‘Drishyam 2’ box office day 2 collection: ಎರಡನೇ ದಿನವು ಗಳಿಕೆಯ ಓಟ ಮುಂದುವರೆಸಿದ ‘ದೃಶ್ಯಂ 2’, ಬಾಕ್ಸ್ ಆಫೀಸ್​ ಕಲೆಕ್ಷನ್​​​ ವಿವರ ಇಲ್ಲಿದೆ

ಅಜಯ್ ದೇವಗನ್ ನಟನೆಯ ‘ದೃಶ್ಯಂ 2’ ತೆರೆಕಂಡ​ ಮೊದಲ ದಿನವೇ 15.38 ಕೋಟಿ ರೂ. ಬಾಚಿಕೊಂಡಿತ್ತು. ಸದ್ಯ ಎರಡನೇ ದಿನ ಗಳಿಕೆಯ ವರದಿ ಬಂದಿದೆ.

Drishyam 2 box office day 2 collection: ಎರಡನೇ ದಿನವು ಗಳಿಕೆಯ ಓಟ ಮುಂದುವರೆಸಿದ ‘ದೃಶ್ಯಂ 2’, ಬಾಕ್ಸ್ ಆಫೀಸ್​ ಕಲೆಕ್ಷನ್​​​ ವಿವರ ಇಲ್ಲಿದೆ
Drishyam 2
Updated By: ಗಂಗಾಧರ​ ಬ. ಸಾಬೋಜಿ

Updated on: Nov 20, 2022 | 1:55 PM

ನಟ ಅಜಯ್ ದೇವಗನ್ (Ajay Devgn) ನಟನೆಯ ‘ದೃಶ್ಯಂ 2’ (Drishyam 2) ಚಿತ್ರ ನವೆಂಬರ್ 18ರಂದು ರಿಲೀಸ್ ಆಗಿತ್ತು. ತೆರೆಕಂಡ​ ಮೊದಲ ದಿನವೇ ‘ದೃಶ್ಯಂ 2’ ಚಿತ್ರ 15.38 ಕೋಟಿ ರೂ. ಬಾಚಿಕೊಂಡಿತ್ತು. ಸದ್ಯ ಎರಡನೇ ದಿನದ ಗಳಿಕೆಯ ವಿವರ ಹೊರಬಿದ್ದಿದ್ದು 21.59 ಕೋಟಿ ರೂ. ಗಳಿಸಿದೆ. ಅಲ್ಲಿಗೆ ‘ದೃಶ್ಯಂ 2’ ಚಿತ್ರದ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ 36.97 ಕೋಟಿ ರೂ. ಎನ್ನಲಾಗುತ್ತಿದೆ. ಅಭಿಷೇಕ್ ಪಾಠಕ್ ನಿರ್ದೇಶನದ ‘ದೃಶ್ಯಂ 2’ ಚಿತ್ರದಲ್ಲಿ ಅಜಯ್ ದೇವಗನ್, ಟಬು, ಇಶಿತಾ ದತ್ತಾ, ಅಕ್ಷಯ್ ಖನ್ನಾ, ರಜತ್ ಕಪೂರ್ ಮತ್ತು ಶ್ರಿಯಾ ಶರನ್ ನಟಿಸಿದ್ದಾರೆ.

ರಿಲೀಸ್​ ಆದ ಎರಡನೇ ದಿನಕ್ಕೆ 21.59 ಕೋಟಿ ರೂ. ಗಳಿಕೆ

‘ದೃಶ್ಯಂ 2’ ಚಿತ್ರದ ಗಳಿಕೆ​ ಮಾಹಿತಿಯನ್ನು ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ‘ದೃಶ್ಯಂ 2’ ಬಾಕ್ಸ್ ಆಫೀಸ್‌ನಲ್ಲಿ ಎರಡನೇ ದಿನ 21.59 ಕೋಟಿ ರೂ. ಸಂಗ್ರಹಿಸಿದೆ ಎಂದು ಬಹಿರಂಗಪಡಿಸಿದ್ದಾರೆ. ಎಲ್ಲಾ ಅಂದಾಜು ಲೆಕ್ಕಾಚಾರಗಳ ಪ್ರಕಾರ ‘ದೃಶ್ಯಂ 2’ ಎರಡನೇ ದಿನದಂದು ತನ್ನ ಗಳಿಕೆ ಓಟವನ್ನು ಮುಂದುವರೆಸಿದೆ. ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಗಮನಾರ್ಹವಾದ ಕಮಾಯಿ ಮಾಡುತ್ತಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಕೂಡ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಮೊದಲನೇ ದಿನ ₹ 15.38 ಕೋಟಿ ರೂ, ಶನಿವಾರ ₹ 21.59 ಕೋಟಿ ರೂ, ಒಟ್ಟಾರೆ ಕಲೆಕ್ಷನ್ 36.97 ಕೋಟಿ ರೂ. ಎಂದು ತರಣ್ ಆದರ್ಶ್ ಅವರು ತಿಳಿಸಿದ್ದಾರೆ.

‘ದೃಶ್ಯಂ’ ಚಿತ್ರದ ಮೊದಲ ಭಾಗದಲ್ಲಿ ಒಂದು ಕೊಲೆ ನಡೆಯುತ್ತದೆ. ಕಥಾ ನಾಯಕ ಆ ಕೊಲೆಯನ್ನು ಮುಚ್ಚಿ ಹಾಕುತ್ತಾನೆ. ಎರಡನೇ ಪಾರ್ಟ್​​ನಲ್ಲಿ ಈ ಕೊಲೆ ಪ್ರಕರಣ ರೀ-ಓಪನ್ ಆಗುತ್ತದೆ. ಅದರಿಂದ ಹೀರೋ ಹೇಗೆ ತಪ್ಪಿಸಿಕೊಳ್ಳುತ್ತಾನೆ ಅನ್ನೋದು ದ್ವಿತೀಯಾರ್ಧ ಚಿತ್ರದ ಹೈಲೈಟ್. ಸದ್ಯ ಚಿತ್ರವನ್ನು ನೋಡಿದ ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ​ ಸಾಲು ಸಾಲು ಬಾಲಿವುಡ್ ಸಿನಿಮಾಗಳು ಸೋಲು ಕಾಣುತ್ತಿವೆ. ಬೆರಳೆಣಿಕೆ ಚಿತ್ರಗಳು ಮಾತ್ರ ಗೆದ್ದಿವೆ. ‘ಬ್ರಹ್ಮಾಸ್ತ್ರ’ ಸೇರಿ ಕೆಲವೇ ಕೆಲವು ಚಿತ್ರಗಳು ನೂರು ಕೋಟಿ ರೂಪಾಯಿ ಕ್ಲಬ್ ಸೇರಿವೆ. ಈಗ ‘ದೃಶ್ಯಂ 2’ ಚಿತ್ರಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ನೋಡಿದರೆ ಸಿನಿಮಾ ಇನ್ನು ಒಳ್ಳೆಯ ಗಳಿಕೆ ಮಾಡುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.

ಮತ್ತಷ್ಟು ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 1:54 pm, Sun, 20 November 22