ಬಿಗ್ ಬಾಸ್ ಮನೆಯಲ್ಲೇ ಅಂತ್ಯವಾಗುತ್ತೆ ಭವ್ಯಾ-ತ್ರಿವಿಕ್ರಂ ಪ್ರೀತಿ? ಸಿಕ್ಕಿದೆ ಸೂಚನೆ
ಬಿಗ್ ಬಾಸ್ ಕನ್ನಡದಲ್ಲಿ ತ್ರಿವಿಕ್ರಂ ಅವರು ಭವ್ಯಾಗೆ ಪ್ರಪೋಸ್ ಮಾಡಿದ್ದಾರೆ. ಕಪ್ ಗೆದ್ದರೆ ಮಾತ್ರ ಭವ್ಯಾ ಒಪ್ಪುವುದಾಗಿ ಪರೋಕ್ಷವಾಗಿ ಹೇಳಿದ್ದಾರೆ. ಆದರೆ, ಇಬ್ಬರ ನಡುವೆ ಜಗಳಗಳು ಹೆಚ್ಚಾಗುತ್ತಿದ್ದು, ಅವರ ಪ್ರೇಮ ಸಂಬಂಧ ಮುಂದುವರಿಯುವುದೇ ಎಂಬ ಅನುಮಾನವಿದೆ. ಟಾಸ್ಕ್ನಲ್ಲಿ ತ್ರಿವಿಕ್ರಂ ಹೆಸರನ್ನು ಭವ್ಯಾ ಹೇಳದಿರುವುದು ಹೊಸ ಜಗಳಕ್ಕೆ ಕಾರಣವಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಈವರೆಗೆ ಸಾಕಷ್ಟು ಪ್ರೀತಿಗಳು ಹುಟ್ಟಿವೆ. ಹುಟ್ಟಿದ ಪ್ರೀತಿ ಕೆಲವೊಮ್ಮೆ ಉಳಿದುಕೊಂಡರೆ ಇನ್ನೂ ಕೆಲವೊಮ್ಮೆ ಅಂತ್ಯವಾಗಿದೆ. ಇನ್ನೂ ಅನೇಕ ಸಂದರ್ಭದಲ್ಲಿ ಈ ಪ್ರೀತಿ-ಪ್ರೇಮ ಆಟದ ಮೈಲೇಜ್ಗೆ ಮಾಡುವ ತಂತ್ರವೂ ಆಗಿರುತ್ತದೆ. ಈ ಬಾರಿಯೂ ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಹುಟ್ಟಿದೆ. ತ್ರಿವಿಕ್ರಂ ಅವರು ಓಪನ್ ಆಗಿ ಭವ್ಯಾಗೆ ಪ್ರಪೋಸ್ ಮಾಡಿದ್ದಾರೆ. ಆದರೆ, ಇದು ದೊಡ್ಮನೆಯಲ್ಲಿ ಕೊನೆ ಆಗುವ ಸೂಚನೆಯೂ ಸಿಕ್ಕಿದೆ.
ಕಳೆದ ವಾರ ತ್ರಿವಿಕ್ರಂ ಅವರು ಭವ್ಯಾಗೆ ಪ್ರಪೋಸ್ ಮಾಡಿದ್ದರು. ಪ್ರೀತಿ ಒಪ್ಪಿಕೊಳ್ಳುತ್ತೀರಾ ಅಥವಾ ಇಲ್ಲವಾ ಎಂದು ನೇರವಾಗಿ ಕೇಳಿದ್ದರು. ಆದರೆ, ಭವ್ಯಾ ದೊಡ್ಮನೆಯಲ್ಲಿ ಇದಕ್ಕೆ ಉತ್ತರ ನೀಡುವುದಿಲ್ಲ ಎಂದು ಹೇಳಿದ್ದು ಅಲ್ಲದೆ, ಕಪ್ ಗೆದ್ದು ಬಂದರೆ ಮರುಯೋಚಿಸದೆ ಒಪ್ಪಿಕೊಳ್ಳುತ್ತೇನೆ ಎಂದು ನೇರವಾಗಿ ಹೇಳಿದ್ದರು. ಫಿನಾಲೆ ಸಮೀಪಿಸುವಾಗ ಈ ಬೆಳವಣಿಗೆ ನಡೆದಿದೆ. ಇದರ ಜೊತೆ ಕಿರಿಕ್ಗಳು ಕೂಡ ಆಗುತ್ತಿವೆ.
ಭವ್ಯಾ ಜೈಲಿನಲ್ಲಿ ಇದ್ದಾಗ ತ್ರಿವಿಕ್ರಂ ಅವರು ಬಂದು ಒಂದು ವಿಚಾರ ಕೇಳಿದ್ದಾರೆ. ‘ನನ್ನನ್ನು ಬಿಟ್ಟು ಬೇರೆ ಯಾರೇ ಬಂದು ಮಾತನಾಡಿದರೂ ನೀನು ಮಾತನಾಡುತ್ತೀಯಾ. ನಾವು ಇಲ್ಲಿ ಕೆಲಸಕ್ಕೆ ಬಂದಿರೋದು. ಚೆನ್ನಾಗಿ ಕೆಲಸ ಮಾಡಿದರೆ ದುಡ್ಡು ಸಿಗುತ್ತದೆ’ ಎಂದರು ತ್ರಿವಿಕ್ರಂ. ಈ ಮೂಲಕ ಭವ್ಯಾ ಉದ್ದೇಶ ಪೂರ್ವಕವಾಗಿ ತಮ್ಮ ಬಳಿ ಮಾತನಾಡುತ್ತಿಲ್ಲ ಎಂಬುದನ್ನು ಹೇಳಿದ್ದಾರೆ.
ಆ ಬಳಿಕ ತ್ರಿವಿಕ್ರಂ ಹಾಗೂ ಭವ್ಯಾ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಟಾಸ್ಕ್ ವೇಳೆ ಮೂವರು ಎದುರಾಳಿಯನ್ನು ಭವ್ಯಾ ಆಯ್ಕೆ ಮಾಡಿಕೊಳ್ಳಬೇಕಿತ್ತು. ಆದರೆ, ಭವ್ಯಾ ಅವರು ತ್ರಿವಿಕ್ರಂ ಹೆಸರನ್ನು ಹೇಳಿಲ್ಲ. ಈ ಬಗ್ಗೆ ತ್ರಿವಿಕ್ರಂ ಅವರು ಭವ್ಯಾ ಬಳಿ ಹೋಗಿ ಪ್ರಶ್ನೆ ಮಾಡಿದ್ದಾರೆ. ಈ ವಿಚಾರಕ್ಕೂ ಸಣ್ಣ ಜಗಳ ಆಗಿದೆ. ಆ ಬಳಿಕ ಟಾಸ್ಕ್ ಒಂದರಲ್ಲಿ ಭವ್ಯಾ ಅವರು ತ್ರಿವಿಕ್ರಂನ ಆಯ್ಕೆ ಮಾಡಿದರು. ಇದಕ್ಕೂ ತ್ರಿವಿಕ್ರಂ ಅವರು ಕೊಂಕು ತೆಗೆದರು.
ಇದನ್ನೂ ಓದಿ: ಕೆಟ್ಟದ್ದು ಮಾಡಿದ್ದರೂ ಭವ್ಯಾಗೆ ದೊಡ್ಡ ಅವಕಾಶ ನೀಡಿದ ಹನುಮಂತ; ಫಿನಾಲೆ ಹೋಗೋದು ಮತ್ತಷ್ಟು ಸುಲಭ
ಸದ್ಯ ಭವ್ಯಾ ಹಾಗೂ ತ್ರಿವಿಕ್ರಂ ಮಧ್ಯೆ ಕಿರಿಕ್ ಹೆಚ್ಚುತ್ತಲೇ ಇದೆ. ಆ ಬಳಿಕ ಇದನ್ನು ಪರಿಹರಿಸಿಕೊಂಡು ಪರಸ್ಪರ ಮಾತನಾಡುತ್ತಾರೆ. ಆದರೆ, ಈ ಜಗಳ ಹೀಗೆ ಮುಂದುವರಿದರೆ ಬಿಗ್ ಬಾಸ್ ಮನೆಯಲ್ಲೇ ಪ್ರೀತಿ ಕೊನೆ ಆದರೂ ಅಚ್ಚರಿ ಏನಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:31 am, Tue, 14 January 25