‘ವಿಚ್ಛೇದನವನ್ನು ಸಂಭ್ರಮಿಸಬೇಕು’; ಆಮಿರ್​-ಕಿರಣ್​ಗೆ ಕಿವಿಮಾತು ಹೇಳಿದ ಖ್ಯಾತ ನಿರ್ದೇಶಕ

| Updated By: ಮದನ್​ ಕುಮಾರ್​

Updated on: Jul 04, 2021 | 3:07 PM

ಆಮಿರ್​-ಕಿರಣ್​ ವಿಚ್ಛೇದನಕ್ಕೆ ಸಂಬಂಧಿಸಿ ನಿರ್ದೇಶಕ ರಾಮ್​ ಗೋಪಾಲ್​ ವರ್ಮ ಪ್ರತಿಕ್ರಿಯೆ ನೀಡಿದ್ದಾರೆ. ವಿಚ್ಛೇದನವನ್ನು ಸಂಭ್ರಮಿಸಬೇಕು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

‘ವಿಚ್ಛೇದನವನ್ನು ಸಂಭ್ರಮಿಸಬೇಕು’; ಆಮಿರ್​-ಕಿರಣ್​ಗೆ ಕಿವಿಮಾತು ಹೇಳಿದ ಖ್ಯಾತ ನಿರ್ದೇಶಕ
‘ವಿಚ್ಛೇದನವನ್ನು ಸಂಭ್ರಮಿಸಬೇಕು’; ಆಮಿರ್​-ಕಿರಣ್​ಗೆ ಕಿವಿಮಾತು ಹೇಳಿದ ಖ್ಯಾತ ನಿರ್ದೇಶಕ
Follow us on

ಬಾಲಿವುಡ್​ ನಟ ಆಮಿರ್​ ಖಾನ್​ ಹಾಗೂ ಅವರ ಪತ್ನಿ ಕಿರಣ್​ ರಾವ್​ ವಿಚ್ಛೇದನ ಪಡೆಯುವ ಮೂಲಕ 15 ವರ್ಷಗಳ ದಾಂಪತ್ಯಕ್ಕೆ ಕೊನೆ ಹಾಡಿದ್ದಾರೆ. ಅವರು ವಿಚ್ಛೇದನ ಘೋಷಿಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಆಮಿರ್​ ಅವರನ್ನು ಟ್ರೋಲ್​ ಮಾಡಿದ್ದಾರೆ. ‘ದಂಗಲ್​’ ಚಿತ್ರದ ನಟಿ ಫಾತಿಮಾ ಶೇಖ್​ಗಾಗಿ ಆಮಿರ್​ ವಿಚ್ಛೇದನ ಪಡೆದರು ಎಂದು ಕೆಲವರು ಬರೆದುಕೊಂಡಿದ್ದಾರೆ. ಆಮಿರ್​-ಕಿರಣ್​ ವಿಚ್ಛೇದನಕ್ಕೆ ಸಂಬಂಧಿಸಿ ನಿರ್ದೇಶಕ ರಾಮ್​ ಗೋಪಾಲ್​ ವರ್ಮ ಪ್ರತಿಕ್ರಿಯೆ ನೀಡಿದ್ದಾರೆ. ವಿಚ್ಛೇದನವನ್ನು ಸಂಭ್ರಮಿಸಬೇಕು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಸರಣಿ ಟ್ವೀಟ್​ ಮಾಡಿರುವ ಆರ್​ಜಿವಿ, ‘ಆಮಿರ್​-ಕಿರಣ್​ ವಿಚ್ಛೇದನ ಪಡೆದುಕೊಂಡಿದ್ದಾರೆ. ಇದರಿಂದ ಅವರಿಗೆ ಸಮಸ್ಯೆ ಇಲ್ಲ. ಆದರೆ, ಉಳಿದವರು ಚಿಂತಿಸುತ್ತಿದ್ದಾರೆ. ಟ್ರೋಲ್​ ಪೇಜ್​ಗಳು ಟ್ರೋಲ್​ ಮಾಡುತ್ತಿವೆ. ಅದೂ ವೈಯಕ್ತಿಕವಾಗಿ’ ಎಂದಿದ್ದಾರೆ.

‘ಆಮಿರ್‌ ಖಾನ್ ಮತ್ತು ಕಿರಣ್‌ ರಾವ್ ನೀವು ಒಬ್ಬರಿಗೊಬ್ಬರು ಒಳ್ಳೆಯದನ್ನು ಬಯಸುತ್ತಿದ್ದೀರಿ. ನೀವು ಮಾಡುತ್ತಿರುವ ಈ ಕಾರ್ಯದಿಂದ ಭವಿಷ್ಯದಲ್ಲಿ ಸಂತೋಷ ಸಿಗಲಿದೆ. ನೀವು ತೆಗೆದುಕೊಳ್ಳುತ್ತಿರುವ ನಿರ್ಧಾರ ವೈಯಕ್ತಿಕವಾದುದ್ದು ಮತ್ತು ಅದಕ್ಕೆ ಕಾರಣ ನಿಮಗೆ ಮಾತ್ರ ಚೆನ್ನಾಗಿ ಗೊತ್ತು. ಹೀಗಾಗಿ, ಟ್ರೋಲ್​​​​ಗಳ ಬಗ್ಗೆ ಚಿಂತೆ ಬೇಡ’ ಎಂದಿದ್ದಾರೆ ಅವರು.

‘ಮದುವೆಗಿಂತ ಡೈವೋರ್ಸ್​ಅನ್ನು ಸಂಭ್ರಮಿಸಬೇಕು. ಏಕೆಂದರೆ ಜ್ಞಾನ ಮತ್ತು ಬುದ್ಧಿವಂತಿಕೆಯಿಂದ ವಿಚ್ಛೇದನ ಸಂಭವಿಸುತ್ತದೆ. ಅಜ್ಞಾನ ಮತ್ತು ಮೂರ್ಖತನದಿಂದ ವಿವಾಹ ನಡೆಯುತ್ತದೆ’ ಎಂದು ಆರ್​ಜಿವಿ ಹೇಳಿದ್ದಾರೆ.

1995ರಲ್ಲಿ ತೆರೆಗೆ ಬಂದಿದ್ದ ‘ರಂಗೀಲಾ’ ಸಿನಿಮಾಗೆ ರಾಮ್​ ಗೋಪಾಲ್​ ವರ್ಮಾ ನಿರ್ದೇಶನವಿತ್ತು. ಈ ಚಿತ್ರದಲ್ಲಿ ಆಮಿರ್​ ಖಾನ್​ ಹೀರೋ ಆಗಿ ಕಾಣಿಸಿಕೊಂಡಿದ್ದರು. ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಒಳ್ಳೆಯ ಕಮಾಯಿ ಮಾಡಿತ್ತು. ಈ ಚಿತ್ರ ತೆರೆಕಂಡ ನಂತರದಲ್ಲಿ ಆಮಿರ್​ ಹಾಗೂ ಆರ್​ಜಿವಿ ನಡುವಿನ ಫ್ರೆಂಡ್​ಶಿಪ್​ ಮುರಿದು ಬಿದ್ದಿತ್ತು. ಇದರಲ್ಲಿ ನನ್ನದೇ ತಪ್ಪಿದೆ ಎಂದು ಆರ್​ಜಿವಿ ಇತ್ತೀಚೆಗೆ ಹೇಳಿಕೊಂಡಿದ್ದರು.

ಇದನ್ನೂ ಓದಿ:

ಆಮೀರ್ ಖಾನ್​​ಗಿಂತ ವೇಯ್ಟರ್​ ಉತ್ತಮವಾಗಿ ಆ್ಯಕ್ಟ್​ ಮಾಡಿದ್ದ; ಆರ್​ಜಿವಿ ಹೀಗೆ ಹೇಳಿದ್ದರ ಹಿಂದಿತ್ತು ಬೇರೆ ಉದ್ದೇಶ

Aamir Khan: ಆಮಿರ್​​ ಖಾನ್​-ಕಿರಣ್​ ರಾವ್​ ವಿಚ್ಛೇದನ; 15 ವರ್ಷದ ದಾಂಪತ್ಯ ಜೀವನ ಅಂತ್ಯ