ರಜನಿಕಾಂತ್ ಅವರಿಗೆ ವಿಶ್ವಾದ್ಯಂತ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಅವರು ಏನೇ ಮಾಡಿದರೂ ಫ್ಯಾನ್ಸ್ ಸಂಭ್ರಮಿಸುತ್ತಾರೆ. ಸಿನಿಮಾ ಬಂದಾಗ ಫ್ಯಾನ್ಸ್ ಸಂಭ್ರಮಿಸುತ್ತಾರೆ. ಅದೇ ರಿತಿ ಅವರ ಬಗ್ಗೆ ಯಾರಾದರೂ ನೆಗೆಟಿವ್ ಆಗಿ ಮಾತನಾಡಿದರೆ ಫ್ಯಾನ್ಸ್ ಅದನ್ನು ಸಹಿಸುವುದಿಲ್ಲ. ಈಗ ಆಗಿದ್ದೂ ಅದೇ. ಖ್ಯಾತ ನಿರ್ದೇಶಕ ವಿಷ್ಣುವರ್ಧನ ಅವರು ರಜನಿಕಾಂತ್ ಸಿನಿಮಾ ಬಗ್ಗೆ ಟೀಕೆ ಮಾಡಿದ್ದರು. ಇದನ್ನು ಅಭಿಮಾನಿಗಳು ಸಹಿಸಿಲ್ಲ.
ರಜನಿಕಾಂತ್ ನಟನೆಯ ‘ಬಿಲ್ಲಾ’ ಸಿನಿಮಾ ಹಿಟ್ ಆಗಿತ್ತು. ಆದರೆ, ವಿಷ್ಣುವರ್ಧನ್ ಅವರು ‘ಬಿಲ್ಲ ಸಿನಿಮಾ ರಿಲೀಸ್ ಆದಾಗ ಹಿಟ್ ಆಗಿರಲಿಲ್ಲ’ ಎಂದಿದ್ದರು. ಇದು ಸಾಕಷ್ಟು ಚರ್ಚೆಗೆ ಕಾರಣ ಆಗಿದೆ. ಈ ಸಿನಿಮಾನ ಅದೇ ಹೆಸರಲ್ಲಿ ವಿಷ್ಣುವರ್ಧನ ರಿಮೇಕ್ ಮಾಡಿದ್ದರು.
ಇದನ್ನು ರಜನಿಕಾಂತ್ ಫ್ಯಾನ್ಸ್ ಗಂಭೀರವಾಗಿ ಸ್ವೀಕರಿಸಿದ್ದಾರೆ. ‘ಬಿಲ್ಲ ಸಿನಿಮಾ ಹಿಟ್ ಆಗಿತ್ತು’ ಎಂದಿದ್ದಾರೆ. ಇದಕ್ಕೆ ಸಾಕ್ಷಿಗಳನ್ನು ಕೂಡ ನೀಡಿದ್ದಾರೆ. ರಜನಿ ಪಿಆರ್ಒ ರಿಯಾಜ್ ಅಹ್ಮದ್ ಸೋಶಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಿದ್ದಾರೆ. ‘1980ರಲ್ಲಿ ರಿಲೀಸ್ ಆದ ಬಿಲ್ಲ ಸಿಲ್ವರ್ ಜುಬ್ಲಿ ಹಿಟ್ ಸಿನಿಮಾ. ಇದನ್ನು ಸಿನಿಮಾ ನಿರ್ಮಾಪಕ ಸುರೇಶ್ ಬಾಲಾಜಿ ಜೊತೆ ಚರ್ಚಿಸಿ ಖಾತ್ರಿ ಮಾಡಿಕೊಳ್ಳಬಹುದು. ತಪ್ಪು ಮಾಹಿತಿ ಹರಡದಿರಲು ನಿಮ್ಮ ಮಾತುಗಳಲ್ಲಿ ನಿಖರತೆಯನ್ನು ಇರಲಿ ಎಂದು ಮನವಿ ಮಾಡಿಕೊಳ್ಳುತ್ತೇನೆ’ ಎಂದಿದ್ದಾರೆ. ಇದಕ್ಕೆ ವಿಷ್ಣುವರ್ಧನ ಅವರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
As respected influencers in the media landscape, hosts/VJs play a vital role in shaping public discourse. To maintain the highest standards of journalism, it’s essential to verify the accuracy of statements made during interviews.
By doing so, hosts/VJs can ensure that the… https://t.co/Ys5Bwsflb9 pic.twitter.com/aBVCTQJsCj
— RIAZ K AHMED (@RIAZtheboss) January 13, 2025
ಇದನ್ನೂ ಓದಿ: ನಟನಾಗುವುದಕ್ಕೂ ಮೊದಲು ಗ್ಯಾರೆಜ್ನಲ್ಲಿ ಕೆಲಸ ಮಾಡಿದ್ದ ಅಜಿತ್
ವಿಷ್ಣವರ್ಧನ ಅವರು ತೆಲುಗು ಸಿನಿಮಾಗಳನ್ನು ನಿರ್ದೇಶನ ಮಾಡಿ ಗಮನ ಸೆಳೆದವರು. 2021ರಲ್ಲಿ ‘ಶೇರ್ಷಾ’ ಹೆಸರಿನ ಸಿನಿಮಾ ಮಾಡಿ ಗಮನ ಸೆಳೆದರು. ಈ ಚಿತ್ರ ಹಿಟ್ ಆಯಿತು. ಅವರ ನಿರ್ದೇಶನದ ‘ನೆಸಿಪ್ಪಯ’ ಇಂದು ರಿಲೀಸ್ ಆಗಿದೆ. ವಿಷ್ಣುವರ್ಧನ ಕೂಡ ತಮಿಳಿನಲ್ಲಿ ‘ಬಿಲ್ಲ’ ಹೆಸರಿನ ಸಿನಿಮಾ ಮಾಡಿದ್ದರು. ಈ ಚಿತ್ರದಲ್ಲಿ ಅಜಿತ್ ಕುಮಾರ್ ಅವರು ನಟಿಸಿದ್ದರು. ರಜನಿಕಾಂತ್ ನಟನೆಯ ಚಿತ್ರದ ರಿಮೇಕ್ ಇದಾಗಿದೆ. ಸದ್ಯ ವಿಷ್ಣುವರ್ಧನ ಅವರು ಸೋಶಿಯಲ್ ಮೀಡಿಯಾದಲ್ಲಿ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಅವರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:03 am, Tue, 14 January 25