ನಯನತಾರಾ ಕಾಂಪ್ರಮೈಸ್ ಮಾಡಿಕೊಳ್ಳಲಿಲ್ಲ, ತಮನ್ನಾ ಕಾಂಪ್ರಮೈಸ್ ಆದರು, ಹಿಟ್ ಸಿನಿಮಾ ಕೊಟ್ಟರು
Nayanthara-Tamannah Bhatia: 2010 ರಲ್ಲಿ ಬಿಡುಗಡೆ ಆಗಿದ್ದ ‘ಪಯ್ಯ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಸಿನಿಮಾದ ನಾಯಕಿ ಆಗಿದ್ದ ತಮನ್ನಾಗೂ ಸಿನಿಮಾದಿಂದ ಭಾರಿ ಪ್ರಶಂಸೆ ವ್ಯಕ್ತವಾಗಿತ್ತು. ಅಂದಹಾಗೆ ‘ಪಯ್ಯ’ ಸಿನಿಮಾಕ್ಕೆ ನಾಯಕಿ ಆಗಿ ಆಯ್ಕೆ ಆಗಿದ್ದಿದ್ದು, ತಮನ್ನಾ ಅಲ್ಲ ಬದಲಿಗೆ ನಯನತಾರಾ. ಆದರೆ ಸಿನಿಮಾದ ನಿರ್ಮಾಪಕರು ಹೇಳಿರುವಂತೆ ನಯನತಾರಾ ಅಡ್ಜಸ್ಟ್ ಮಾಡಿಕೊಳ್ಳಲಿಲ್ಲ, ಹಾಗಾಗಿ ಅವರ ಬದಲಿಗೆ ತಮನ್ನಾರನ್ನು ನಾಯಕಿಯನ್ನಾಗಿ ಹಾಕಿಕೊಳ್ಳಲಾಯ್ತಂತೆ.

ತಮಿಳಿನ ನಟ ಕಾರ್ತಿ ನಟನೆಯ ‘ಪಯ್ಯ’ ಸಿನಿಮಾ 2010 ರಲ್ಲಿ ಬಿಡುಗಡೆ ಆಗಿತ್ತು. ಬೆಂಗಳೂರು ಸೇರಿದಂತೆ ಹಲವು ಕಡೆ ಚಿತ್ರೀಕರಣವಾಗಿದ್ದ ಈ ಸಿನಿಮಾ ಆಗ ಬ್ಲಾಕ್ ಬಸ್ಟರ್ ಆಗಿತ್ತು. ಸಿನಿಮಾದ ಹಾಡುಗಳು, ಕತೆ, ಆಕ್ಷನ್ ಸಖತ್ ಹಿಟ್ ಆಗಿತ್ತು. ನಟ ಕಾರ್ತಿಗೆ ಇದು ಮೂರನೇ ಸಿನಿಮಾ. ಈ ಸಿನಿಮಾ ದೊಡ್ಡ ಗೆಲುವನ್ನು ಅವರಿಗೆ ತಂದುಕೊಟ್ಟಿತ್ತು. ಸಿನಿಮಾದ ನಾಯಕಿ ಆಗಿದ್ದ ತಮನ್ನಾಗೂ ಸಿನಿಮಾದಿಂದ ಭಾರಿ ಪ್ರಶಂಸೆ ವ್ಯಕ್ತವಾಗಿತ್ತು. ಅಂದಹಾಗೆ ‘ಪಯ್ಯ’ ಸಿನಿಮಾಕ್ಕೆ ನಾಯಕಿ ಆಗಿ ಆಯ್ಕೆ ಆಗಿದ್ದಿದ್ದು, ತಮನ್ನಾ ಅಲ್ಲ ಬದಲಿಗೆ ನಯನತಾರಾ. ಆದರೆ ಸಿನಿಮಾದ ನಿರ್ಮಾಪಕರು ಹೇಳಿರುವಂತೆ ನಯನತಾರಾ ಅಡ್ಜಸ್ಟ್ ಮಾಡಿಕೊಳ್ಳಲಿಲ್ಲ, ಹಾಗಾಗಿ ಅವರ ಬದಲಿಗೆ ತಮನ್ನಾರನ್ನು ನಾಯಕಿಯನ್ನಾಗಿ ಹಾಕಿಕೊಳ್ಳಲಾಯ್ತಂತೆ. ಅಂದಹಾಗೆ ‘ಅಡ್ಜಸ್ಟ್’ ಎಂದೆರ ಇಲ್ಲಿ ಕೆಟ್ಟ ಅರ್ಥ ಏನಲ್ಲ.
ನಟಿ ನಯನತಾರಾ ಅನ್ನು ಲೇಡಿ ಸೂಪರ್ ಸ್ಟಾರ್ ಎಂದೇ ಕರೆಯಲಾಗುತ್ತದೆ. ನಯನತಾರಾ ಎಷ್ಟು ಒಳ್ಳೆಯ ನಟಿಯೋ, ಸೆಟ್ನಲ್ಲಿ ಅಷ್ಟೆ ನಿಷ್ಠೂರ ಎಂದು ಸಹ ಹೇಳಲಾಗುತ್ತದೆ. ನಯನತಾರಾ ಬಹಳ ಶಿಸ್ತಿನ ವ್ಯಕ್ತಿ, ಸೆಟ್ನಲ್ಲಿ ಅವರ ಕಂಫರ್ಟ್ ಹಾಳಾಗುವುದನ್ನು ಸಹಿಸುವುದಿಲ್ಲ ಎನ್ನಲಾಗುತ್ತದೆ. ‘ಪಯ್ಯ’ ಸಿನಿಮಾದ ಕತೆಯನ್ನು ನಯನತಾರಾಗೆ ಹೇಳಿದಾಗ ನಯನತಾರಾಗೆ ಕತೆ ಬಹಳ ಇಷ್ಟವಾಯ್ತಂತೆ. ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡರಂತೆ. ಆದರೆ ಈ ಸಿನಿಮಾ ಪ್ರಯಾಣದ ಕತೆ ಹೊಂದಿದ್ದು, ಹೋದಲ್ಲೆಲ್ಲ ಕ್ಯಾರಾವ್ಯಾನ್ ಕೊಡಲು ಆಗುವುದಿಲ್ಲ ಎಂದರಂತೆ ನಿರ್ಮಾಪಕ. ಇದು ನಯನತಾರಾಗೆ ಇಷ್ಟವಾಗದೆ ಸಿನಿಮಾ ಅನ್ನೇ ಕೈಬಿಟ್ಟರಂತೆ ನಟಿ.
ಆದರೆ ತಮನ್ನಾ, ಸಿನಿಮಾ ಅನ್ನು ಒಪ್ಪಿಕೊಂಡರಂತೆ. ಕ್ಯಾರವ್ಯಾನ್ ಇಲ್ಲದೆ ಸಾಕಷ್ಟು ಕಷ್ಟಪಟ್ಟರೂ ಸಹ ಸಿನಿಮಾ ಅನ್ನು ಮುಗಿಸಿಕೊಟ್ಟರಂತೆ. ಎಷ್ಟೋ ಬಾರಿ ಕಾರಿನಲ್ಲಿ ಕೂತುಕೊಂಡೆ ಬಟ್ಟೆಗಳನ್ನು ಬದಲಾಯಿಸುತ್ತಿದ್ದರಂತೆ ತಮನ್ನಾ. ಅಸಿಸ್ಟೆಂಟ್ಗಳು ಕಾರಿನ ಸುತ್ತ ಸೀರೆ ಹಿಡಿದು ನಿಲ್ಲುತ್ತಿದ್ದರಂತೆ. ತಮನ್ನಾ, ಕಾರಿನ ಒಳಗೆ ಬಟ್ಟೆ ಬದಲಾಯಿಸಿ, ಅಲ್ಲೇ ಮೇಕಪ್ ಮಾಡಿಕೊಂಡು ಶೂಟಿಂಗ್ಗೆ ರೆಡಿ ಆಗುತ್ತಿದ್ದರಂತೆ. ತಮನ್ನಾ ಮಾತ್ರವೇ ಅಲ್ಲದೆ ಎಲ್ಲರಿಗೂ ಸಹ ‘ಪಯ್ಯ’ ಸಿನಿಮಾದ ಶೂಟಿಂಗ್ ಬಹಳ ಕಷ್ಟವಾಗಿತ್ತಂತೆ. ಕಷ್ಟದಲ್ಲೇ ಮಾಡಿದರೂ ಸಹ ಸಿನಿಮಾದ ಔಟ್ಪುಟ್ ಬಹಳ ಚೆನ್ನಾಗಿ ಬಂದು ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು.
ಇದನ್ನೂ ಓದಿ:ಬ್ರೇಕಪ್ ಆದರೂ ಚಿಂತೆ ಇಲ್ಲದೇ ಮಿಂಚುತ್ತಿರುವ ತಮನ್ನಾ ಭಾಟಿಯಾ
‘ಪಯ್ಯ’ ಸಿನಿಮಾ ಮಾಡಿದಾಗ ತಮನ್ನಾಗೆ ಇನ್ನೂ 19 ವರ್ಷ ವಯಸ್ಸಂತೆ. ಚಿಕ್ಕ ವಯಸ್ಸಲ್ಲೂ ಸಹ ತಮನ್ನಾಗೆ ಇದ್ದ ಹಠ, ಅವರು ಪಡುತ್ತಿದ್ದ ಪರಿಶ್ರಮವನ್ನು ನಿರ್ಮಾಪಕರು ಕೊಂಡಾಡಿದ್ದಾರೆ. ಅದರಿಂದಲೇ ತಮನ್ನಾ ಆ ನಂತರ ದೊಡ್ಡ ನಟಿಯಾಗಿ ಬೆಳೆದರು ಎಂದಿದ್ದಾರೆ ಸಿನಿಮಾದ ನಿರ್ಮಾಪಕ ಮತ್ತು ನಿರ್ದೇಶಕ ಲಿಂಗುಸ್ವಾಮಿ. ತಮನ್ನಾ ಇದೀಗ ‘ಒದೆಲಾ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಫ್ಯಾಷನ್ ಐಕಾನ್ ಆಗಿಯೂ ಗುರುತಿಸಿಕೊಂಡಿರುವ ತಮನ್ನಾ ಹಲವು ಜಾಹೀರಾತುಗಳಲ್ಲಿ, ಫ್ಯಾಷನ್ ಶೋಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ