ಸ್ವಾರ್ಥಕ್ಕಾಗಿ ನನ್ನನ್ನು ಇಷ್ಟು ದಿನ ಉಪಯೋಗಿಸಿಕೊಂಡೆ: ಭವ್ಯಾಗೆ ತ್ರಿವಿಕ್ರಮ್ ನೇರಮಾತು

ಭವ್ಯಾ ಗೌಡ ಅವರು ತ್ರಿವಿಕ್ರಮ್ ಜೊತೆ ಎಷ್ಟು ಕ್ಲೋಸ್ ಆಗಿದ್ದಾರೆ ಎಂಬುದು ವೀಕ್ಷಕರಿಗೆ ಚೆನ್ನಾಗಿ ಗೊತ್ತಿದೆ. ಎಷ್ಟೋ ಬಾರಿ ಅವರು ಸ್ನೇಹ ಮುರಿದುಕೊಳ್ಳಲು ಪ್ರಯತ್ನಿಸಿದರೂ ಸಹ ಅದು ಸಾಧ್ಯವಾಗಿಲ್ಲ. ಬಿಗ್ ಬಾಸ್ ಮನೆಯಲ್ಲಿ ಅವರಿಬ್ಬರು ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವರು ಜಗಳ ಮಾಡಲು ಆರಂಭಿಸಿದರು.

ಸ್ವಾರ್ಥಕ್ಕಾಗಿ ನನ್ನನ್ನು ಇಷ್ಟು ದಿನ ಉಪಯೋಗಿಸಿಕೊಂಡೆ: ಭವ್ಯಾಗೆ ತ್ರಿವಿಕ್ರಮ್ ನೇರಮಾತು
Trivikram
Follow us
ಮದನ್​ ಕುಮಾರ್​
|

Updated on: Jan 14, 2025 | 10:06 PM

‘ಬಿಗ್ ಬಾಸ್ ಕನ್ನಡ ಸೀಸನ್​ 11’ ಆಟದಲ್ಲಿ ಸ್ನೇಹ ಹೆಚ್ಚು ದಿನ ನಡೆಯುವುದಿಲ್ಲ. ಆದರೂ ಕೂಡ ಕೆಲವರು ಸ್ನೇಹದ ಬಲೆಗೆ ಬೀಳುತ್ತಾರೆ. ಭವ್ಯಾ ಗೌಡ ಹಾಗೂ ತ್ರಿವಿಕ್ರಮ್ ಅವರು ಬಹಳ ಆಪ್ತವಾಗಿ ಕಾಲ ಕಳೆದಿದ್ದಾರೆ. ಆದರೆ ಆಟದ ರೋಚಕತೆ ಜಾಸ್ತಿ ಆದಂತೆಲ್ಲ ಫ್ರೆಂಡ್​ಶಿಪ್ ನಿಭಾಯಿಸುವುದು ಕಷ್ಟ ಆಗುತ್ತಿದೆ. ಇಷ್ಟು ದಿನ ಹಾಕಿಕೊಂಡಿದ್ದ ಮುಖವಾಡ ಈಗ ಕಳಚಿ ಬೀಳುತ್ತಿದೆ. ತ್ರಿವಿಕ್ರಮ್ ಅವರು ನೇರವಾಗಿ ಭವ್ಯಾಗೆ ಕೆಲವು ಖಾರದ ಮಾತುಗಳನ್ನು ಹೇಳಿದ್ದಾರೆ.

ಮಿಡ್ ಮೀಕ್ ಎಲಿಮಿನೇಷನ್ ನಡೆಯುವುದು ಖಚಿತ ಎಂಬ ಕಾರಣದಿಂದ ಈ ವಾರ ಎಲ್ಲ ಸ್ಪರ್ಧಿಗಳಿಗೆ ಟೆನ್ಷನ್ ಹೆಚ್ಚಾಗಿದೆ. ಕ್ಯಾಪ್ಟನ್ ಹನುಮಂತ ಮಾತ್ರ ಕೂಲ್ ಆಗಿ ಇದ್ದಾರೆ. ಭವ್ಯಾ ಗೌಡ, ಮೋಕ್ಷಿತಾ, ಧನರಾಜ್, ಗೌತಮಿ ಜಾದವ್, ರಜತ್, ಉಗ್ರಂ ಮಂಜು, ತ್ರಿವಿಕ್ರಮ್ ಅವರು ಮಿಡ್ ಮೀಕ್ ಎಲಿಮಿನೇಷನ್​ನಿಂದ ಪಾರಾಗಲು ಹಣಾಹಣಿ ನಡೆಸುತ್ತಿದ್ದಾರೆ.

ಬಹುತೇಕ ಟಾಸ್ಕ್​ಗಳಲ್ಲಿ ಭವ್ಯಾ ಗೌಡ ಅವರು ಮುನ್ನಡೆ ಸಾಧಿಸಿದ್ದಾರೆ. ಇಷ್ಟು ದಿನಗಳ ಕಾಲ ಭವ್ಯಾಗೆ ಸಲಗೆ ನೀಡಿ, ಧೈರ್ಯ ತುಂಬುತ್ತಿದ್ದ ತ್ರಿವಿಕ್ರಮ್ ಅವರು ಹಿಂದೆ ಉಳಿದುಕೊಂಡಿದ್ದಾರೆ. ಟಾಸ್ಕ್​ನಲ್ಲಿ ತ್ರಿವಿಕ್ರಮ್​ಗೆ ಹಿನ್ನಡೆ ಆದಾಗ ಭವ್ಯಾ ಖುಷಿಪಟ್ಟರು ಎಂಬುದು ತ್ರಿವಿಕ್ರಮ್ ಅಭಿಪ್ರಾಯ. ಇದೇ ವಿಚಾರವನ್ನು ಇಟ್ಟುಕೊಂಡು ಭವ್ಯಾ ಎದುರು ಅವರು ನಿಷ್ಟುರವಾಗಿ ಮಾತನಾಡಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಬಿಟ್ಟರೂ ಸುದೀಪ್ ಬಿಡಲಿಲ್ಲ; ಭವ್ಯಾಗೆ ಸೂಕ್ತ ಶಿಕ್ಷೆ ಕೊಟ್ಟ ಕಿಚ್ಚ

‘ಇಷ್ಟು ದಿನ ನನ್ನನ್ನು ನೀನು ನಿನ್ನ ಸ್ವಾರ್ಥಕ್ಕಾಗಿ ಉಪಯೋಗಿಸಿಕೊಂಡೆ’ ಎಂದು ಭವ್ಯಾಗೆ ತ್ರಿವಿಕ್ರಮ್ ಹೇಳಿದ್ದಾರೆ. ಈ ಮಾತು ಕೇಳಿಸಿಕೊಂಡು ಭವ್ಯಾಗೆ ಬಹಳ ಬೇಸರ ಆಗಿದೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ವಾರದ ಮಧ್ಯದಲ್ಲಿ ಒಬ್ಬರು ಹಾಗೂ ವಾರಾಂತ್ಯದಲ್ಲಿ ಇನ್ನೊಬ್ಬರು ಔಟ್ ಆಗಲಿದ್ದಾರೆ. ಹನುಮಂತ ಅವರು ಫಿನಾಲೆ ಟಿಕೆಟ್ ಪಡೆದು ಮುನ್ನಡೆ ಸಾಧಿಸಿದ್ದಾರೆ. ಅವರ ಚಾಲಾಕಿತನಕ್ಕೆ ಎಲ್ಲರೂ ಬೆರಗಾಗಿದ್ದಾರೆ. ಸುದೀಪ್ ಕೂಡ ಹನುಮಂತನ ಆಟಕ್ಕೆ ಭೇಷ್ ಎಂದಿದ್ದಾರೆ. ಕಳೆದ ವಾರ ಚೈತ್ರಾ ಕುಂದಾಪುರ ಎಮಿಲಿನೇಟ್ ಆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ
ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ, ಅವರಿಗೆ ವಿಶ್ರಾಂತಿಯ ಅಗತ್ಯವಿದೆ:ಶಶಿಕಲಾ
ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ, ಅವರಿಗೆ ವಿಶ್ರಾಂತಿಯ ಅಗತ್ಯವಿದೆ:ಶಶಿಕಲಾ