ಧನುಷ್ ಜೊತೆ ಮೃಣಾಲ್ ಠಾಕೂರ್ ಸುತ್ತಾಟ? ಇಂಡಸ್ಟ್ರಿಯಲ್ಲಿ ಹೊಸ ಜೋಡಿ
ಧನುಷ್ ಮತ್ತು ಐಶ್ವರ್ಯ ಅವರ ವಿಚ್ಛೇದನದ ನಂತರ, ಧನುಷ್ ನಟಿ ಮೃಣಾಲ್ ಠಾಕೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿವೆ. ಇಬ್ಬರೂ ಹಲವಾರು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಮೃಣಾಲ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಧನುಷ್ ಕೈ ಹಿಡಿದು ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಸೂಪರ್‌ಸ್ಟಾರ್ ರಜನಿಕಾಂತ್ ಅವರ ಪುತ್ರಿ ಐಶ್ವರ್ಯ ಮತ್ತು ನಟ ಧನುಷ್ (Dhanush) ಅವರ ವಿಚ್ಛೇದನ ಪಡೆದಿದ್ದಾರೆ. ವಿಚ್ಛೇದನದ ನಂತರ, ಧನುಷ್ ಮತ್ತು ಐಶ್ವರ್ಯ ತಮ್ಮ ಜೀವನದಲ್ಲಿ ನಿರತರಾಗಿದ್ದಾರೆ. ಧನುಷ್ ಅವರು ಈಗ ನಟಿ ಮೃಣಾಲ್ ಠಾಕೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಇಬ್ಬರೂ ಅನೇಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈಗ ಇವರ ಡೇಟಿಂಗ್ ವಿಚಾರ ಹುಟ್ಟಿಕೊಂಡಿದೆ.
ನಟ ಧನುಷ್ ಇತ್ತೀಚೆಗೆ ಮೃಣಾಲ್ ಠಾಕೂರ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದರು ಮತ್ತು ಈಗ ಆ ಪಾರ್ಟಿಯ ವೀಡಿಯೊವೊಂದು ಹೊರಬಂದಿದೆ. ಅದರಲ್ಲಿ ಧನುಷ್ ಮೃಣಾಲ್ ಠಾಕೂರ್ ಅವರ ಕೈ ಹಿಡಿದು ಮಾತನಾಡುತ್ತಿದ್ದಾರೆ. ವಿಡಿಯೋ ನೋಡಿದ ನಂತರ, ಇಬ್ಬರೂ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹಲವರು ಊಹಿಸಿದ್ದಾರೆ.
ಜುಲೈ 3 ರಂದು ನಡೆದ ಪಾರ್ಟಿಯಲ್ಲಿ ಮೃಣಾಲ್ ಠಾಕೂರ್ ಕಾಣಿಸಿಕೊಂಡಿದ್ದರು. ಮೃಣಾಲ್ ಠಾಕೂರ್ ಮತ್ತು ಧನುಷ್ ಒಟ್ಟಿಗೆ ಪೋಸ್ ನೀಡುತ್ತಿರುವ ಕೆಲವು ಫೋಟೋಗಳು ವೈರಲ್ ಆಗಿವೆ. ಆಗಸ್ಟ್ 1ರ ಮೃಣಾಲ್ ಬರ್ತ್ಡೇ ಪಾರ್ಟಿಯಲ್ಲೂ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಯಾವುದೇ ಹೇಳಿಕೆ ನೀಡಲಿಲ್ಲ.
ಮೃಣಾಲ್ ಠಾಕೂರ್ ಅವಿವಾಹಿತೆ. ಅವರ ಹೆಸರು ಅನೇಕ ನಟರೊಂದಿಗೆ ಲಿಂಕ್ ಆಘಿತ್ತು. ಅವರಲ್ಲಿ ಬಾದ್‌ಶಾ, ಸಿದ್ಧಾಂತ್ ಚತುರ್ವೇದಿ, ಕುಶಾಲ್ ಟಂಡನ್, ಅರ್ಜಿತ್ ತನೇಜಾ ಮತ್ತು ಶರದ್ ತ್ರಿಪಾಠಿ ಸೇರಿದ್ದಾರೆ. ನಟಿ ಸಣ್ಣ ಪರದೆಯಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು ಮತ್ತು ಬಾಲಿವುಡ್‌ನ ದೊಡ್ಡ ಹೆಸರು ಮಾಡಿದ್ದಾರೆ.
Dhanush and Mrunal Thakur are dating? pic.twitter.com/ItWYJdsm8a
— Aryan (@Pokeamole_) August 3, 2025
ಧನುಷ್ ಬಗ್ಗೆ ಹೇಳುವುದಾದರೆ, ನಟ ರಜನಿಕಾಂತ್ ಅವರ ಮಗಳು ಐಶ್ವರ್ಯ ಅವರನ್ನು ವಿವಾಹವಾದರು. ಆದರೆ ಅವರ ದಾಂಪತ್ಯ ಹೆಚ್ಚು ಕಾಲ ಉಳಿಯಲಿಲ್ಲ. 18 ವರ್ಷಗಳ ದಾಂಪತ್ಯದ ನಂತರ, ಧನುಷ್ ಮತ್ತು ಐಶ್ವರ್ಯ 2022 ರಲ್ಲಿ ತಮ್ಮ ವಿಚ್ಛೇದನ ಘೋಷಿಸಿದರು. ಇದರ ನಂತರ, ಧನುಷ್ ಮತ್ತು ಐಶ್ವರ್ಯ ಏಪ್ರಿಲ್ 2024ರಲ್ಲಿ ಅಧಿಕೃತವಾಗಿ ವಿಚ್ಛೇದನ ಪಡೆದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ.
ಇದನ್ನೂ ಓದಿ: ‘ಅದೃಷ್ಟ ಬಂದಿದ್ದಲ್ಲ, ನೀವೇ ಸೃಷ್ಟಿಸಿಕೊಂಡಿದ್ದು’; ರಶ್ಮಿಕಾ ಹೇಟರ್ಗಳಿಗೆ ಧನುಷ್ ಖಡಕ್ ಮಾತು
ಧನುಷ್ ಈಗ ಕೃತಿ ಸನೋನ್ ಅಭಿನಯದ ‘ತೇರೆ ಇಷ್ಕ್ ಮೇ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮತ್ತು ಈ ಚಿತ್ರ ನವೆಂಬರ್ 28 ರಂದು ಬಿಡುಗಡೆಯಾಗಲಿದೆ. ಮೃಣಾಲ್ ಠಾಕೂರ್ ಅವರ ‘ಸನ್ ಆಫ್ ಸರ್ದಾರ್ 2′ ಚಿತ್ರ ಬಿಡುಗಡೆಯಾಗಿದೆ. ಈ ಚಿತ್ರ ಯಶಸ್ಸು ಕಂಡಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







