‘ಬೆತ್ಲೆಹೆಮ್ ಕುಟುಂಬ ಯುನಿಟ್’ ಸಿನಿಮಾದಿಂದಾಗಿ ಬಿಡುಗಡೆ ಆಗುತ್ತಿದೆ 31 ವರ್ಷ ಹಳೆಯ ಸಿನಿಮಾ

ಇತ್ತೀಚೆಗಷ್ಟೆ ಬಿಡುಗಡೆ ಆದ ಮಲಯಾಳಂ ಸಿನಿಮಾ ‘ಬೆತ್ಲೆಹೇಮ್ ಕುಟುಂಬ ಯುನಿಟ್’ ಚಿತ್ರಮಂದಿರಗಳಲ್ಲಿ ದೊಡ್ಡ ಹಿಟ್ ಆಗಿತ್ತು. 300 ಕೋಟಿ ಹೆಚ್ಚು ಮೊತ್ತ ಗಳಿಕೆ ಮಾಡಿತ್ತು. ಒಟಿಟಿಗೆ ಬಿಡುಗಡೆ ಆಗಿ ಅಲ್ಲಿಯೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೀಗ ಈ ಸಿನಿಮಾದಿಂದಾಗಿ 31 ವರ್ಷಗಳ ಹಿಂದೆ ನಿಂತು ಹೋಗಿದ್ದ ಮಲಯಾಳಂ ಸಿನಿಮಾ ಒಂದಕ್ಕೆ ಮರುಜೀವ ದೊರೆತಿದೆ.

‘ಬೆತ್ಲೆಹೆಮ್ ಕುಟುಂಬ ಯುನಿಟ್’ ಸಿನಿಮಾದಿಂದಾಗಿ ಬಿಡುಗಡೆ ಆಗುತ್ತಿದೆ 31 ವರ್ಷ ಹಳೆಯ ಸಿನಿಮಾ
Anna Malayalam Movie

Updated on: Oct 11, 2026 | 5:12 PM

ಒಂದು ಸಿನಿಮಾ ಹಿಟ್ ಆದರೆ ಅದು ಹಲವು ಹೊಸ ಸಂಗತಿಗಳಿಗೆ ದಾರಿ ಮಾಡಿಕೊಡುತ್ತದೆ. ಇನ್ನಷ್ಟು ಹೊಸಬರಿಗೆ ಸಿನಿಮಾ ಮಾಡಲು ಪ್ರೇರೇಪಣೆ ಒದಗಿಸುತ್ತದೆ. ನಿರ್ಮಾಪಕರಿಗೆ ಧೈರ್ಯ ತುಂಬುತ್ತದೆ. ಹಲವು ಹೊಸ ಸಿನಿಮಾಗಳ ಜೊತೆಗೆ ಕೆಲ ಹಳೆಯ ಸಿನಿಮಾಗಳಿಗೂ ಮರು ಜೀವ ನೀಡುತ್ತದೆ. ಇತ್ತೀಚೆಗಷ್ಟೆ ಬಿಡುಗಡೆ ಆದ ಮಲಯಾಳಂ ಸಿನಿಮಾ ‘ಬೆತ್ಲೆಹೇಮ್ ಕುಟುಂಬ ಯುನಿಟ್’ ಚಿತ್ರಮಂದಿರಗಳಲ್ಲಿ ದೊಡ್ಡ ಹಿಟ್ ಆಗಿತ್ತು. 300 ಕೋಟಿ ಹೆಚ್ಚು ಮೊತ್ತ ಗಳಿಕೆ ಮಾಡಿತ್ತು. ಒಟಿಟಿಗೆ ಬಿಡುಗಡೆ ಆಗಿ ಅಲ್ಲಿಯೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೀಗ ಈ ಸಿನಿಮಾದಿಂದಾಗಿ 31 ವರ್ಷಗಳ ಹಿಂದೆ ನಿಂತು ಹೋಗಿದ್ದ ಮಲಯಾಳಂ ಸಿನಿಮಾ ಒಂದಕ್ಕೆ ಮರುಜೀವ ದೊರೆತಿದೆ.

ಯಾವುದೇ ಚಿತ್ರರಂಗಗಳಲ್ಲಿ ಸಿನಿಮಾಗಳು ನಿಂತು ಹೋಗುವುದು ಹೊಸ ವಿಷಯವೇನಲ್ಲ. ಎಷ್ಟೋ ದೊಡ್ಡ ದೊಡ್ಡ ನಟರ ಸಿನಿಮಾಗಳೇ ಚಿತ್ರೀಕರಣ ಆರಂಭವಾಗಿ ನಿಂತು ಹೋದ ಉದಾಹರಣೆಗಳಿವೆ. ಆದರೆ ಇದೀಗ 31 ವರ್ಷದ ಬಳಿಕ ಬೇರೊಂದು ಹಿಟ್ ಸಿನಿಮಾ ಕಾರಣಕ್ಕೆ ನಿಂತು ಹೋದ ಸಿನಿಮಾಕ್ಕೆ ಮರು ಜೀವ ಸಿಕ್ಕಿರುವುದು ಅಪರೂಪದ ಘಟನೆ. ‘ಬೆತ್ಲೆಹೇಮ್ ಕುಟುಂಬ ಯೂನಿಟ್’ ಸಿನಿಮಾದ ಯಶಸ್ಸಿನಿಂದಾಗಿ 31 ವರ್ಷಗಳ ಹಿಂದೆ ನಿಂತು ಹೋಗಿದ್ದ ‘ಅನ್ನಾ’ ಸಿನಿಮಾಕ್ಕೆ ಮರು ಜೀವ ದೊರೆತಿದೆ. ಅದು ಹೇಗೆ? ಮಾಹಿತಿ ಇಲ್ಲಿದೆ…

31 ವರ್ಷಗಳ ಹಿಂದೆ ತಮಿಳಿನ ನಟ ಅರವಿಂದ ಸ್ವಾಮಿ ಮತ್ತು ಶ್ರೀದೇವಿ ಅವರು ಒಟ್ಟಿಗೆ ‘ಅನ್ನಾ’ ಹೆಸರಿನ ಮಲಯಾಳಂ ಸಿನಿಮಾನಲ್ಲಿ ನಟನೆ ಮಾಡಿದ್ದರು. ಹರಿ ಎಂಬ ಬ್ರಾಹ್ಮಣ ಯುವಕ, ಅನ್ನಾ ಹೆಸರಿನ ಕ್ರಿಶ್ಚಿಯನ್ ಯುವತಿಯ ನಡುವಿನ ಪ್ರೇಮಕತೆಯನ್ನು ಒಳಗೊಂಡ ಸಿನಿಮಾ ಅದಾಗಿತ್ತು. ಸಿನಿಮಾದ ಹಲವು ಭಾಗಗಳ ಚಿತ್ರೀಕರಣ ಮುಗಿದಿತ್ತು. ಸಿನಿಮಾಕ್ಕಾಗಿ ಸುಂದರವಾದ ಹಾಡುಗಳ ರೆಕಾರ್ಡ್ ಸಹ ಮಾಡಲಾಗಿತ್ತು. ಆದರೆ ಅನಿವಾರ್ಯ ಕಾರಣದಿಂದ ಸಿನಿಮಾ ನಿಂತು ಹೋಗಿತ್ತು. ಆ ಸಿನಿಮಾಕ್ಕಾಗಿ ರೆಕಾರ್ಡ್ ಮಾಡಲಾಗಿದ್ದ ‘ಯವನಕಾತಯಿಲ್’ ಎಂಬ ಹಾಡನ್ನು ‘ಬೆತ್ಲೆಹೇಮ್ ಕುಟುಂಬ ಯುನಿಟ್’ ಸಿನಿಮಾನಲ್ಲಿ ಬಳಕೆ ಮಾಡಲಾಗಿದೆ.

ಇದನ್ನೂ ಓದಿ:‘ಲಾರ್ಡ್ ಗಾಗ’ ಸಿನಿಮಾದ ಫಸ್ಟ್ ಲುಕ್, ಮೋಶನ್ ಪೋಸ್ಟರ್ ಬಿಡುಗಡೆ

ಸಿನಿಮಾದ ಜೊತೆಗೆ ಆ ಹಾಡೂ ಸಹ ದೊಡ್ಡ ಹಿಟ್ ಆಗಿದ್ದು, ಹಾಡಿನ ಕಾರಣಕ್ಕಾಗಿ ಈಗ ‘ಅನ್ನಾ’ ಸಿನಿಮಾದ ಬಗ್ಗೆ ಪ್ರೇಕ್ಷಕರಿಗೆ ಆಸಕ್ತಿ ಮೂಡಿದೆ. ಹಲವರು ‘ಅನ್ನಾ’ ಸಿನಿಮಾದ ಬಗ್ಗೆ ವಿಚಾರಿಸುತ್ತಿದ್ದು ಆ ಸಿನಿಮಾ ಅನ್ನು ರಿಲೀಸ್ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಬೇಡಿಕೆ ಸಹ ಇರಿಸಿದ್ದಾರೆ. ಸಿನಿಮಾಕ್ಕೆ ಉಂಟಾಗಿರುವ ಬೇಡಿಕೆ ಗಮನಿಸಿದ ನಿರ್ಮಾಪಕ ಟಾಮಿಚನ್, ‘ಅನ್ನಾ’ ಸಿನಿಮಾದ ಹಕ್ಕುಗಳನ್ನು ಖರೀದಿ ಮಾಡಿದ್ದಾರೆ. ಆ ಸಿನಿಮಾವನ್ನು ಇದೀಗ ಮತ್ತೆ ನಿರ್ಮಿಸುವುದಾಗಿ ಅವರು ಹೇಳಿದ್ದಾರೆ.

ಹೊಸ ಬರಹಗಾರರ ಮೂಲಕ ಆ ಚಿತ್ರದ ಕಥೆ ಮತ್ತು ಅದಕ್ಕೆ ಸಂಬಂಧಿಸಿದ ನೆನಪುಗಳನ್ನು ಹೊಸ ಪೀಳಿಗೆಗೆ ತಲುಪಿಸುವ ಆಸೆಯಿಂದ ತಾನು ‘ಅನ್ನಾ’ ಚಿತ್ರದ ನಿರ್ಮಾಣದ ಹಕ್ಕುಗಳನ್ನು ಪಡೆದುಕೊಂಡಿರುವುದಾಗಿ ನಿರ್ಮಾಪಕ ಟಾಮಿಚನ್ ತಿಳಿಸಿದ್ದಾರೆ. ಮೂರು ದಶಕಗಳ ಹಿಂದೆ ಅರ್ಧಕ್ಕೆ ನಿಂತಿದ್ದ ಚಿತ್ರಕ್ಕೆ ಇದೊಂದು ಹೊಸ ಆರಂಭ. ನಿರ್ದೇಶಕರು ಮತ್ತು ನಟರು ಸೇರಿದಂತೆ ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಮುಳಕುಪ್ಪಡಂ ಫಿಲ್ಮ್ಸ್ ಮೂಲಕ ‘ಅನ್ನಾ’ ಬೆಳ್ಳಿತೆರೆಗೆ ಮರಳಲಿದೆ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us