ಧನುಶ್-ರಶ್ಮಿಕಾ ಮಂದಣ್ಣ ಸಿನಿಮಾಕ್ಕೆ ಹೆಸರು ಸಿಕ್ಕಿತು
Dhanush-Rashmika: ಧನುಶ್ ಹಾಗೂ ರಶ್ಮಿಕಾ ಮಂದಣ್ಣ ನಟಿಸಿ ಶೇಖರ್ ಕಮ್ಮುಲ ನಿರ್ದೇಶಿಸುತ್ತಿರುವ ಹೊಸ ಸಿನಿಮಾದ ಟೈಟಲ್ ಟೀಸರ್ ಬಿಡುಗಡೆ ಮಾಡಲಾಗಿದೆ.

ರಶ್ಮಿಕಾ ಮಂದಣ್ಣ (Rashmika Mandanna) ಬಾಲಿವುಡ್ಗೆ ಹೋದ ಬಳಿಕ ದಕ್ಷಿಣ ಭಾರತ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆಯಾಗಿವೆ ಎಂಬ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಆದರೆ ಅದು ಪೂರ್ಣ ಸತ್ಯವಲ್ಲ. ಈಗಲೂ ಸಹ ರಶ್ಮಿಕಾ, ಹಿಂದಿ ಸಿನಿಮಾಗಳಿಗಿಂತಲೂ ತಮಿಳು-ತೆಲುಗು ಸಿನಿಮಾಗಳಲ್ಲಿಯೇ ಹೆಚ್ಚು ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ನಟಿ ರಶ್ಮಿಕಾ ಮಂದಣ್ಣ ತಮಿಳಿನ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಅದರಲ್ಲಿ ನಾಯಕನಾಗಿ ನಟ ಧನುಶ್ ನಟಿಸುತ್ತಿದ್ದು ಶಿವರಾತ್ರಿಯಂದು ಸಿನಿಮಾದ ಹೆಸರು ಘೋಷಣೆ ಮಾಡಲಾಗಿದೆ.
ಧನುಶ್-ರಶ್ಮಿಕಾ ಒಟ್ಟಿಗೆ ನಟಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾಕ್ಕೆ ‘ಕುಬೇರ’ ಎಂದು ಹೆಸರಿಡಲಾಗಿದೆ. ಸಿನಿಮಾದಲ್ಲಿ ಧನುಶ್ ರದ್ದು ಭಿಕ್ಷುಕನ ಪಾತ್ರವಂತೆ. ಸಿನಿಮಾಕ್ಕೆ ರಶ್ಮಿಕಾ ಮಂದಣ್ಣ ನಾಯಕಿ. ಇತ್ತೀಚೆಗಷ್ಟೆ ಈ ಸಿನಿಮಾದ ಚಿತ್ರೀಕರಣ ತಿರುಪತಿಯಲ್ಲಿ ನಡೆಯಿತು. ಸಿನಿಮಾದ ಟೈಟಲ್ ಟೀಸರ್ ಸಹ ಬಿಡುಗಡೆ ಆಗಿದ್ದು, ಶಿವ ಭಿಕ್ಷೆ ಬೇಡುತ್ತಿರುವ ಚಿತ್ರದ ಮುಂದೆ ಧನುಶ್ ನಿಂತಿರುವ ದೃಶ್ಯವನ್ನು ಟೀಸರ್ನಲ್ಲಿ ತೋರಿಸಲಾಗಿದೆ. ಭಿಕ್ಷೆ ಬೇಡುತ್ತಿರುವ ಶಿವನಿಗೆ ಧನುಶ್ರ ಪಾತ್ರವನ್ನು ಹೋಲಿಸಲಾಗಿದೆ.
ಇದನ್ನೂ ಓದಿ:ದಕ್ಷಿಣ ಭಾರತ-ಬಾಲಿವುಡ್ ಎಂದು ಬೇರೆ ಮಾಡುವವರಿಗೆ ರಶ್ಮಿಕಾ ಮಂದಣ್ಣ ಕೊಟ್ಟರು ಉತ್ತರ
ಸಿನಿಮಾದಲ್ಲಿ ಧನುಶ್ ಹಾಗೂ ರಶ್ಮಿಕಾ ಮಾತ್ರವೇ ಅಲ್ಲದೆ ತೆಲುಗಿನ ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ ಸಹ ಇದ್ದಾರೆ. ನಾಗಾರ್ಜುನಾಗೆ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವಿದೆಯಂತೆ. ಈ ಸಿನಿಮಾವನ್ನು ತೆಲುಗಿನ ಜನಪ್ರಿಯ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ, ‘ಹ್ಯಾಪಿಡೇಸ್’, ‘ಆನಂದ್’, ‘ಗೋಧಾವರಿ’, ‘ಲೀಡರ್’, ‘ಲವ್ ಸ್ಟೋರಿ’ ಅಂಥಹಾ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಅನುಭವ ಶೇಖರ್ ಅವರಿಗಿದೆ.
ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿ ತಿಂಗಳ ಮೇಲಾಗಿದೆ. ಇತ್ತೀಚೆಗಷ್ಟೆ ಈ ಸಿನಿಮಾದ ಚಿತ್ರೀಕರಣ ತಿರುಪತಿಯಲ್ಲ ನಡೆದಿತ್ತು. ಈ ವೇಳೆ ಚಿತ್ರತಂಡಕ್ಕೆ ತುಸು ಪ್ರತಿಭಟನೆಯ ಬಿಸಿ ಸಹ ತಾಕಿತ್ತು. ಚಿತ್ರೀಕರಣದಿಂದಾಗಿ ಭಕ್ತಾಧಿಗಳಿಗೆ ಸಮಸ್ಯೆ ಆದ ಕಾರಣ ಹಲವರು ಚಿತ್ರತಂಡದ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಅಲ್ಲದೆ ರಶ್ಮಿಕಾ ಹಾಗೂ ಧನುಶ್ ನಟಿಸುತ್ತಿರುವ ದೃಶ್ಯದ ವಿಡಿಯೋ ಸಹ ಲೀಕ್ ಆಗಿತ್ತು. ಧನುಶ್ ಅನ್ನು ರಶ್ಮಿಕಾ ಕೈ ಹಿಡಿದು ಕರೆದುಕೊಂಡು ಹೋಗುತ್ತಿರುವ ದೃಶ್ಯವದು.
ಧನುಶ್ ಈ ಹಿಂದೆ ನಟಿಸಿದ್ದ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾ ಸಾಧಾರಣ ಯಶಸ್ಸನ್ನಷ್ಟೆ ಕಂಡಿದೆ. ಈಗ ‘ಕುಬೇರ’ ಸಿನಿಮಾದಲ್ಲಿ ಧನುಶ್ ನಟಿಸುತ್ತಿದ್ದಾರೆ. ಇದರ ಬಳಿಕ ಅವರ ಸೂಪರ್ ಹಿಟ್ ಹಿಂದಿ ಸಿನಿಮಾ ‘ರಾಂಝನಾ’ದ ಸೀಕ್ವೆಲ್ನಲ್ಲಿ ನಟಿಸಲಿದ್ದಾರೆ. ಅದಾದ ಬಳಿಕ ಕಲಾನಿಧಿ ಮಾರನ್ ನಿರ್ಮಿಸುತ್ತಿರುವ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ. ಆ ಸಿನಿಮಾದ ಬಳಿಕ ಅವರ ಸಹೋದರ ನಿರ್ದೇಶಿಸಲಿರುವ ‘ಆಯರತ್ತಿಲ್ ಒರುವನ್ 2’ನಲ್ಲಿ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ