
ಧರ್ಮೇಂದ್ರ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರು ಈಗ ಚೇತರಿಸಿಕೊಳ್ಳುತ್ತಿದ್ದು, ಮನೆಗೆ ತೆಗೆದುಕೊಂಡು ಹೋಗಲಾಗಿದೆ ಎಂದು ಹೇಳಲಾಗುತ್ತಾ ಇದೆ. ಈ ವಿಷಯ ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಸಂದರ್ಭದಲ್ಲಿ ಅವರ ವೈಯಕ್ತಿಕ ಜೀವನದ ಬಗ್ಗೆ ನೋಡೋಣ. ಧರ್ಮೇಂದ್ರ ಅವರ ಎರಡನೇ ಪತ್ನಿ ಹೇಮಾ ಮಾಲಿನಿ. ಇವರದ್ದು ಪ್ರೇಮ ವಿವಾಹ. ಅಸಲಿಗೆ ಹೇಮಾ ಹಾಗೂ ಜೀತೇಂದ್ರ ಇಬ್ಬರೂ ವಿವಾಹ ಆಗಬೇಕಿತ್ತು. ಆದರೆ, ಹೇಮಾ ಅವರು ಧರ್ಮೆಂದ್ರ ಜೊತೆ ಪ್ರಿತಿಯಲ್ಲಿ ಬಿದ್ದರು. ಅವರನ್ನೇ ವರಿಸಿದರು. ಇವರ ಲವ್ ಸ್ಟೋರಿ ಗಮನ ಸೆಳೆಯೋ ರೀತಿಯಲ್ಲಿ ಇದೆ.
ಹೇಮಾ ಹಾಗೂ ಧರ್ಮೇಂದ್ರ ಪ್ರೀತಿಯಲ್ಲಿರೋ ಸುದ್ದಿ ಸಾಕಷ್ಟು ಚರ್ಚೆ ಆಗಿತ್ತು. ಆದರೆ, ಹೇಮಾ ಪಾಲಕರಾದ ಜಯಾ ಚಕ್ರವರ್ತಿ ಹಾಗೂ ರಾಮಾಜುನಮ್ ಚಕ್ರವರ್ತಿ ಅವರು ಇದನ್ನು ವಿರೋಧಿಸಿದ್ದರು. ಏಕೆಂದರೆ ಧರ್ಮೇಂದ್ರ ಅವರಿಗೆ ಆಗಲೇ ಒಂದು ಮದುವೆ ಆಗಿತ್ತು. ಈ ಕಾರಣದಿಂದ ಈ ಮದುವೆ ಬೇಡ ಎಂಬುದು ಹೇಮಾ ಪಾಲಕರ ಆಸೆ ಆಗಿತ್ತು.
ಹೇಮಾ ಭವಿಷ್ಯದ ಬಗ್ಗೆ ಜಯಾ ಅವರು ಚಿಂತೆಗೆ ಒಳಗಾಗಿದ್ದರು. 1974ರಲ್ಲಿ ಹೇಮಾ ಮಾಲಿನಿ ಕುಟುಂಬದವರು ಜಿತೇಂದ್ರ ಅವರನ್ನು ಭೇಟಿ ಮಾಡುವ ಒತ್ತಾಯ ಮಾಡಿದ್ದರು. ಆದರೆ, ಜಿತೇಂದ್ರ ಅವರಿಗೆ ಮದುವೆ ಆಗುವ ಯಾವುದೇ ಆಲೋಚನೆ ಇರಲಿಲ್ಲ. ಇದನ್ನು ಕುಟುಂಬದ ಬಳಿ ಜಿತೇಂದ್ರ ಹೇಳಿದರೂ ಇವರು ಯಾರೂ ಇದನ್ನು ಕೇಳಲೇ ಇಲ್ಲ.
ಇದನ್ನೂ ಓದಿ: ನಟ ಧರ್ಮೇಂದ್ರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಮಗ ಸನ್ನಿ ಡಿಯೋಲ್
ಮದುವೆ ಮಾತುಕತೆಗೆ ಹೇಮಾ ಕುಟುಂಬ ಚೆನ್ನೈಗೆ ತೆರಳಿತ್ತು. ಸುದ್ದಿ ಸಾರ್ವಜನಿಕವಾಗಿ ಲೀಕ್ ಆಯಿತು. ಮದುವೆ ವಿಚಾರ ತಿಳಿದು ಧರ್ಮೇಂದ್ರ ಕೂಡ ತೆರಳಿದರು ಎನ್ನಲಾಗಿದೆ. ಹೇಮಾ ತಂದೆ ಅವರು ಧರ್ಮೇಂದ್ರ ಬಳಿ ಮಾತನಾಡಿದ್ದರು. ‘ನನ್ನ ಮಗಳನ್ನು ಯಾಕೆ ಬಿಡಬಾರದು? ನೀವು ವಿವಾಹಿತ ವ್ಯಕ್ತಿ; ನೀವು ಅವಳನ್ನು ಮದುವೆಯಾಗಲು ಸಾಧ್ಯವಿಲ್ಲ’ ಎಂದಿದ್ದರು. ಆದರೆ, ಧರ್ಮೇಂದ್ರ ಒಪ್ಪಲಿಲ್ಲ. ಆ ಬಳಿಕ ಜಿತೇಂದ್ರ ಕುಮಾರ್ ಕುಟುಂಬ ಅಲ್ಲಿಂದ ನಡೆಯಿತು. ಅಂದು ಇವರ ಮದುವೆ ನಡೆಯಲಿಲ್ಲ. ಇವರು 1980ರಂದು ಮದುವೆ ಆದರು. 45 ವರ್ಷಗಳ ಕಾಲ ಇವರು ಹಾಯಾಗಿ ಸಂಸಾರ ನಡೆಸಿದ್ದಾರೆ. ಈಗ ಧರ್ಮೇಂದ್ರ ಅವರು ಚೇತರಿಸಿಕೊಳ್ಳುತ್ತಿರುವುದು ಖುಷಿಯ ವಿಚಾರ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.