ಬಾಲಿವುಡ್ ಖ್ಯಾತ ನಟ ದಿಲೀಪ್ ಕುಮಾರ್ ಅನಾರೋಗ್ಯದಿಂದ ಮುಂಬೈನ ಹಿಂದುಜಾ ಆಸ್ಪತ್ರೆಗೆ ನಿನ್ನೆ ದಾಖಲಾಗಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಅವರಿಗೆ ಈಗ ತೀವ್ರ ನಿಗಾ ಘಟಕ (ICU)ದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಹಿಂದೆಯೂ ದಿಲೀಪ್ ಕುಮಾರ್ಗೆ ಇದೇ ಸಮಸ್ಯೆಯಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿ 10 ದಿನಗಳ ನಂತರ ಮತ್ತೊಮ್ಮೆ ಉಸಿರಾಡಲಾಗದೆ ಕಷ್ಟಪಡುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ದಿಲೀಪ್ ಕುಮಾರ್ ಅವರಿಗೀಗ 98 ವರ್ಷ. ಇಂದು ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ಚೇತರಿಕೆ ಕಂಡಿದೆ ಎಂದೂ ಆಸ್ಪತ್ರೆ ಮಾಹಿತಿ ನಿಡಿದೆ. ವಯೋಸಹಜವಾಗಿ ಅವರಲ್ಲಿ ನಿಶ್ಯಕ್ತಿ ಇದೆ. ಇತ್ತೀಚೆಗಷ್ಟೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿರುವ ಕಾರಣ ಯಾವುದೇ ರಿಸ್ಕ್ ತೆಗೆದುಕೊಳ್ಳುವುದು ಬೇಡವೆಂದು ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಉಲ್ಲೇಖಿಸಿದೆ. ದಿಲೀಪ್ ಕುಮಾರ್ ಜೂನ್ 6ರಂದು ಸಹ ಇದೇ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಶ್ವಾಸಕೋಶದಲ್ಲಿ ಸಮಸ್ಯೆ ಇರುವುದು ಗೊತ್ತಾಗಿತ್ತು. ಆಗ 5 ದಿನ ಆಸ್ಪತ್ರೆಯಲ್ಲಿ ಇದ್ದು ಚಿಕಿತ್ಸೆ ಪಡೆದಿದ್ದರು.
ದಿಲೀಪ್ ಕುಮಾರ್ ಬಾಲಿವುಡ್ನಲ್ಲಿ ಮಿಂಚಿದವರು. ಮೊಘಲ್ ಎ ಅಜಮ್, ದೇವ್ದಾಸ್, ನಯಾ ದೌರ್ ಮತ್ತು ರಾಮ್ ಔರ್ ಶ್ಯಾಮ್ನಂತಹ ಅದ್ಭುತ ಸಿನಿಮಾಗಳನ್ನು ಕೊಟ್ಟು ಹೆಸರುಗಳಿಸಿದವರು. ಅಪಾರ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವ ನಟ. ಇವರ ಕೊನೇ ಸಿನಿಮಾ 1998ರಲ್ಲಿ ಬಿಡುಗಡೆಯಾದ ಕ್ವಿಲಾ.
ಇದನ್ನೂ ಓದಿ: ಮತ್ತೆ ಪ್ರಯಾಣಿಕರಿಂದ ಜೀವಕಳೆ ಪಡೆದುಕೊಂಡ ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ದಾಣ; ಟ್ಯಾಕ್ಸಿ ಚಾಲಕರ ಮೊಗದಲ್ಲಿ ಮಂದಹಾಸ
Dilip Kumar Admitted to Mumbai Hospital after Complaints of breathlessness
Published On - 12:45 pm, Wed, 30 June 21