ನಯನತಾರಾಗೆ ದುಬಾರಿ ಆದ 3 ಸೆಕೆಂಡ್ ವಿಡಿಯೋ; ಕೋಟಿ ರೂಪಾಯಿ ಪರಿಹಾರಕ್ಕೆ ಆಗ್ರಹ

ಧನುಷ್ ಅವರ ವುಂಗಾಬಾ ಫಿಲ್ಮ್ಸ್, ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರ ವಿರುದ್ಧ ಒಂದು ಕೋಟಿ ರೂಪಾಯಿ ಪರಿಹಾರಕ್ಕಾಗಿ ಮೊಕದ್ದಮೆ ಹೂಡಿದೆ. "ನಾನುಂ ರೌಡಿ ದಾನ್" ಚಿತ್ರದ 3 ಸೆಕೆಂಡ್ ವಿಡಿಯೋವನ್ನು ನಯನತಾರಾ ತಮ್ಮ ನೆಟ್‌ಫ್ಲಿಕ್ಸ್ ಡಾಕ್ಯುಮೆಂಟರಿಯಲ್ಲಿ ಅನುಮತಿಯಿಲ್ಲದೆ ಬಳಸಿದ್ದಾರೆ ಎಂದು ಆರೋಪಿಸಲಾಗಿದೆ.

ನಯನತಾರಾಗೆ ದುಬಾರಿ ಆದ 3 ಸೆಕೆಂಡ್ ವಿಡಿಯೋ; ಕೋಟಿ ರೂಪಾಯಿ ಪರಿಹಾರಕ್ಕೆ ಆಗ್ರಹ
ನಯನತಾರಾ

Updated on: Mar 12, 2025 | 12:58 PM

ನಟಿ ನಯನತಾರಾ ಅವರಿಗೆ ಸಂಕಷ್ಟ ಹೆಚ್ಚಿದೆ. ‘ನಾನುಂ ರೌಡಿ ದಾನ್’ ಚಿತ್ರದ ಮೂರು ಸೆಕೆಂಡ್ ವಿಡಿಯೋನ ಒಪ್ಪಿಗೆ ಇಲ್ಲದೆ ಅವರು ಬಳಕೆ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಧನುಷ್ (Dhanush) ಅವರ ನಿರ್ಮಾಣ ಸಂಸ್ಥೆ ‘ವುಂಗಬಾ ಫಿಲ್ಮ್ಸ್’ ನಿರ್ಮಾಣ ಸಂಸ್ಥೆ ಪರಿಹಾರ ಕೋರಿ ಕೇಸ್ ಹಾಕಿದೆ. ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಲಾಗಿದೆ. ಒಪ್ಪಿಗೆ ಇಲ್ಲದೆ ಅವರು ಬಳಕೆ ಮಾಡಿದ ಮೂರು ಸೆಕೆಂಡ್ ವಿಡಿಯೋ ಈಗ ಸಾಕಷ್ಟು ದುಬಾರಿ ಆಗಿದೆ.

ನಯನತಾರಾ ಹಾಗೂ ವಿಘ್ನೇಶ್ ಶಿವನ್ ಇಬ್ಬರ ವಿರುದ್ಧವೂ ಕೇಸ್ ಹಾಕಲಾಗಿದೆ. ‘ನಾನುಂ ರೌಡಿ ದಾನ್ ಚಿತ್ರದ ತೆರೆ ಹಿಂದಿನ ದೃಶ್ಯಗಳನ್ನು ನಯನಾತಾರಾ ಹಾಗೂ ವಿಘ್ನೇಶ್ ಅವರು ನೆಟ್​ಫ್ಲಿಕ್ಸ್ ಡಾಕ್ಯುಮೆಂಟರಿ ‘ನಯನತಾರಾ: ಬಿಯಾಂಡ್ ದಿ ಫೇರ್​ಸ್ಟೈಲ್’ನಲ್ಲಿ ಬಳಕೆ ಮಾಡಿದ್ದಾರೆ. ಇದಕ್ಕೆ ಅವರು ಒಪ್ಪಿಗೆ ಪಡೆದಿಲ್ಲ’ ಎಂದು ಅರ್ಜಿಯಲ್ಲಿ ಬರೆಯಲಾಗಿದೆ.

‘ನಾನುಂ ರೌಡಿ ದಾನ್ ಚಿತ್ರದ ನಿರ್ದೇಶಕ ವಿಘ್ನೇಶ್ ಶಿವನ್ ಅವರು ನಯನತಾರಾ ಮೇಲೆ ಮಾತ್ರ ಗಮನ ಹರಿಸಿದ್ದರು. ಹೀಗಾಗಿ, ಚಿತ್ರದ ಇತರ ಪಾತ್ರವರ್ಗ ಮತ್ತು ಸಿಬ್ಬಂದಿಯನ್ನು ಅವರು ನಿರ್ಲಕ್ಷಿಸಿದರು. ನಯನಾತಾರಾ ಮಾತ್ರ ಒಳ್ಳೆಯ ರೀತಿಯಲ್ಲಿ ನಟಿಸುತ್ತಾರೆ ಎಂದು ಹೇಳುತ್ತಿದ್ದರು. ಅವರ ಗಮನ ಸಂಪೂರ್ಣವಾಗಿ ನಯನಾತಾರಾ ಮೇಲೆ ಇತ್ತೇ ಹೊರತು, ಪ್ರಾಜೆಕ್ಟ್ ಮೇಲೆ ಇರಲಿಲ್ಲ’ ಎಂದು ದೂರಲಾಗಿದೆ.

ಇದನ್ನೂ ಓದಿ
ಸುಮಲತಾ-ದರ್ಶನ್ ಮಧ್ಯೆ ಬಿರುಕು? ಈ ಬೆಳವಣಿಗೆ ನೋಡಿದ್ರೆ ನೀವೂ ಒಪ್ತೀರಿ
ಅಕ್ಕನ ಮಗನನ್ನೇ ‘ಡೆವಿಲ್’ ಚಿತ್ರದಿಂದ ಹೊರಗಿಟ್ಟ ದರ್ಶನ್; ಕಾರಣ ನೀಡಿದ ನಟ
ಚಂದನ್ ಶೆಟ್ಟಿ ಜೊತೆ ಮತ್ತೆ ಬಾಳುತ್ತೀರಾ? ನೇರವಾಗಿ ಉತ್ತರ ನೀಡಿದ ನಿವೇದಿತಾ
ಮತ್ತೆ ಚಂದನ್ ಶೆಟ್ಟಿ ತಬ್ಬಿಕೊಂಡು ಕಣ್ಣೀರು ಹಾಕಿದ ನಿವೇದಿತಾ ಗೌಡ

ಇದನ್ನೂ ಓದಿ: ನಯನತಾರಾ ಕಾಂಪ್ರಮೈಸ್ ಮಾಡಿಕೊಳ್ಳಲಿಲ್ಲ, ತಮನ್ನಾ ಕಾಂಪ್ರಮೈಸ್ ಆದರು, ಹಿಟ್ ಸಿನಿಮಾ ಕೊಟ್ಟರು

ಈ ಡಾಕ್ಯುಮೆಂಟರಿಗೆ ತಡೆ ಹಾಕಬೇಕು ಎಂಬ ಧನುಷ್ ಕೋರಿಕೆಗೆ ಮದ್ರಾಸ್ ಹೈಕೋರ್ಟ್ ಒಪ್ಪಿಲ್ಲ. ಇದಾದ ಬೆನ್ನಲ್ಲೇ ತಂಡದವರು ಈ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮಧ್ಯೆ ಪ್ರೀತಿ ಮೂಡಿದ್ದು ಇದೇ ಸಿನಿಮಾ ಸೆಟ್​ನಲ್ಲಿ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.