ಬಿಗ್ ಬಾಸ್ ಮನೆಯಲ್ಲಿ ಮೋಕ್ಷಿತಾ, ಭವ್ಯಾ ಪ್ಲ್ಯಾನ್; ಆಟದಿಂದ ರಜತ್ ಹೊರಗೆ
ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಬಂದ ರಜತ್ ಅವರು ಸ್ಟ್ರಾಂಗ್ ಸ್ಪರ್ಧಿ ಎಂಬುದೇನೋ ನಿಜ. ಆದರೆ ಭವ್ಯಾ ಗೌಡ ಮತ್ತು ಮೋಕ್ಷಿತಾ ಪೈ ಅವರ ತಂತ್ರಗಾರಿಕೆ ಮುಂದೆ ರಜತ್ ಅವರ ಆಟ ನಡೆಯಲಿಲ್ಲ. ಭವ್ಯಾ ಹಾಗೂ ಮೋಕ್ಷಿತಾ ಅವರು ಟಾಸ್ಕ್ನಲ್ಲಿ ಜೋಡಿಸಿದರು. ಹಾಗಾಗಿ ರಜತ್ಗೆ ಹಿನ್ನಡೆ ಆಯಿತು. ಮಿಡ್ ವೀಕ್ ಎಲಿಮಿನೇಷನ್ ಭಯ ಜಾಸ್ತಿ ಆಯಿತು.
ರಜತ್ ಅವರು ಎಲ್ಲ ಟಾಸ್ಕ್ನಲ್ಲಿಗೂ ಗೆಲ್ಲುವ ಆತ್ಮವಿಶ್ವಾಸ ಹೊಂದಿದ್ದರು. ಆದರೆ ಅದು ಸೆಮಿ ಫೈನಲ್ ವೀಕ್ನಲ್ಲಿ ಸಾಧ್ಯವಾಗಿಲ್ಲ. ಮೋಕ್ಷಿತಾ ಪೈ ಮತ್ತು ಭವ್ಯಾ ಗೌಡ ಅವರು ತಂತ್ರಗಾರಿಕೆ ಮಾಡಿ ರಜತ್ ಅವರನ್ನು ಆಟದಿಂದ ಹೊರಗೆ ಹಾಕಿದ್ದಾರೆ. ಇದರಿಂದ ಎಲ್ಲರಿಗೂ ಅಚ್ಚರಿ ಆಯಿತು. ಯಾಕೆಂದರೆ, ರಜತ್ ಟಾಸ್ಕ್ ಸೋಲುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅಲ್ಲದೇ, ಮೋಕ್ಷಿತಾ ಪೈ ಅವರು ಇಂಥ ತಂತ್ರಗಾರಿಕೆ ಮಾಡುತ್ತಾರೆ ಎಂಬುದನ್ನು ಕೂಡ ಅನೇಕರು ಊಹೆ ಮಾಡಿರಲಿಲ್ಲ. ಆದರೆ ಟಾಸ್ಕ್ನಲ್ಲಿ ಈ ರೀತಿ ತಂತ್ರಗಾರಿಕೆ ಮಾಡುವುದು ಅನಿವಾರ್ಯ ಆಗಿತ್ತು.
ಖಂಡಿತವಾಗಿಯೂ ಈ ವಾರ ಮಿಡ್ ಮೀಕ್ ಎಲಿಮಿನೇಷನ್ ನಡೆಯಲಿದೆ. ಅದಕ್ಕಾಗಿ ಕ್ಯಾಪ್ಟನ್ ಹನುಮಂತ ಅವರನ್ನು ಹೊರತುಪಡಿಸಿ ಉಳಿದ ಎಲ್ಲರನ್ನು ನಾಮಿನೇಟ್ ಮಾಡಲಾಗಿದೆ. ಭವ್ಯಾ ಗೌಡ, ಉಗ್ರಂ ಮಂಜು, ಮೋಕ್ಷಿತಾ ಪೈ, ತ್ರಿವಿಕ್ರಮ್, ಧನರಾಜ್, ಗೌತಮಿ ಜಾದವ್, ರಜತ್ ಅವರು ಟಾಸ್ಕ್ ಗೆಲ್ಲುವ ಮೂಲಕ ಮಾತ್ರ ನಾಮಿನೇಷ್ನಿಂದ ಬಚಾವ್ ಆಗಬಹುದು.
ಮೊದಲು ಟಾಸ್ಕ್ ಆಡಲು ಭವ್ಯಾ ಆಯ್ಕೆ ಆದರು. ಮೊದಲ ಸುತ್ತಿನಲ್ಲಿ ತಮ್ಮ ಎದುರಾಳಿಗಳಾಗಿ ಮೋಕ್ಷಿತಾ, ರಜತ್, ಗೌತಮಿ ಅವರನ್ನು ಭವ್ಯಾ ಆಯ್ಕೆ ಮಾಡಿಕೊಂಡರು. ಮೊದಲ ಸುತ್ತಿನಲ್ಲಿ ಗೌತಮಿ ಔಟ್ ಆದರು. ಎರಡನೇ ಸುತ್ತಿನಲ್ಲಿ ಮೋಕ್ಷಿತಾ ಮತ್ತು ಭವ್ಯಾ ಅವರು ಕೈ ಜೋಡಿಸಿ ರಜತ್ ಅವರನ್ನು ಆಟದಿಂದ ಹೊರಗೆ ಹಾಕಿದರು. ಮೋಕ್ಷಿತಾ ಅವರು ಭವ್ಯಾ ಜೊತೆ ಈ ರೀತಿ ಕೈ ಜೋಡಿಸಿದ್ದು ನೋಡಿ ರಜತ್ಗೆ ಅಚ್ಚರಿ ಆಯಿತು. ‘ನಿನ್ನಿಂದ ಇದನ್ನು ನಾನು ಊಹಿಸಿರಲಿಲ್ಲ’ ಎಂದು ರಜತ್ ಹೇಳಿದರು.
ಇದನ್ನೂ ಓದಿ: ಅರಗಿಸಿಕೊಳ್ಳಲಾಗದ ಸತ್ಯ ಹೇಳಿದ ರಜತ್; ಶಾಕ್ಗೆ ಒಳಗಾದ ಭವ್ಯಾ ಮಾಡಿದ್ದೇನು?
ರಜತ್ ಅವರು ವೈಲ್ಡ್ ಕಾರ್ಡ್ ಮೂಲಕ ಬಂದವರು. ಆದರೆ ಬೇರೆ ಎಲ್ಲ ಸ್ಪರ್ಧಿಗಳಿಗೂ ಅವರು ಟಫ್ ಸ್ಪರ್ಧೆ ನೀಡಿ ಫಿನಾಲೆಯ ಸಮೀಪಕ್ಕೆ ಬಂದಿದ್ದಾರೆ. ಆದರೆ ಮಿಡ್ ವೀಕ್ ಎಲಿಮಿನೇಷನ್ ವೇಳೆ ಅವರ ಆಟಕ್ಕೆ ಹಿನ್ನಡೆ ಆಗಿದೆ. ಈ ವಾರ ಯಾರು ವಾರದ ಮಧ್ಯದಲ್ಲೇ ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕು. ಹನುಮಂತ ಅವರು ಫಿನಾಲೆ ಟಿಕೆಟ್ ಪಡೆದು ಮುಂದೆ ಸಾಗಿದ್ದಾರೆ. ಆದರೆ ಅಂತಿಮವಾಗಿ ಗಪ್ ಗೆಲ್ಲುವುದು ಯಾರು ಎಂಬುದನ್ನು ತಿಳಿಯುವ ಕೌತುಕ ವೀಕ್ಷಕರಿಗೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.