ದಕ್ಷಿಣಕ್ಕೆ ಕಾಲಿಟ್ಟ ಬಾಲಿವುಡ್​​ನ ದೊಡ್ಡ ನಿರ್ಮಾಣ ಸಂಸ್ಥೆ

South Indian movie Industry: ಕರಣ್ ಜೋಹರ್ ಅವರ ತಂದೆ ಸ್ಥಾಪಿಸಿದ್ದ ಧರ್ಮಾ ಪ್ರೊಡಕ್ಷನ್ಸ್ ಬಾಲಿವುಡ್​ನ ಬಲು ದೊಡ್ಡ ನಿರ್ಮಾಣ ಸಂಸ್ಥೆ, ನೂರಾರು ಹಿಂದಿ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಈ ನಿರ್ಮಾಣ ಸಂಸ್ಥೆ ಇದೇ ಮೊದಲ ಬಾರಿಗೆ ದಕ್ಷಿಣದ ಸಿನಿಮಾ ಮೇಲೆ ನೇರವಾಗಿ ಬಂಡವಾಳ ತೊಡಗಿಸಿದೆ. ಕಳೆದ ಕೆಲ ವರ್ಷಗಳಿಂದ ದಕ್ಷಿಣದ ಸಿನಿಮಾಗಳನ್ನು ಉತ್ತರ ಭಾರತದಲ್ಲಿ ವಿತರಣೆ ಮಾತ್ರ ಮಾಡುತ್ತಿದ್ದ ಧರ್ಮಾ, ಈಗ ನೇರವಾಗಿ ಚಿತ್ರ ನಿರ್ಮಾಣಕ್ಕೆ ಇಳಿದಿದೆ.

ದಕ್ಷಿಣಕ್ಕೆ ಕಾಲಿಟ್ಟ ಬಾಲಿವುಡ್​​ನ ದೊಡ್ಡ ನಿರ್ಮಾಣ ಸಂಸ್ಥೆ
Dharma Productions

Updated on: Jun 16, 2026 | 6:29 PM

ದಶಕಗಳಿಂದಲೂ ಹಿಂದಿ ಸಿನಿಮಾ (Cinema) ನಿರ್ಮಾಣದಲ್ಲಿ ತೊಡಗಿಕೊಂಡಿರುವ ದೊಡ್ಡ ನಿರ್ಮಾಣ ಸಂಸ್ಥೆ ಇದೇ ಮೊದಲ ಬಾರಿಗೆ ದಕ್ಷಿಣದ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ. ಕರಣ್ ಜೋಹರ್ ಅವರ ತಂದೆ ಸ್ಥಾಪಿಸಿದ್ದ ಧರ್ಮಾ ಪ್ರೊಡಕ್ಷನ್ಸ್ ಬಾಲಿವುಡ್​ನ ಬಲು ದೊಡ್ಡ ನಿರ್ಮಾಣ ಸಂಸ್ಥೆ, ನೂರಾರು ಹಿಂದಿ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಈ ನಿರ್ಮಾಣ ಸಂಸ್ಥೆ ಇದೇ ಮೊದಲ ಬಾರಿಗೆ ದಕ್ಷಿಣದ ಸಿನಿಮಾ ಮೇಲೆ ನೇರವಾಗಿ ಬಂಡವಾಳ ತೊಡಗಿಸಿದೆ. ಕಳೆದ ಕೆಲ ವರ್ಷಗಳಿಂದ ದಕ್ಷಿಣದ ಸಿನಿಮಾಗಳನ್ನು ಉತ್ತರ ಭಾರತದಲ್ಲಿ ವಿತರಣೆ ಮಾತ್ರ ಮಾಡುತ್ತಿದ್ದ ಧರ್ಮಾ, ಈಗ ನೇರವಾಗಿ ಚಿತ್ರ ನಿರ್ಮಾಣಕ್ಕೆ ಇಳಿದಿದೆ.

ಧರ್ಮ ಪ್ರೊಡಕ್ಷನ್ಸ್ ಇದೀಗ ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದೆ. ಪೃಥ್ವಿರಾಜ್ ಸುಕುಮಾರನ್ ಮತ್ತು ಮಂಜು ವಾರಿಯರ್ ನಟಿಸುತ್ತಿರುವ ‘ಒಡಿಯನ್ – ದಿ ಏಜ್ ಆಫ್ ಇಲ್ಯೂಷನ್’ ಹೆಸರಿನ ಹಾರರ್ ಸಿನಿಮಾಕ್ಕೆ ಧರ್ಮಾ ಪ್ರೊಡಕ್ಷನ್ ಬಂಡವಾಳ ಹೂಡುತ್ತಿದೆ. 19ನೇ ಶತಮಾನದ ಜನಪದ ಹಾರರ್ ಥ್ರಿಲ್ಲರ್ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಬಾಲಿವುಡ್‌ನ ಅತ್ಯಂತ ಪ್ರಭಾವಶಾಲಿ ಬ್ಯಾನರ್‌ಗಳಲ್ಲಿ ಒಂದಾದ ಧರ್ಮ ಪ್ರೊಡಕ್ಷನ್ಸ್ ಮತ್ತು ಮಲಯಾಳಂ ಚಿತ್ರರಂಗದ ಸ್ಟಾರ್ ನಟ ಪೃಥ್ವಿರಾಜ್ ಪ್ರೊಡಕ್ಷನ್ಸ್ ನಡುವಿನ ಈ ಸಹಯೋಗ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

‘ಭೂತಕಾಲಂ’ ಮತ್ತು ‘ಬ್ರಮಯುಗಂ’ನಂತಹ ಸೂಪರ್ ಹಿಟ್ ಮತ್ತು ವಿಮರ್ಶಕರಿಂದಲೂ ಸಾಕಷ್ಟು ಮೆಚ್ಚುಗೆ ಪಡೆದ ಹಾರರ್ ಚಿತ್ರಗಳನ್ನು ನಿರ್ದೇಶಿಸಿರುವ ರಾಹುಲ್ ಸದಾಶಿವನ್ ‘ಒಡಿಯನ್’ ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಚಿತ್ರದ ಪೋಸ್ಟರ್ ಬಹಳ ನಿಗೂಢವಾಗಿದ್ದು, ಪುರಾತನ ಕನ್ನಡಿಯೊಂದರ ಒಳಗೆ ಅಸ್ಥಿಪಂಜರದಂತಹ ಆಕೃತಿ ಕಾಣುವ ದೃಶ್ಯ ಪೋಸ್ಟರ್​​ನಲ್ಲಿದೆ. ಈ ಚಿತ್ರವು ಮಾಟ-ಮಂತ್ರ, ರೂಪ ಬದಲಿಸುವ ಶಕ್ತಿ ಮತ್ತು ಪ್ರಾಚೀನ ಜಾನಪದ ಕಥೆಗಳನ್ನು ಆಧರಿಸಿದೆ.

ಇದನ್ನೂ ಓದಿ:ಚಿತ್ರರಂಗಕ್ಕೆ ಮರಳುತ್ತಿದ್ದಾರೆ ಬಾಲಿವುಡ್ ಸ್ಟಾರ್ ನಟಿ ಕತ್ರಿನಾ ಕೈಫ್

ಕೇರಳದ ಸುಪ್ರಸಿದ್ಧ ‘ಒಡಿಯನ್’ ಜನಪದ ಕಥೆಗಳನ್ನು ಆಧರಿಸಿದ ಈ ಚಿತ್ರವು, ಕತ್ತಲಲ್ಲಿ ಪ್ರಾಣಿಗಳಾಗಿ ರೂಪಾಂತರಗೊಳ್ಳುವ ಮತ್ತು ಮಾಟ-ಮಂತ್ರಗಳನ್ನು ಬಲ್ಲವರೆಂದು ನಂಬಲಾದ ಭಯಾನಕ ವ್ಯಕ್ತಿಗಳ ಕಥೆಯನ್ನು ಹೇಳಲಿದೆ. ತನ್ನ ವಿಶಿಷ್ಟ ಶೈಲಿಯ ನಿರೂಪಣೆಗೆ ಹೆಸರಾದ ರಾಹುಲ್ ಸದಾಶಿವನ್, ಈ ದಂತಕಥೆಯನ್ನು ಹಾರರ್ ಮೂಲಕ ಮತ್ತಷ್ಟು ರೋಚಕವಾಗಿ ತೆರೆಮೇಲೆ ತರಲು ಸಿದ್ಧರಾಗಿದ್ದಾರೆ.

ಕರಣ್ ಜೋಹರ್, ಅದಾರ್ ಪೂನಾವಾಲಾ, ಅಪೂರ್ವ ಮೆಹ್ತಾ ಮತ್ತು ಸುಪ್ರಿಯಾ ಮೆನನ್ ಅವರುಗಳು ಧರ್ಮಾ ಪ್ರೊಡಕ್ಷನ್ಸ್ ಮೂಲಕ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಭಾರಿ ಬಜೆಟ್​​ನಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದ್ದು, ಈ ಚಿತ್ರವು ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us