ್ದಾರೆ. ಈ ಎಲ್ಲ ಕಾರಣದಿಂದ ಧನುಷ್ ಮತ್ತು ಮೃಣಾಲ್ ಬಗ್ಗೆ ಡೇಟಿಂಗ್ ಗಾಸಿಪ್ ಹಬ್ಬಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.