ಮುದ್ದಾಡಿದ ಮೇಕೆಯೇ ಮಧ್ಯಾಹ್ನ ಬಿರಿಯಾನಿ; ಸತ್ಯ ತಿಳಿದು ವಾಂತಿ ಮಾಡಿಕೊಂಡ ನಟಿ ಅನುಪಮಾ

'ಬೈಸನ್ ಕಾಳಮಾಡನ್' ಸಿನಿಮಾದ ಶೂಟಿಂಗ್ ಸೆಟ್‌ನಲ್ಲಿ ನಟಿ ಅನುಪಮಾ ಪರಮೇಶ್ವರನ್ ತಾನು ಆಟವಾಡಿದ್ದ ಮೇಕೆಯನ್ನೇ ಊಟಕ್ಕೆ ತಿಂದಿದ್ದ ತಮಾಷೆಯ ಹಾಗೂ ಶಾಕಿಂಗ್ ಘಟನೆಯನ್ನು ನಟ ಧ್ರುವ ವಿಕ್ರಮ್ ಬಿಚ್ಚಿಟ್ಟಿದ್ದಾರೆ. ಈ ಘಟನೆಯ ನಂತರ ತಾನು ಮಟನ್ ತಿನ್ನುವುದನ್ನೇ ಬಿಟ್ಟಿರುವುದಾಗಿ ನಟಿ ಅನುಪಮಾ ಶೋನಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಮುದ್ದಾಡಿದ ಮೇಕೆಯೇ ಮಧ್ಯಾಹ್ನ ಬಿರಿಯಾನಿ; ಸತ್ಯ ತಿಳಿದು ವಾಂತಿ ಮಾಡಿಕೊಂಡ ನಟಿ ಅನುಪಮಾ
ಅನುಪಮಾ

Updated on: Aug 14, 2026 | 9:50 AM

ಮುಖ್ಯಾಂಶಗಳು

  • ‘ಬೈಸನ್’ ಸೆಟ್‌ನಲ್ಲಿ ನಡೆದ ಶಾಕಿಂಗ್ ಘಟನೆ ಬಿಚ್ಚಿಟ್ಟ ಧ್ರುವ ವಿಕ್ರಮ್
  • ನಟಿ ಅನುಪಮಾ ಪರಮೇಶ್ವರನ್ ನಿಜಕ್ಕೂ ಶಾಕ್
  • ತಾನು ಮುದ್ದಾಡಿದ ಮೇಕೆಯನ್ನೇ ಬಿರಿಯಾನಿ ಮಾಡಿ ತಿಂದರು

ತಮಿಳಿನ ಬಹುನಿರೀಕ್ಷಿತ ‘ಬೈಸನ್ ಕಾಳಮಾಡನ್’ ಸಿನಿಮಾದಲ್ಲಿ ನಟ ಧ್ರುವ ವಿಕ್ರಮ್ ಹಾಗೂ ನಟಿ ಅನುಪಮಾ ಪರಮೇಶ್ವರನ್ ಜೋಡಿಯಾಗಿ ನಟಿಸಿದ್ದರು. ಈ ಸಿನಿಮಾ 2025ರಲ್ಲಿ ರಿಲೀಸ್ ಆಯಿತು. ಆ ಸಮಯದಲ್ಲಿ ನಡೆದ ಚಾಟ್ ಶೋ ಒಂದರಲ್ಲಿ ಪಾಲ್ಗೊಂಡಿದ್ದ ಈ ಜೋಡಿ, ಶೂಟಿಂಗ್ ಸೆಟ್‌ನಲ್ಲಿ ನಡೆದಿದ್ದ ಅತ್ಯಂತ ತಮಾಷೆಯ ಹಾಗೂ ಆಘಾತಕಾರಿ ಘಟನೆಯೊಂದನ್ನು ನೆನಪಿಸಿಕೊಂಡಿತ್ತು. ಆ ವಿಡಿಯೋ ಈಗ ಮತ್ತೆ ವೈರಲ್ ಆಗಿದೆ.

ಸೆಟ್‌ನಲ್ಲಿ ನಡೆದಿದ್ದೇನು?

ಸಂದರ್ಶನದಲ್ಲಿ ಮಾತನಾಡಿದ ಧ್ರುವ ವಿಕ್ರಮ್, ‘ನಟಿ ಅನುಪಮಾ ಸೆಟ್‌ನಲ್ಲಿ ಮೇಕೆ ಮರಿಯೊಂದರ ಜೊತೆ ಆಟವಾಡುತ್ತಿದ್ದರು. ಆದರೆ ಅದೇ ದಿನ ಸಂಜೆ ಅವರು ಅದೇ ಮೇಕೆಯ ಮಾಂಸವನ್ನು ತಿಂದರು’ ಎಂದು ತಮಾಷೆಯಾಗಿ ಕಾಲೆಳೆದರು.

ಇದಕ್ಕೆ ಸ್ಪಷ್ಟನೆ ನೀಡಿದ ನಟಿ ಅನುಪಮಾ ಪರಮೇಶ್ವರನ್, ‘ಶೂಟಿಂಗ್ ಸೆಟ್‌ನಲ್ಲಿ ಮೇಕೆ ಮರಿಗಳಿದ್ದವು, ನಾನು ಅವುಗಳ ಜೊತೆ ಆಟವಾಡುತ್ತಿದ್ದೆ. ಮಧ್ಯಾಹ್ನದ ಊಟಕ್ಕೆ ನನಗೆ ಮಟನ್ ಬಿರಿಯಾನಿ ನೀಡಲಾಗಿತ್ತು. ಎರಡು ತುತ್ತು ತಿಂದ ನಂತರ ನನ್ನ ಅಸಿಸ್ಟೆಂಟ್ ಬಂದು ‘ಮ್ಯಾಮ್, ನೀವು ಬೆಳಿಗ್ಗೆ ಆಟವಾಡುತ್ತಿದ್ದರಲ್ಲ ಅದೇ ಮೇಕೆ ಬಿರಿಯಾನಿ ಇದು ಎಂದು ನಗುತ್ತಾ ಹೇಳಿದರು’ಎಂದು ಘಟನೆಯನ್ನು ವಿವರಿಸಿದರು.

ಅಂದಿನಿಂದ ಮಟನ್ ತಿಂದಿಲ್ಲ!

ಅಸಿಸ್ಟೆಂಟ್ ಹೇಳಿದ ಮಾತಿನಿಂದ ದಿಗ್ಭ್ರಮೆಗೊಂಡ ಅನುಪಮಾ, ತಕ್ಷಣವೇ ವಾಂತಿ ಮಾಡಿಕೊಂಡರಂತೆ. ‘ಆ ಘಟನೆ ನನಗೆ ತುಂಬಾ ಆಘಾತ ನೀಡಿತು. ಆ ಘಟನೆಯ ನಂತರ ನಾನು ಇದುವರೆಗೂ ಮತ್ತೆ ಎಂದಿಗೂ ಮಟನ್ ಮುಟ್ಟಿಲ್ಲ’ ಎಂದು ಅನುಪಮಾ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ‘ನನ್ನ ಸೋಶಿಯಲ್ ಮೀಡಿಯಾ, ನಾನು ಏನು ಬೇಕಾದ್ರೂ ಪೋಸ್ಟ್ ಮಾಡ್ತೀನಿ’; ಅನುಪಮಾ ಪರಮೇಶ್ವರನ್

ಅನುಪಮಾ ಪರಮೇಶ್ವರನ್ ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಅವರು ಬ್ರೇಕಪ್ ಬಗ್ಗೆ ಹಾಗೂ ಟಾಕ್ಸಿಕ್ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಈ ಮೊದಲು ಧ್ರುವ್ ಜೊತೆ ಅವರು ರಿಲೇಶನ್​ಶಿಪ್​ನಲ್ಲಿ ಇದ್ದರು ಎಂದು ಕೂಡ ಹೇಳಲಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us