ಬಿಡುಗಡೆ ಆಯ್ತು ‘ಕೆಡಿ’ಯ ಸೆರಗಿನ ಹಾಡು, ಹಾಟ್ ಅವತಾರದಲ್ಲಿ ನೋರಾ

KD Movie song: ಧ್ರುವ ಸರ್ಜಾ ನಟಿಸಿರುವ ‘ಕೆಡಿ’ ಸಿನಿಮಾದ ಹೊಸ ಹಾಡೊಂದು ಇಂದು ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಪ್ರೇಮ್ ನಿರ್ದೇಶನದ ಸಿನಿಮಾ ಎಂದರೆ ಹಾಡುಗಳು ಪಕ್ಕಾ ಸೂಪರ್ ಹಿಟ್ ಎಂಬುದರಲ್ಲಿ ಅನುಮಾನವೇ ಇಲ್ಲ. ಈಗಾಗಲೇ ‘ಕೆಡಿ’ ಸಿನಿಮಾದ ಹಾಡೊಂದು ಬಿಡುಗಡೆ ಆಗಿದ್ದು, ಹಿಟ್ ಎನಿಸಿಕೊಂಡಿದೆ. ಇಂದು (ಮಾರ್ಚ್ 14) ‘ಕೆಡಿ’ಯ ಹೊಸ ಹಾಡು ಬಿಡುಗಡೆ ಆಗಿದೆ.

ಬಿಡುಗಡೆ ಆಯ್ತು ‘ಕೆಡಿ’ಯ ಸೆರಗಿನ ಹಾಡು, ಹಾಟ್ ಅವತಾರದಲ್ಲಿ ನೋರಾ
Nora Fatehi

Updated on: Mar 14, 2026 | 8:26 PM

ಪ್ರೇಮ್ ನಿರ್ದೇಶಿಸಿ, ಧ್ರುವ ಸರ್ಜಾ (Dhruva Sarja) ನಟಿಸಿರುವ ‘ಕೆಡಿ’ ಸಿನಿಮಾದ ಹೊಸ ಹಾಡೊಂದು ಇಂದು ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಪ್ರೇಮ್ ನಿರ್ದೇಶನದ ಸಿನಿಮಾ ಎಂದರೆ ಹಾಡುಗಳು ಪಕ್ಕಾ ಸೂಪರ್ ಹಿಟ್ ಎಂಬುದರಲ್ಲಿ ಅನುಮಾನವೇ ಇಲ್ಲ. ಈಗಾಗಲೇ ‘ಕೆಡಿ’ ಸಿನಿಮಾದ ಹಾಡೊಂದು ಬಿಡುಗಡೆ ಆಗಿದ್ದು, ಹಿಟ್ ಎನಿಸಿಕೊಂಡಿದೆ. ಇಂದು (ಮಾರ್ಚ್ 14) ‘ಕೆಡಿ’ಯ ಹೊಸ ಹಾಡು ಬಿಡುಗಡೆ ಆಗಿದೆ.

‘ಸೆರಗ ಸರ್ಸೆ’ ಎಂಬ ಈ ಹಾಡಿನ ಪ್ರೋಮೊ ಕೆಲ ದಿನಗಳ ಹಿಂದೆ ಪ್ರೇಮ್ ಹಂಚಿಕೊಂಡಿದ್ದರು. 26 ಸೆಕೆಂಡಿನ ಆ ಪ್ರೋಮೊನಲ್ಲಿ ನೋರಾ ಹಾಕಿರುವ ಸ್ಟೆಪ್ಪು ನೋಡಿಯೇ ಹಲವರು ಹಾಡಿನ ಬಿಡುಗಡೆಗೆ ಕಾಯುತ್ತಿದ್ದರು. ಅದರಂತೆ ಇಂದು ಅದ್ಧೂರಿಯಾಗಿ ಹಾಡು ಬಿಡುಗಡೆ ಆಗಿದೆ. ಪ್ರೇಮ್ ಅವರು ಹಾಡು ಬಿಡುಗಡೆಗೆ ವಿಶೇಷ ಕಾರ್ಯಕ್ರಮವನ್ನು ಸಹ ಆಯೋಜಿಸಿ, ಅದ್ಧೂರಿಯಾಗಿ ಹಾಡು ಬಿಡುಗಡೆ ಮಾಡಿದ್ದಾರೆ.

ಈಗ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್​​ನಲ್ಲಿ ಬಿಡುಗಡೆ ಆಗಿರುವ ‘ಸೆರಗ ಸರ್ಸೆ’ ಹಾಡು ಲಿರಿಕಲ್ ಹಾಡಾಗಿದ್ದು, ಹಾಡಿನ ವಿಡಿಯೋಗಳು ಕಡಿಮೆ ಇವೆ. ಪ್ರೋಮೊನಲ್ಲಿ ಇದ್ದಿದ್ದ ನೋರಾ, ಸೆರಗು ಸರಿಸುತ್ತಿರುವ ಸ್ಟೆಪ್ಪಿನ ಜೊತೆಗೆ ಸಂಜಯ್ ದತ್ ಅವರ ಒಂದು ಹುಕ್ ಸ್ಟೆಪ್ಪಿದೆ. ಬಿಟ್ಟರೆ ಕೇವಲ ಹಾಡಿನ ಸ್ಕ್ರೀನ್​​ ಶಾಟ್​​ಗಳನ್ನೇ ಪ್ರದರ್ಶಿಸಿ ಹಾಡು ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ:ಸುದೀಪ್ ಹೇಳಿಕೆಗೆ ಧ್ರುವ ಸರ್ಜಾ ನೀಡಿದ ಪ್ರತಿಕ್ರಿಯೆ ಹೇಗಿತ್ತು?

ಪ್ರೇಮ್ ಅವರು ಸಾಹಿತ್ಯ ಬರೆದಿರುವ ‘ಸೆರಗ ಸರ್ಸೆ’ ಹಾಡು ಸಾಕಷ್ಟು ದ್ವಂದ್ವಾರ್ಥಗಳನ್ನು ಒಳಗೊಂಡಿದೆ. ಎಣ್ಣೆ ಅಂಗಡಿ ಯುವತಿ ಎಣ್ಣೆಯ ಬಗ್ಗೆ ಡಬಲ್ ಮೀನಿಂಗ್ ಅಲ್ಲಿ ಹೇಳುತ್ತಿರುವ ಸಾಹಿತ್ಯವನ್ನು ಒಳಗೊಂಡಿರುವ ಹಾಡು ಇದಾಗಿದ್ದು, ಹಾಡಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಂಜಯ್ ದತ್ ಅವರಿಗೆ ‘ಖಳನಾಯಕ್’ ಎಂಬ ಕ್ಯಾಚಿ ಲೈನನ್ನೂ ಸಹ ಪ್ರೇಮ್ ಸೇರಿಸಿದ್ದಾರೆ.

‘ಕೆಡಿ’ ಸಿನಿಮಾನಲ್ಲಿ ಧ್ರುವ ಸರ್ಜಾ ಜೊತೆಗೆ ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾನಲ್ಲಿ ಸಂಜಯ್ ದತ್, ವಿ ರವಿಚಂದ್ರನ್, ರಮೇಶ್ ಅರವಿಂದ್, ಜಿಸು ಸೇನ್ ಗುಪ್ತ ಇನ್ನೂ ಹಲವರು ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತವಿದೆ. ಪ್ರೇಮ್ ನಿರ್ದೇಶಿಸಿರುವ ಈ ಸಿನಿಮಾವನ್ನು ಕೆವಿಎನ್ ನಿರ್ಮಾಣ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us