AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ ಚಿತ್ರದಲ್ಲಿ ಒಂದಲ್ಲ, ಎರಡಲ್ಲ ಹತ್ತು ಹಾಡುಗಳು; ಅಚ್ಚರಿಯ ವಿಷಯ ರಿವೀಲ್

ಯಾವುದೇ ಸಿನಿಮಾ ಹಿಟ್ ಆಗಲು ಹಾಡುಗಳು ಪ್ರಮುಖ ಪಾತ್ರ ವಹಿಸುತ್ತವೆ. ಇದೀಗ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದಲ್ಲಿ ಬರೋಬ್ಬರಿ ಹತ್ತು ಹಾಡುಗಳಿರಲಿವೆ ಎಂಬ ಮಾಹಿತಿ ವೈರಲ್ ಆಗಿದೆ. ಸುಮಾರು ನಲವತ್ತು ನಿಮಿಷಗಳ ಕಾಲ ಸಂಗೀತವೇ ಇರಲಿದ್ದು, ಈ ಸುದ್ದಿ ಕೆಜಿಎಫ್ ಅಭಿಮಾನಿಗಳಲ್ಲಿ ಸಿನಿಮಾ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

‘ಟಾಕ್ಸಿಕ್’ ಚಿತ್ರದಲ್ಲಿ ಒಂದಲ್ಲ, ಎರಡಲ್ಲ ಹತ್ತು ಹಾಡುಗಳು; ಅಚ್ಚರಿಯ ವಿಷಯ ರಿವೀಲ್
ಟಾಕ್ಸಿಕ್
ರಾಜೇಶ್ ದುಗ್ಗುಮನೆ
|

Updated on: Aug 14, 2026 | 7:13 AM

Share

ಮುಖ್ಯಾಂಶಗಳು

  • ‘ಟಾಕ್ಸಿಕ್’ ಚಿತ್ರದಲ್ಲಿ 10 ಹಾಡುಗಳು
  • ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್
  • 'ಕೆಜಿಎಫ್ 2' ನಂತರ ಯಶ್ ಆಕ್ಷನ್ ಅವತಾರ

ಯಾವುದೇ ಸಿನಿಮಾ ಹಿಟ್ ಆಗಬೇಕು ಎಂದರೆ ಹಾಡುಗಳು ತುಂಬಾನೇ ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ. ಸಾಂಗ್ ಹಿಟ್ ಆದರೆ ಸಿನಿಮಾ ಕೂಡ ಅರ್ಧ ಹಿಟ್ ಆದಂತೆ. ಇತ್ತೀಚೆಗೆ ರಿಲೀಸ್ ಆದ ‘ಧುರಂಧರ್’ ಹಾಗೂ ‘ಧುರಂಧರ್ 2’ ಸಿನಿಮಾಗಳು ಯಶಸ್ಸು ಕಾಣಲು ಸಿನಿಮಾದ ಹಾಡುಗಳು ಕೂಡ ಪ್ರಮುಖ ಕಾರಣ ಆಗಿದ್ದವು. ಈಗ ‘ಟಾಕ್ಸಿಕ್’ ಸಿನಿಮಾದ (Toxic Movie) ಎರಡು ಹಾಡು ರಿಲೀಸ್ ಆಗಿದ್ದು ಮೆಚ್ಚುಗೆ ಪಡೆದಿದೆ. ಹೀಗಿರುವಾಗಲೇ ಈ ಚಿತ್ರದಲ್ಲಿರುವ ಹಾಡುಗಳ ಸಂಖ್ಯೆ ಗಮನ ಸೆಳೆದಿದೆ.

‘ಟಾಕ್ಸಿಕ್’ ಸಿನಿಮಾದಲ್ಲಿ ಬರೋಬ್ಬರಿ 10 ಹಾಡುಗಳು ಇರಲಿವೆಯಂತೆ. ಸೋಶಿಯಲ್ ಮೀಡಿಯಾದಲ್ಲಿ ಇದಕ್ಕೆ ಸಂಬಂಧಿಸಿದಂತೆ ಫೋಟೋ ಒಂದು ವೈರಲ್ ಆಗಿದೆ. ಈ ಫೋಟೋ ಗಮನ ಸೆಳೆದಿದೆ.ಫ್ಯಾನ್ಸ್ ಇದಕ್ಕೆ ವಿವಿಧ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಸಿನಿಮಾ ರಿಲೀಸ್​ಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ಸಂದರ್ಭದಲ್ಲಿ ಮತ್ತಷ್ಟು ಹಾಡುಗಳನ್ನು ತಂಡ ಬಿಡುಗಡೆ ಮಾಡಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.

ಸಿನಿಮಾದ ಅವಧಿ ಮೂರು ಗಂಟೆ ಹದಿನಾಲ್ಕು ನಿಮಿಷ ಇದೆ ಎನ್ನಲಾಗಿದೆ. ಇದರಲ್ಲಿ ಸುಮಾರು 40 ನಿಮಿಷಗಳ ಹಾಡು ಇರಲಿದೆ ಎಂದು ಹೇಳಲಾಗುತ್ತಾ ಇದೆ. ಕೆಲವು ಹಾಡುಗಳು ಬ್ಯಾಕ್​ಗ್ರೌಂಡ್​ನಲ್ಲಿ ಬರುವ ನಿರೀಕ್ಷೆಯೂ ಇದೆ. ಸಿನಿಮಾ ನೋಡಿದ ಬಳಿಕ ಇದು ಸ್ಪಷ್ಟವಾಗಲಿದೆ.

ಇದನ್ನೂ ಓದಿ: ಬೆಂಗಳೂರು ಮೆಟ್ರೋದಲ್ಲಿ ರಾರಾಜಿಸುತ್ತಿದೆ ಟಾಕ್ಸಿಕ್ ಪೋಸ್ಟರ್; ಯಶ್ ಅಭಿಮಾನಿಗಳಿಗೆ ಹಬ್ಬ

‘ಕೆಜಿಎಫ್ 2’ ಯಶಸ್ಸಿನ ನಂತರ ಯಶ್ ಅವರ 19ನೇ ಸಿನಿಮಾವಾಗಿ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್’ ಮೂಡಿಬರುತ್ತಿದೆ. ಈ ಚಿತ್ರವನ್ನು ಗೀತು ಮೋಹನ್‌ದಾಸ್ ಅವರು ನಿರ್ದೇಶಿಸುತ್ತಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್‌ಸ್ಟರ್ ಮೈಂಡ್ಸ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸುತ್ತಿವೆ. ಡಾರ್ಕ್ ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾಗೆ ವಿಶಾಲ್ ಮಿಶ್ರಾ ಮೊದಲಾದವರು ಸಂಗೀತ ನೀಡಿದ್ದಾರೆ. ರವಿ ಬಸ್ರೂರು ಅವರು ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಯಶ್ ಅವರ ಜೊತೆಗೆ ನಯನತಾರಾ, ತಾರಾ ಸುತಾರಿಯಾ, ಕಿಯಾರಾ ಅಡ್ವಾಣಿ ಸೇರಿದಂತೆ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ. ಈ ಚಿತ್ರ ಆಗಸ್ಟ್ 26ರಂದು ತೆರೆಗೆ ಬರಲಿದೆ.

ಪ್ರಶ್ನೆ: ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಅವರ ಪಾತ್ರದ ಹೆಸರೇನು? ಉತ್ತರ: ರಾಯ ಹಾಗೂ ಟಿಕೆಟ್

ಪ್ರಶ್ನೆ: ಟಾಕ್ಸಿಕ್ ರಿಲೀಸ್ ದಿನಾಂಕ ಏನು? ಉತ್ತರ: ಆಗಸ್ಟ್ 26

ಪ್ರಶ್ನೆ: ಟಾಕ್ಸಿಕ್ ಚಿತ್ರದ ನಿರ್ದೇಶಕರು ಯಾರು? ಉತ್ತರ: ಗೀತು ಮೋಹನ್​ ದಾಸ್

Follow Us