Divya Uruduga: ಕೊವಿಡ್​ನಿಂದ ಕುಟುಂಬದವರನ್ನು ಕಳೆದುಕೊಂಡಿದ್ದಾರೆ ದಿವ್ಯಾ ಉರುಡುಗ; ಬಿಗ್​ ಬಾಸ್​ ಮನೆಯಲ್ಲಿ ಭಾವುಕ ನುಡಿ

Bigg Boss 8 Second Innings: ಲಾಕ್​ಡೌನ್​ ನಿಯಮಗಳಿಂದ ಸುದೀಪ್​ ಬಿಗ್​ ಬಾಸ್​ ವೇದಿಕೆ ಏರಿರಲಿಲ್ಲ. ಈಗ ಅನೇಕ ತಿಂಗಳ ನಂತರದಲ್ಲಿ ಸುದೀಪ್​ ಬಿಗ್​ ಬಾಸ್​ ವೇದಿಕೆ ಏರಿದ್ದಾರೆ. ಅವರ ಕೌಂಟರ್​ ಮಾತು ಕೇಳಿ ಎಲ್ಲರೂ ಖುಷಿಯಾಗಿದ್ದಾರೆ.  

Divya Uruduga: ಕೊವಿಡ್​ನಿಂದ ಕುಟುಂಬದವರನ್ನು ಕಳೆದುಕೊಂಡಿದ್ದಾರೆ ದಿವ್ಯಾ ಉರುಡುಗ; ಬಿಗ್​ ಬಾಸ್​ ಮನೆಯಲ್ಲಿ ಭಾವುಕ ನುಡಿ
ದಿವ್ಯಾ ಉರುಡುಗ
Edited By:

Updated on: Jun 23, 2021 | 10:00 PM

ಬಿಗ್​ ಬಾಸ್​ನಿಂದ ಅನೇಕರು ಆಪ್ತರನ್ನು ಕಳೆದುಕೊಂಡಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಕೊವಿಡ್​ ತಂದಿಟ್ಟ ಸಮಸ್ಯೆಗಳು ಒಂದೆರಡಲ್ಲ. ಬಿಗ್​ ಬಾಸ್​ ಅರ್ಧದಲ್ಲಿ ನಿಲ್ಲೋಕೆ ಕೊವಿಡ್​ ಕಾರಣವಾಗಿತ್ತು. ಈಗ ಕುಟುಂಬದವರನ್ನು ಕಳೆದುಕೊಂಡ ಬಗ್ಗೆ ಬಿಗ್​ ಬಾಸ್​ನಲ್ಲಿ ಹೇಳಿಕೊಂಡಿದ್ದಾರೆ.

ಬಿಗ್​ಬಾಸ್ ಸೀಸನ್​ 8 ಅರ್ಧಕ್ಕೆ ನಿಲ್ಲುವಾಗ ಮನೆಯೊಳಗೆ ಅರವಿಂದ್ ಕೆ.ಪಿ, ಮಂಜು ಪಾವಗಡ, ಶಮಂತ್ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್, ರಘು ಗೌಡ, ಶುಭಾ ಪೂಂಜಾ, ವೈಷ್ಣವಿ ಗೌಡ, ದಿವ್ಯಾ ಸುರೇಶ್, ಪ್ರಿಯಾಂಕಾ ತಿಮ್ಮೇಶ್, ನಿಧಿ ಸುಬ್ಬಯ್ಯ, ಪ್ರಶಾಂತ್​ ಸಂಬರಗಿ ಹಾಗೂ ದಿವ್ಯಾ ಉರುಡುಗ ಸೇರಿ 12 ಸ್ಪರ್ಧಿಗಳು ಇದ್ದರು. ಈಗ ಈ ಎಲ್ಲಾ ಸ್ಪರ್ಧಿಗಳು ಬುಧವಾರ (ಜೂನ್​ 23) ಮರಳಿ ಬಿಗ್​ ಬಾಸ್​ ಮನೆಗೆ ಎಂಟ್ರಿ ಪಡೆದಿದ್ದಾರೆ.

ಹೊರಗೆ ಕಳೆದ 43 ದಿನಗಳ ಕಾಲ ಏನೆಲ್ಲ ಆಗಿತ್ತು ಎಂಬುದನ್ನು ಸ್ಪರ್ಧಿಗಳು ಹೇಳಿಕೊಂಡಿದ್ದಾರೆ. ಈ ವೇಳೆ ಮಾತನಾಡಿದ ದಿವ್ಯಾ ಉರುಡುಗ, ‘ನಾನು ಚಿಕ್ಕಪ್ಪ ಮತ್ತು ಅಜ್ಜನನ್ನು ಕಳೆದುಕೊಂಡೆ. ಅಮ್ಮನ ತಂಗಿ ಗಂಡ, ಅಮ್ಮನ ಅಪ್ಪ ಕೊವಿಡ್​ಗೆ ನಿಧನರಾದರು’ ಎಂದು ಭಾವುಕರಾದರು.

ಸೀಸನ್​ 8 ಅರ್ಧಕ್ಕೆ ನಿಲ್ಲುವುದಕ್ಕೂ ಕೆಲ ವಾರ ಮೊದಲು ಕಿಚ್ಚ ಸುದೀಪ್​ಗೆ ಅನಾರೋಗ್ಯ ಕಾಡಿತ್ತು. ಈ ಕಾರಣಕ್ಕೆ ಅವರು ಬಿಗ್​ ಬಾಸ್​ ನಡೆಸಿಕೊಡೋಕೆ ಸಾಧ್ಯವಾಗಿರಲಿಲ್ಲ. ಇದಾದ ನಂತರದಲ್ಲಿ ಲಾಕ್​ಡೌನ್​ ನಿಯಮಗಳಿಂದ ಸುದೀಪ್​ ಬಿಗ್​ ಬಾಸ್​ ವೇದಿಕೆ ಏರಿರಲಿಲ್ಲ. ಈಗ ಅನೇಕ ತಿಂಗಳ ನಂತರದಲ್ಲಿ ಸುದೀಪ್​ ಬಿಗ್​ ಬಾಸ್​ ವೇದಿಕೆ ಏರಿದ್ದಾರೆ. ಅವರ ಕೌಂಟರ್​ ಮಾತು ಕೇಳಿ ಎಲ್ಲರೂ ಖುಷಿಯಾಗಿದ್ದಾರೆ.

ಇದನ್ನೂ ಓದಿ: Vaishnavi Gowda: ವೈಷ್ಣವಿಗೆ ಬಂದ ಮದುವೆ ಪ್ರಪೋಸಲ್ಸ್​ ಸಂಖ್ಯೆ​ ಕೇಳಿ ಅಚ್ಚರಿಪಟ್ಟ ಕಿಚ್ಚ ಸುದೀಪ್​

‘ಭಾಷಣ ಚೆನ್ನಾಗಿ ಮಾಡ್ತೀರಾ’; ಬಿಗ್​ ಬಾಸ್​ ವೇದಿಕೆ ಮೇಲೆ ದಿವ್ಯಾ ಉರುಡುಗಗೆ ಸುದೀಪ್ ಎಚ್ಚರಿಕೆ

Published On - 8:18 pm, Wed, 23 June 21

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us